ಜ್ವಾಲಾಮುಖಿ ಸ್ಫೋಟ- ದೆಹಲಿಗೆ ವಾಪಸಾದ ಏರ್ ಇಂಡಿಯಾ

NEWSKADABA

(ನ್ಯೂಸ್ ಕಡಬ) newskadaba.com ಜೂ. 18. ಬಾಲಿ ವಿಮಾನ ನಿಲ್ದಾಣದ ಬಳಿ ಜ್ವಾಲಾಮುಖಿ ಸ್ಫೋಟಗೊಂಡ ಹಿನ್ನೆಲೆಯಲ್ಲಿ ದೆಹಲಿಯಿಂದ ಬಾಲಿಗೆ ಹೊರಟಿದ್ದ ಏರ್ ಇಂಡಿಯಾ ವಿಮಾನ ಮತ್ತೆ ದೆಹಲಿಗೆ ವಾಪಸ್ ಆಗಿದೆ. ಪ್ರಯಾಣಿಕರ ಸುರಕ್ಷತಾ ಹಿತದೃಷ್ಟಿಯಿಂದ ದೆಹಲಿಗೆ ಹಿಂತಿರುಗುವಂತೆ ಸೂಚಿಸಲಾಯಿತು. ಈ ಹಿನ್ನೆಲೆಯಲ್ಲಿ ಏರ್ ಇಂಡಿಯಾ ವಿಮಾನ ದೆಹಲಿಗೆ ವಾಪಸ್ ಆಗಿದ್ದು, ದೆಹಲಿ ಏರ್ ಪೋರ್ಟ್ ನಲ್ಲಿ ಸುರಕ್ಷಿತವಾಗಿ ಲ್ಯಾಂಡ್ ಆಗಿದೆ.

NEWSKADABA

ಇನ್ನೊಂದೆಡೆ ಬಾಲಿಗೆ ತೆರಳಬೇಕಿದ್ದ ಏರ್ ಇಂಡಿಯಾ, ಸಿಂಗಾಪುರ್ ಏರ್ ಲೈನ್ಸ್, ಏರ್ ನ್ಯೂಜಿಲ್ಯಾಂಡ್, ಜೆಟ್ ಸ್ಟಾರ್, ವರ್ಜಿನ್ ಆಸ್ಟ್ರೇಲಿಯಾ ಮತ್ತು ಚೀನಾದ ಜುನ್ಯಾವೋ ಏರ್ ಲೈನ್ಸ್ ವಿಮಾನಗಳು ರದ್ದಾಗಿವೆ. ಪೂರ್ವ ಇಂಡೋನೇಷ್ಯಾದಲ್ಲಿ ಮೌಂಟ್ ಲೆವೊಟೊಬಿ ಲಕಿ-ಲಕಿ ಜ್ವಾಲಾಮುಖಿ ಸ್ಫೋಟಗೊಂಡಿದೆ. ಈ ಹಿನ್ನೆಲೆಯಲ್ಲಿ ಏರ್ ಇಂಡಿಯಾ ಸೇರಿದಂತೆ ಹಲವು ವಿಮಾನಗಳು ಕಾರ್ಯಾಚರಣೆ ಸ್ಥಗಿತಗೊಳಿಸಿವೆ.

NEWSKADABA

 

NEWSKADABA
NEWSKADABA
error: Content is protected !!
Scroll to Top