
(ನ್ಯೂಸ್ ಕಡಬ) newskadaba.com ಜೂ. 18. ಇನ್ನುಮುಂದೆ ಹೆದ್ದಾರಿಯಲ್ಲಿ ಯಾವುದೇ ತೊಂದರೆಯಿಲ್ಲದೇ ಪ್ರಯಾಣಕ್ಕೆ ಅನುಕೂಲವಾಗುವಂತೆ ಫಾಸ್ಟ್ಟ್ಯಾಗ್ ಆಧಾರಿತ ವಾರ್ಷಿಕ ಪಾಸ್ ಅನ್ನು ಪರಿಚಯಿಸುತ್ತಿರುವುದಾಗಿ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯವು ಬುಧವಾರದಂದು ಘೋಷಣೆ ಮಾಡಿದೆ.

ಈ ಕುರಿತು X ನಲ್ಲಿ ಪೋಸ್ಟ್ ಮಾಡಿದ ಕೇಂದ್ರ ಸಚಿವ ನಿತಿನ್ ಗಡ್ಕರಿ, 2025ರ ಆಗಸ್ಟ್ 15ರಿಂದ ಜಾರಿಗೆ ಬರುವಂತೆ ಒಂದು ವರ್ಷಕ್ಕೆ ಈ ಪಾಸ್ ನ ಬೆಲೆ 3,000 ರೂ.ಗಳಾಗಿರುತ್ತದೆ ಎಂದು ಹೇಳಿದ್ದಾರೆ. ಇತ್ತೀಚಿನ ಫಾಸ್ಟ್ಟ್ಯಾಗ್ ಪಾಸ್ ಕಾರುಗಳು, ಜೀಪ್ ಗಳು ಮತ್ತು ವ್ಯಾನ್ ಗಳಂತಹ ವಾಣಿಜ್ಯೇತರ ಖಾಸಗಿ ವಾಹನಗಳಿಗೆ ಮತ್ತು ಸಕ್ರಿಯಗೊಳಿಸಿದ ದಿನಾಂಕದಿಂದ ಒಂದು ವರ್ಷದವರೆಗೆ ಅಥವಾ 200 ಟ್ರಿಪ್ ಗಳವರೆಗೆ, ಯಾವುದು ಮೊದಲು ಬರುತ್ತದೆಯೋ ಅದರವರೆಗೆ ಮಾನ್ಯವಾಗಿರುತ್ತದೆ. ಟೋಲ್ ಗೆ ಸಂಬಂಧಿಸಿದ ದೂರುಗಳನ್ನು, ವಿಶೇಷವಾಗಿ 60 ಕಿಲೋಮೀಟರ್ ವ್ಯಾಪ್ತಿಯೊಳಗೆ ಇರುವ ಟೋಲ್ ಪ್ಲಾಜಾಗಳ ಬಳಿ ವಾಸಿಸುವ ಪ್ರಯಾಣಿಕರಿಗೆ, ಇದು ಸರಾಗಗೊಳಿಸುವ ಗುರಿಯನ್ನು ಹೊಂದಿದೆ.

ಫಾಸ್ಟ್ಯಾಗ್ ವಾರ್ಷಿಕ ಪಾಸ್ ನ್ನು ಹೇಗೆ ಪಡೆಯಬಹುದು ಎಂಬುವುದು ವಾರ್ಷಿಕ ಪಾಸ್ ರಾಜಮಾರ್ಗ್ ಯಾತ್ರಾ ಮೊಬೈಲ್ ಅಪ್ಲಿಕೇಶನ್ ಮೂಲಕ ಮತ್ತು ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ (NHAI) ಮತ್ತು ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯದ (MoRTH) ಅಧಿಕೃತ ವೆಬ್ ಸೈಟ್ ಗಳಲ್ಲಿ ಲಭ್ಯವಿರಲಿದೆ ಎಂದು ತಿಳಿಸಿದೆ.

