ಸರ್ಕಾರಿ ಇಲಾಖೆಗಳಲ್ಲಿ ಕನ್ನಡ ಕಡ್ಡಾಯ- ತಪ್ಪಿದಲ್ಲಿ ಕಠಿಣ ಕ್ರಮ



(ನ್ಯೂಸ್ ಕಡಬ) newskadaba.com ಜೂ. 26. ಈಗಾಗಲೇ ರಾಜ್ಯದ ಅಂಗಡಿ ಮುಂಗಟ್ಟುಗಳ ನಾಮಫಲಕದಲ್ಲಿ 60% ಕನ್ನಡ ಕಡ್ಡಾಯ ಎಂಬ ಆದೇಶ ಚಾಲ್ತಿಯಲ್ಲಿದೆ. ಆದರೆ, ಇದು ಸಮರ್ಪಕವಾಗಿ ಇನ್ನೂ ಜಾರಿಯಾಗಿಲ್ಲ. ಹೀಗಿರುವಾಗಲೇ ರಾಜ್ಯ ಸರ್ಕಾರ ರಾಜ್ಯದ ಎಲ್ಲಾ ಇಲಾಖೆಗಳಲ್ಲಿಯೂ ಕನ್ನಡ ಕಡ್ಡಾಯ ಎಂಬ ಸುತ್ತೋಲೆಯನ್ನು ಹೊರಡಿಸಿದೆ.







ಆದೇಶದ ಜೊತೆಗೆ ಈ ನಿಯಮವನ್ನು ಉಲ್ಲಂಘನೆ ಮಾಡಿದವರ ವಿರುದ್ಧ ಕಠಿಣ ಕಾನೂನು ಕ್ರಮ ತೆಗೆದುಕೊಳ್ಳುವ ಎಚ್ಚರಿಕೆಯನ್ನೂ ಸರ್ಕಾರ ನೀಡಿದೆ.






 

ಈ ನಿಯಮಾನುಸಾರ ಕನ್ನಡದಲ್ಲಿ ಬರುವ ಪತ್ರಗಳಿಗೆ ಕನ್ನಡದಲ್ಲೇ ಉತ್ತರ ನೀಡುವಂತೆ ಸೂಚಿಸಲಾಗಿದೆ. ಕಚೇರಿಯ ನಾಮಪತ್ರಗಳು ಕನ್ನಡದಲ್ಲೇ ನಮೂದಾಗಬೇಕು. ಸರ್ಕಾರದ ಎಲ್ಲಾ ಇಲಾಖೆಗಳ ಸುತ್ತೋಲೆಯನ್ನು ಕನ್ನಡದಲ್ಲೇ ಹೊರಡಿಸಬೇಕಿದೆ. ಆದೇಶ ಪ್ರತಿಗಳೂ ಸಹ ಕನ್ನಡದಲ್ಲೇ ಇರಬೇಕು ಎಂದು ಸೂಚಿಸಲಾಗಿದೆ.

error: Content is protected !!
Scroll to Top