(ನ್ಯೂಸ್ ಕಡಬ) newskadaba.com ಜೂ. 28. ವೃತ್ತಿಪರ ಕೋರ್ಸ್ ಗಳಿಗೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರದ (ಕೆ.ಇ.ಎ.) ಮುಖಾಂತರ 2025-26ನೇ ಸಾಲಿನ ಪ್ರವೇಶ ಬಯಸುವ ವಿದ್ಯಾರ್ಥಿಗಳಿಗೆ ಪ್ರವೇಶ ಪ್ರಕ್ರಿಯೆಗೆ ಕುರಿತಂತೆ ಅರಿವು ಮೂಡಿಸುವ ಸಂಬಂಧ ವಿದ್ಯಾರ್ಥಿಗಳಿಗೆ ಯು.ಜಿ.ಸಿ.ಇ.ಟಿ. ಕೌನ್ಸೆಲಿಂಗ್ ಕುರಿತು ತಿಳುವಳಿಕೆ ನೀಡಲು ಜೂನ್ 28ರಂದು ಬೆಳಿಗ್ಗೆ 9.30ರಿಂದ ಮಧ್ಯಾಹ್ನ 1.30 ರವರೆಗೆ ನಗರದ ಕರ್ನಾಟಕ (ಸರ್ಕಾರಿ) ಪಾಲಿಟೆಕ್ನಿಕ್(ಕೆ.ಪಿ.ಟಿ)ನಲ್ಲಿ ಯು.ಜಿ.ಸಿ.ಇ.ಟಿ 2025 – ಸೀಟು ಹಂಚಿಕೆ ಮಂಥನ ಕಾರ್ಯಾಗಾರವನ್ನು ಕರ್ನಾಟಕ ಪರೀಕ್ಷಾ ಪ್ರಾಧಿಕಾರ (ಕೆ.ಇ.ಎ.) ರವರ ಸಹಕಾರದೊಂದಿಗೆ ಆಯೋಜಿಸಲಾಗಿದೆ.
ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಮುಖಾಂತರ ಪ್ರವೇಶ ಬಯಸುವ ಎಲ್ಲಾ ವಿದ್ಯಾರ್ಥಿಗಳು ಇದರ ಸದುಪಯೋಗ ಪಡೆದುಕೊಳ್ಳಬಹುದು.
ಹೆಚ್ಚಿನ ಮಾಹಿತಿಗೆ ಕರ್ನಾಟಕ (ಸರ್ಕಾರಿ) ಪಾಲಿಟೆಕ್ನಿಕ್ ಮಂಗಳೂರು ಕಛೇರಿಯ ದೂರವಾಣಿ ಸಂಖ್ಯೆ: 0824-2211636/3516910/ 3542476 ಸಂಪರ್ಕಿಸಬಹುದು ಎಂದು ಕೆ.ಪಿ.ಟಿ ಪ್ರಾಂಶುಪಾಲರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.









