(ನ್ಯೂಸ್ ಕಡಬ) newskadaba.com ಜೂ. 21. ವ್ಯಕ್ತಿಯೊಬ್ಬರು ತನ್ನ ಖಾಸಗಿ ಜಾಗದಲ್ಲಿ ನೆಟ್ಟಿದ್ದ ಶ್ರೀಗಂಧದ ಮರಗಳನ್ನು ಕಳವುಗೈದಿರುವ ಘಟನೆ ಕಾರ್ಕಳ ತಾಲೂಕಿನ ನಿಟ್ಟೆ ಗ್ರಾಮದ ಹೇನೊಟ್ಟು ಎಂಬಲ್ಲಿ ನಡೆದಿದೆ.
ನಿಟ್ಟೆಯ ದಿನೇಶ್ ಎಂಬವರು ತಮ್ಮ ಜಾಗದಲ್ಲಿ 225 ಶ್ರೀಗಂಧದ ಸಸಿಗಳನ್ನು ನೆಟ್ಟಿದ್ದು, ಜೂ.16 ರಂದು ಬೆಳಿಗ್ಗೆ ತೋಟಕ್ಕೆ ಹೋಗಿ ನೋಡಿದಾಗ ಇದ್ದ ಮರಗಳು ಮರುದಿನ ಬೆಳಿಗ್ಗೆ ಹೋದಾಗ 4 ಲಕ್ಷ ರೂ. ಮೌಲ್ಯದ 9 ಶ್ರೀಗಂಧದ ಮರಗಳನ್ನು ಕಳವುಗೈದಿರುವುದು ಬೆಳಕಿಗೆ ಬಂದಿದೆ.
ಈ ಕುರಿತು ಕಾರ್ಕಳ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.









