ಸೌಂದರ್ಯವರ್ಧಕ ಉತ್ಪನ್ನಗಳ ಮೇಲೆ ಸಮರಕ್ಕೆ ಮುಂದಾದ ಔಷಧ ಇಲಾಖೆ- ಎಲ್ಲಾ ಕಾಸ್ಮೆಟಿಕ್ಸ್ ಗಳ ಪರೀಕ್ಷೆಗೆ ಸೂಚನೆ



(ನ್ಯೂಸ್ ಕಡಬ) newskadaba.com ಜೂ. 30. ಇತ್ತೀಚಿನ ದಿನಗಳಲ್ಲಿ ಕಾಸ್ಮೆಟಿಕ್ ಗಳು ಆರೋಗ್ಯಕ್ಕೆ ಹಾನಿಕಾರಕವಾಗುತ್ತಿದ್ದು, ಯುವಕ-ಯುವತಿಯರಂತೂ ತಕ್ಷಣಕ್ಕೆ ಮುಖ ಹೊಳಪು ಬರಬೇಕು ಅಂತಾ ಹಿಂದೆ ಮುಂದೆ ನೋಡದೆ ಸ್ಟೀರಾಯ್ಡ್ ಬೇಸ್ ಕ್ರೀಮ್‌ ಗಳನ್ನ ಹೆಚ್ಚಾಗಿ ಬಳಕೆ ಮಾಡುತ್ತಿದ್ದಾರೆ.







 

ಕಳೆದ ವಾರವಷ್ಟೇ ಕುಂಕುಮ, ಪ್ಯಾರಸಿಟಮೋಲ್ ಸೇರಿ 15 ಔಷಧಗಳನ್ನು ನಿರ್ಬಂಧ ಮಾಡಿ ಸರಕಾರ ಆದೇಶಿಸಿತ್ತು. ಇದೀಗ ಅನೇಕ ಕಾಸ್ಮೆಟಿಕ್ಸ್‌ ಗಳ ಮೇಲೆ ಕಣ್ಣಿಟ್ಟಿರುವ ಔಷಧ ನಿಯಂತ್ರಣ ಇಲಾಖೆ, ಮತಷ್ಟು ಸೌಂದರ್ಯ ವರ್ಧಕಗಳ ಸ್ಯಾಂಪಲ್ಸ್ ಗೆ ಮುಂದಾಗಿದೆ.






 

ಮುಖ ಹೊಳಪಿಗೆ ಬಳಸುವ ಫೋಲಿಕ್ ಆಸಿಡ್, ಸ್ಟೀರಾಯಿಡ್ ಬೇಸ್ ಕ್ರೀಮ್, ವಿಟಮಿನ್ ಡಿ, ಸಿ ಕ್ರೀಮ್, ಸಿರಮ್ ಗಳು ಗುಣಮಟ್ಟದ್ದಲ್ಲ ಅನ್ನೋದು ಈಗ ಸಾಬೀತಾಗಿದೆ. ಅನೇಕ ಜನರು ಮುಖದ ಕಾಂತಿ ಹೆಚ್ಚಿಸುವುದಕ್ಕೆ ವಿಟಮಿನ್ ಸಿ ಗಳ ಸೀರಮ್ ಕ್ರೀಮ್‌, ಸನ್‌ ಸ್ಕ್ರೀನ್ ಕ್ರೀಮ್‌ ಗಳನ್ನ ಬಳಸುತ್ತಾರೆ. ಅದರಲ್ಲೂ ಫೋಲಿಕ್ ಆಸಿಡ್, ವಿಟಮಿನ್ ಒಳಗೊಂಡಿರುವ ಲಿಕ್ವಿಡ್ ಕ್ರೀಮ್ ಬಳಸಲಾಗುತ್ತಿದೆ. ಆದರೆ ಅನೇಕ ಕ್ರೀಮ್‌ಗಳು ಕಳಪೆ ಗುಣಮಟ್ಟದ್ದಾಗಿವೆ.

ಈ ಹಿನ್ನೆಲೆ ಕಾಂತಿವರ್ಧಕ ಉತ್ಪನ್ನಗಳ ಮೇಲೆ ಆಹಾರ ಸುರಕ್ಷತ ಔಷಧ ಇಲಾಖೆ ಸಮರ ಸಾರಿದೆ. ಇನ್ಮುಂದೆ ಎಲ್ಲಾ ಕಾಸ್ಮೆಟಿಕ್ಸ್ ಗಳ ಪರೀಕ್ಷೆಗೆ ಆದೇಶ ಮಾಡಲಾಗಿದ್ದು, ಬಾಡಿಲೋಷನ್, ಲಿಪ್ಸ್ಟಿಕ್, ಕ್ರೀಮ್, ಸೇರಿದಂತೆ ಎಲ್ಲವೂ ಪರೀಕ್ಷೆಗೆ ಒಳಪಡಲಿದೆ. ಈ ಬಗ್ಗೆ ಲಿಸ್ಟ್ ತಯಾರಿಸಿರುವ ಇಲಾಖೆ, ಈಗಾಗಲೇ ಅಧಿಕಾರಿಗಳಿಗೆ ಯಾವೆಲ್ಲಾ ಕಾಂತಿವರ್ಧಕಗಳನ್ನ ಪರೀಕ್ಷೆಗೆ ಒಳಪಡಿಸಬೇಕೆಂದು ಸೂಚನೆ ನೀಡಿದೆ. ಎಲ್ಲಾ ಬ್ರಾಂಡೆಡ್ ಗಳ ಕಾಂತಿವರ್ಧಕಗಳು ಪರೀಕ್ಷೆಗೆ ಒಳಪಡಿಸಲಿದ್ದು, ಹೊಸ ಆ್ಯಕ್ಟ್ ಮೂಲಕ ಕಾಸ್ಮೆಟಿಕ್ಸ್ ಗಳ ಮೇಲೆ ನಿಯಂತ್ರಣಕ್ಕೆ ಮುಂದಾಗಿದೆ.

ಈ ರೀತಿಯ ಕಳಪೆ ಗುಣಮಟ್ಟದ ಉತ್ಪನ್ನಗಳ ಬಳಕೆಯಿಂದ ತ್ವಚೆಗೆ ಹಾನಿ ಉಂಟಾಗುವುದು ಎಂದು ಚರ್ಮ ರೋಗದ ತಜ್ಞರೋರ್ವರು ಹೇಳಿದ್ದಾರೆ.

ಒಟ್ಟಿನಲ್ಲಿ ಆಹಾರ ಸುರಕ್ಷತಾ ಹಾಗೂ ಔಷಧ ನಿಯಂತ್ರಣ ಇಲಾಖೆ ಕಳಪೆ ಗುಣಮಟ್ಟದ ಕಾಸ್ಮೆಟಿಕ್ಸ್‌ ಹಾಗೂ ತಿನಿಸುಗಳ ಮಾರಾಟರಗಾರರಿಗೆ ಬಿಸಿ ಮುಟ್ಟಿಸಲು ಮುಂದಾಗಿದ್ದು, ಮುಂದಿನ ದಿನದಲ್ಲಿ ಹೊಸ ಕಾಸ್ಮೆಟಿಕ್ಸ್ ಆ್ಯಕ್ಟ್ ರೂಪಿಸಲು ಇಲಾಖೆ ಮುಂದಾಗಿದೆ.

error: Content is protected !!
Scroll to Top