(ನ್ಯೂಸ್ ಕಡಬ) newskadaba.com ಕಡಬ, ಜೂ. 30. ಕಳೆದ ವರ್ಷ ಕಡಬದಲ್ಲಿ ಆರಂಭಗೊಂಡು ಕಾರ್ಯಾಚರಿಸುತ್ತಿದ್ದ “ಝೆನ್ ಮಾರ್ಕ್” ಡಿಜಿಟಲ್ ಸೇವಾ ಕೇಂದ್ರ ಇದೀಗ ಸೇವಾ ಕೇಂದ್ರದ ಜೊತೆಗೆ ಕಂಪ್ಯೂಟರ್ ಕೋಚಿಂಗ್ ಸೆಂಟರ್, ಎಜುಕೇಷನ್ ಕನ್ಸಲ್ಟೆಂಟ್ಸ್ ಸ್ಥಳಾಂತರಗೊಂಡು ಕಡಬ ಬಸ್ ನಿಲ್ದಾಣದ ಎದುರುಗಡೆ ತುಳಸಿ ಸ್ಟುಡಿಯೋ ಪಕ್ಕದಲ್ಲಿ ಉದ್ಘಾಟನೆಗೊಂಡಿತು.
‘ಸಾರ್ವಜನಿಕರಿಗೆ ಅತ್ಯವಶ್ಯವಾದ ಹತ್ತು ಹಲವಾರು ಸೇವೆಗಳು ನಮ್ಮ ಕೇಂದ್ರದಲ್ಲಿ ಸಿಗುತ್ತವೆ. ನಮ್ಮಲ್ಲಿ ಆಧಾರ್ ಕಾರ್ಡ್, ಪಾಸ್ ಪೋರ್ಟ್, ಪಾನ್ ಕಾರ್ಡ್ ಇನ್ನಿತರ ಸೌಲಭ್ಯಗಳಿದ್ದು, ಜೊತೆಗೆ ಸ್ವ-ಉದ್ಯೋಗ, ಶಿಕ್ಷಣ, ನಾಗರಿಕ ಸೇವಾ ಪರೀಕ್ಷೆ ಮಾಹಿತಿ, ವಿಕಾಸದಂತಹ ಸಮಾಜಮುಖಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿದ್ದೇವೆ. ಇದರಿಂದ ಗ್ರಾಮೀಣ ಜನರ ಆರ್ಥಿಕ ಸಬಲತೆ ನಮ್ಮ ಆಶಯವಾಗಿದೆ. ಮುಂದಿನ ದಿನಗಳಲ್ಲಿ ಸಿಇಟಿ, ನೀಟ್ ಕೋಚಿಂಗ್ ನಡೆಯಲಿದೆ.
ಕಂಪ್ಯೂಟರ್ ಟೀಚಿಂಗ್ ಕಲಿಸಲು ನುರಿತ ಮಹಿಳಾ ಅಭ್ಯರ್ಥಿಗಳು ಬೇಕಾಗಿದ್ದು, ಆಸಕ್ತರು 9741325159 ಈ ಸಂಖ್ಯೆಗೆ ಸಂಪರ್ಕಿಸಬಹುದು ಎಂದು ಮಾಲಕರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.









