ಮಹಿಳೆಯರ ಹೆಸರಿನಲ್ಲಿ ನಕಲಿ ಖಾತೆ ತೆರೆದು ಅಶ್ಲೀಲ ಪೋಸ್ಟ್- ಓರ್ವ ಅರೆಸ್ಟ್..!

crime, arrest, suspected

(ನ್ಯೂಸ್ ಕಡಬ) newskadaba.com ಜೂ.17. ಮಹಿಳೆಯರ ಹೆಸರಿನಲ್ಲಿ ನಕಲಿ ಖಾತೆ ತೆರೆದು, ಮಾನಹಾನಿ ಉಂಟುಮಾಡುವ ಉದ್ದೇಶದಿಂದ ಅಶ್ಲೀಲ ವಿಷಯವನ್ನು ಪೋಸ್ಟ್‌ ಮಾಡಿದ ವ್ಯಕ್ತಿಯೋರ್ವನನ್ನು ಮುಂಬೈ ಪೊಲೀಸರು ಬಂಧಿಸಿರುವ ಘಟನೆ ಕರ್ನಾಟಕದ ಸಂಡೂರಿನಲ್ಲಿ ನಡೆದಿದೆ.

ಬಂಧಿತನನ್ನು ಶುಭಂ ಕುಮಾರ್‌ ಮನೋಜ್‌ ಪ್ರಸಾದ್‌ ಸಿಂಗ್‌ ಎಂದು ಗುರುತಿಸಲಾಗಿದೆ. ವಿದ್ಯಾರ್ಥಿನಿಯೋರ್ವಳು ತನ್ನ ಹೆಸರಿನಲ್ಲಿ ನಕಲಿ ಖಾತೆ ಮಾಡಿ ಅಶ್ಲೀಲ ಸಂದೇಶ ಹಾಗೂ ವಿಡಿಯೋಗಳನ್ನು ಪೋಸ್ಟ್‌ ಮಾಡುತ್ತಿರುವುದಾಗಿ ನೀಡಿದ ದೂರಿನನ್ವಯ ಗೂಗಲ್‌ನಿಂದ ತಾಂತ್ರಿಕ ಮಾಹಿತಿ ಕಲೆ ಹಾಕಿದ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ. ತನಿಖೆಯ ವೇಳೆ ಈತ ಮಹಿಳೆಯರ ಹೆಸರಿನಲ್ಲಿ 11 ನಕಲಿ ಖಾತೆಗಳನ್ನು, 100 ಕ್ಕೂ ಹೆಚ್ಚು ಇಮೇಲ್‌ ಐಡಿ ಸೃಷ್ಟಿ ಮಾಡಿರುವುದು ಕಂಡು ಬಂದಿದೆ. ಜೊತೆಗೆ ಮಹಿಳೆಯರ 13,500 ಸ್ಕ್ರೀನ್‌ ಶಾಟ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಈತ ಮಹಿಳೆಯರಿಗೆ ಕರೆ ಮಾಡಿ ನಗ್ನವಾಗಿ ವಿಡಿಯೋ ಕರೆ ಮಾಡು ಎಂದು ಕಿರುಕುಳ ನೀಡುತ್ತಿದ್ದ. ಅವರು ಒಪ್ಪದೇ ಇದ್ದಾಗ, ನಕಲಿ ಖಾತೆ ಸೃಷ್ಟಿ ಮಾಡಿ ಮಾನಹಾನಿ ಮಾಡುತ್ತಿದ್ದ ಎಂದು ಆರೋಪಿ ಹೇಳಿರುವುದಾಗಿ ಪೊಲೀಸರು ತಿಳಿಸಿದ್ದಾರೆ.

error: Content is protected !!
Scroll to Top