ಪುಣ್ಚಪ್ಪಾಡಿ ಬೂತ್ ಬಿಜೆಪಿ ಸ್ಥಾಪನ ದಿನಾಚರಣೆ

(ನ್ಯೂಸ್ ಕಡಬ) newskadaba.com ಸವಣೂರು, ಎ.6. ಬಿ.ಜೆ.ಪಿ. ಬೆಳಂದೂರು ಮಹಾಶಕ್ತಿ ಕೇಂದ್ರದ ಪುಣ್ಚಪ್ಪಾಡಿ ಬೂತ್ ಸಂಖ್ಯೆ 68ರಲ್ಲಿ ಬಿಜೆಪಿ ಸ್ಥಾಪನಾ ದಿನಾಚರಣೆ ಮತ್ತು ಮಹಿಳಾ ಅಭಿಯಾನ ಎ.6ರಂದು ಪುಣ್ಚಪ್ಪಾಡಿ ಓಡಂತರ್ಯ ದಲ್ಲಿ ನಡೆಯಿತು.

ಸ್ಥಾಪನ ದಿನಾಚರಣೆಯ ಅಂಗವಾಗಿ ಪಕ್ಷದ ಧ್ವಜಾರೋಹಣ ಮಾಡಲಾಯಿತು. ಈ ಸಂದರ್ಭ ಪಕ್ಷದ ಬೂತ್ ಸಮಿತಿ ಅಧ್ಯಕ್ಷ ಪ್ರಕಾಶ್ ರೈ ಸಾರಕರೆ,ಬೆಳಂದೂರು ಶಕ್ತಿ ಕೇಂದ್ರದ ಮಾಜಿ ಅಧ್ಯಕ್ಷ ಮೋಹನ ದೇವಾಡಿಗ, ಸವಣೂರು ಗ್ರಾಮ ಪಂಚಾಯತ್ ಸದಸ್ಯ ನಾಗೇಶ್ ಓಡಂತರ್ಯ,ವಿಶಾಕ್ ರೈ ತೋಟದಡ್ಕ, ಧನರಾಜ್ ಓಡಂತರ್ಯ, ಶಶಿಧರ , ಚಂದಪ್ಪ, ಧನರಾಜ್, ರಮೇಶ್ ಮಡಿಕೇರಿ, ದೇವಪ್ಪ, ಆನಂದ ಸುರೇಶ್, ಮಾನಿಗೋ, ಭರತ್ ರಾಜ್ ಮೊದಲಾದವರಿದ್ದರು.

Scroll to Top