(ನ್ಯೂಸ್ ಕಡಬ) newskadaba.com ಕಡಬ, ಜೂ. 17. ಇಲ್ಲಿನ ಪ್ರಸಿದ್ಧ ವಸ್ತ್ರ ಮಳಿಗೆ ಪಿಲ್ಯ ಫ್ಯಾಶನ್ ಮತ್ತು ಪಿಲ್ಯ ಮ್ಯಾಚಿಂಗ್ ಸೆಂಟರ್ ವತಿಯಿಂದ 180 ದಿನ 180 ಬಹುಮಾನ ಪಿಲ್ಯ ಮೆಗಾ ಆಫರ್ ಬರೋಬ್ಬರಿ 35 ಲಕ್ಷ ದ ಬಹುಮಾನ ಗೆಲ್ಲುವ ಅವಕಾಶ ಆಯೋಜಿಸಲಾಗಿತ್ತು.
ಇದರಲ್ಲಿ ಮೇ 5 ರಂದು ನಡೆದ ಕೊನೆಯ ಬಂಪರ್ ಡ್ರಾ ದಲ್ಲಿ 0137 ಸಂಖ್ಯೆಯ ಮರ್ಧಾಳ ನಿವಾಸಿ ಮಹಿಳೆಯೋರ್ವರಿಗೆ ಒಲಿದು ಬಂದಿದೆ. ಉಳಿದಂತೆ 9 ಮಂದಿಗೆ ಸ್ಮಾರ್ಟ್ ಫೋನ್ 10 ಮಂದಿಗೆ ಚಿನ್ನದ ನಾಣ್ಯ 10 ಮಂದಿಗೆ ಮಿಕ್ಸರ್ ಗ್ರೈಂಡರ್ ಬಂದಿರುತ್ತವೆ. ಒಟ್ಟು 2 ಕಾರು, 2 ಬೈಕ್, 2 ಸ್ಕೂಟರ್, 60 ಚಿನ್ನದ ನಾಣ್ಯ, 27 ಸ್ಮಾರ್ಟ್ ಫೋನ್, 9ಎಲ್.ಇ.ಡಿ ಟಿವಿ, 9 ಫ್ರಿಡ್ಜ್, 10 ಇಂಡಕ್ಷನ್ ಸ್ಟವ್ , ಸೈಕಲ್ 10, ಟವರ್ ಫ್ಯಾನ್ 10, ಟ್ರೋಲಿ ಭ್ಯಾಗ್ 10, ಮಿಕ್ಸರ್ ಗ್ರೈಂಡರ್, 10 ಗೀಝರ್ ಸೇರಿ ಬರೋಬ್ಬರಿ 35ಲಕ್ಷದವರೆಗಿನ ಬಹುಮಾನ ಘೊಷಿಸಿದ್ದು ಗಮನಾರ್ಹ. ಇದೀಗ ಎಲ್ಲಾ 180 ಬಹುಮಾನ ನೀಡಿ ಯಶಸ್ವಿಯಾಗಿ ಮುಕ್ತಾಯವಾಗಿದೆ. ಉಳಿದಂತೆ ಗ್ರಾಹಕರಿಗೆ ಅಡ್ವಾನ್ಸ್ ವೋಚರ್ ನೀಡಿ 1000 ಮೊತ್ತದ ವಸ್ತ್ರ ಡಿಸೆಂಬರ್ 31ರ ವರೆಗೆ ಖರೀದಿಸಬಹುದಾದ ಅವಕಾಶ ಸಂಸ್ಥೆ ನೀಡಿದ್ದು, ಇದೀಗ ಎರಡನೇ ಸೀಝನ್ ನ ರೂಪುರೇಷೆ ಸಿದ್ದಗೊಳ್ಳುತ್ತಿದ್ದು, ಅತೀ ಶೀಘ್ರದಲ್ಲಿ ಪ್ರಾರಂಭವಾಗಲಿದೆ ಎಂದು ಸಂಸ್ಥೆಯ ಪ್ರಕಟಣೆ ತಿಳಿಸಿದೆ.