ಹಿರಿಯ ಕಾಂಗ್ರೆಸ್ ಕಾರ್ಯಕರ್ತ ಸುರೇಶ್ ಸಾಲಿಯಾನ್ ನಿಧನ

Death, deadbody, Waterfall


(ನ್ಯೂಸ್ ಕಡಬ) newskadaba.com ಜೂ. 18. ಕಾಂಗ್ರೆಸ್ ಹಿರಿಯ ಕಾರ್ಯಕರ್ತ, ಸಾಮೆತ್ತಡ್ಕ ನಿವಾಸಿ ಸುರೇಶ್ ಸಾಲಿಯಾನ್(65ವ.) ರವರು ಅಲ್ಪಕಾಲದ ಅನಾರೋಗ್ಯದಿಂದ ನಿಧನ ಹೊಂದಿದರು.







ಅನಾರೋಗ್ಯದ ನಿಮಿತ್ತ ಸುರೇಶ್ ಸಾಲಿಯಾನ್ ರವರನ್ನು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಅವರು ಅಸುನೀಗಿದ್ದಾರೆ. ಮೃತ ಸುರೇಶ್ ರವರು ದರ್ಬೆಯಲ್ಲಿ ಬಜಾಜ್ ಗ್ಯಾರೇಜ್ ನಲ್ಲಿ ಸೇವೆ ನೀಡುತ್ತಿದ್ದು, ಬಳಿಕ ಸಾಮೆತ್ತಡ್ಕ ದ್ವಿತೀಯ ಕ್ರಾಸ್ ನಲ್ಲಿ ಪಡಿತರ ಅಂಗಡಿಯನ್ನು ನಡೆಸುತ್ತಿದ್ದರು. ಸಾಮೆತ್ತಡ್ಕ ಕಾಂಗ್ರೆಸ್ ಬೂತ್ ಸಮಿತಿಯ ಸಕ್ರಿಯ ಸದಸ್ಯರಾಗಿ, ಪುತ್ತೂರು ಬ್ಲಾಕ್ ಕಾಂಗ್ರೆಸ್ ಸಂಘಟನಾ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸುತ್ತಿದ್ದರು. ಜೊತೆಗೆ ದ.ಕ ಗ್ಯಾರೇಜು ಮಾಲಕರ ಸಂಘ, ಪುತ್ತೂರು ತಾಲೂಕಿನ ಗೌರವಾಧ್ಯಕ್ಷರಾಗಿ ಸೇವೆಯನ್ನು ನೀಡುತ್ತಿದ್ದರು.






error: Content is protected !!
Scroll to Top