ಇಂಜಿನಿಯರಿಂಗ್ ಸೀಟುಗಳ ಅಕ್ರಮ ಹಂಚಿಕೆ- ಇಡಿ ದಾಳಿ

(ನ್ಯೂಸ್ ಕಡಬ) newskadaba.com ಜೂ. 26. ಅಕ್ರಮವಾಗಿ ಇಂಜಿನಿಯರಿಂಗ್ ಸೀಟ್ ಗಳನ್ನು ಹಣ ಪಡೆದು ಹಂಚಿಕೆ ಮಾಡುತ್ತಿದ್ದ ಆರೋಪದಡಿಯಲ್ಲಿ ರಾಜ್ಯದ 18 ಸ್ಥಳಗಳ ಮೇಲೆ ಇಡಿ ದಾಳಿ ನಡೆಸಿರುವ ಕುರಿತು ವರದಿಯಾಗಿದೆ.

 

2024-25ನೇ ಸಾಲಿನ ಅಕ್ರಮ ಸೀಟು ಹಂಚಿಕೆಗಳ ಕುರಿತಾಗಿ ಮಲ್ಲೇಶ್ವರಂ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾದ ಹಿನ್ನೆಲೆ ಇಡಿ ಅಧಿಕಾರಿಗಳು ದಾಳಿ ನಡೆಸಿದ್ದು, ಶೋಧ ಕಾರ್ಯ ನಡೆಯುತ್ತಿದೆ.

 

ಬೆಂಗಳೂರಿನ ಆಕಾಶ್ ಇನ್ಸ್ಟಿಟ್ಯೂಟ್ ಆಫ್ ಇಂಜಿನಿಯರಿಂಗ್ ಹಾಗೂ ಬಿಎಂಎಸ್ ಕಾಲೇಜುಗಳ ಮೇಲೂ ದಾಳಿ ನಡೆದಿರುವುದಾಗಿ ವರದಿಯಾಗಿದೆ.

Scroll to Top