ಕಡಬ ವಲಯದ ಶೌರ್ಯ ಘಟಕದ ವತಿಯಿಂದ ಪಿಜಕಳ ಪ್ರಾಥಮಿಕ ಶಾಲೆಯಲ್ಲಿ ಶ್ರಮದಾನ



(ನ್ಯೂಸ್ ಕಡಬ) newskadaba.com ಜೂ. 23. ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಕಡಬ ತಾಲೂಕು ಕಡಬ ವಲಯದ ಶೌರ್ಯ ಘಟಕದ ವತಿಯಿಂದ ಸರಕಾರಿ ಕಿರಿಯ ಪ್ರಾಥಮಿಕ ಶಾಲೆ ಪಿಜಕಳದಲ್ಲಿ ಶ್ರಮದಾನ ನಡೆಯಿತು.







ಈ ಸಂದರ್ಭದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ದ. ಕ. ಜಿಲ್ಲೆಯ ಮಾನ್ಯ ‌ನಿರ್ದೇಶಕರಾದ ಬಾಬು ನಾಯ್ಕರವರು, ತಾಲೂಕಿನ ಯೋಜನಾಧಿಕಾರಿಗಳಾದ ಪ್ರಕಾಶ್ ಕುಮಾರ್ ಮತ್ತು ಕಡಬ ವಲಯದ ಶೌರ್ಯ ವಿಪತ್ತು ಘಟಕದ ಸೇವಾ ಕಾರ್ಯದ ಬಗ್ಗೆ ಪರಿಶೀಲಿಸಿ ಮಾಹಿತಿ ಮಾರ್ಗದರ್ಶನ ನೀಡಿದರು.






ಕಾರ್ಯಕ್ರಮದಲ್ಲಿ ಶಾಲಾ ಮುಖ್ಯ ಗುರುಗಳಾದ ವೆಂಕಟರಮಣ.ಕೆ, ಶಿಕ್ಷಕ ವೃಂದದವರು, ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷರಾದ ಅಶ್ರಫ್, ಸದಸ್ಯರಾದ ದಯಾನಂದ ಗೌಡ ಪಿ, ಸೇವಾಪ್ರತಿನಿಧಿ ನಳಿನಿ ಮೊದಲಾದವರು ಉಪಸ್ಥಿತರಿದ್ದರು.

ಧರ್ಮಸ್ಥಳ ಶೌರ್ಯ ತಂಡದ ಸದಸ್ಯರಾದ ಧನಂಜಯ, ಮುರಳಿ, ವೇಣುಗೋಪಾಲ, ಲೋಕೇಶ್, ಆನಂದ ಪಿ, ಲಲಿತಾ, ಆನಂದ ಕೆ, ಉಮೇಶ್, ದಯಾನಂದ, ನಳಿನಿ ಪಿ ಶಾಲೆಯ ಮೇಲ್ಚಾವಣಿ ರಿಪೇರಿ ಮಾಡುವುದರ ಮುಖಾಂತರ ಶ್ರಮದಾನದಲ್ಲಿ ಭಾಗವಹಿಸಿದರು.

error: Content is protected !!
Scroll to Top