(ನ್ಯೂಸ್ ಕಡಬ) newskadaba.com ಜೂ. 16. ಹಲವು ವಸ್ತುಗಳ ಬೆಲೆ ಏರಿಕೆಯಿಂದ ತತ್ತರಿಸಿ ಹೋಗಿರುವ ಗ್ರಾಹಕರಿಗೆ ಇದೀಗ ಅಡುಗೆ ಎಣ್ಣೆ ಬೆಲೆ ಏರಿಕೆಯ ಬರೆ ಬಿದ್ದಿದೆ. ಇರಾನ್ ಇಸ್ರೇಲ್ ಸಂಘರ್ಷದಿಂದಾಗಿ ತೈಲ ಮಾರುಕಟ್ಟೆಗಳು ಸಂಪೂರ್ಣ ಅಲುಗಾಡುತ್ತಿದ್ದು, ಇದರಿಂದ ರಾಜ್ಯದಲ್ಲೂ ಪರಿಣಾಮ ಬೀರಿದೆ. ಕೆಲವು ದಿನಗಳ ಹಿಂದಷ್ಟೇ ಕಡಿಮೆಯಾಗಿದ್ದ ಅಡುಗೆ ಎಣ್ಣೆ ದರದಲ್ಲಿ ಇದೀಗ 3ರಿಂದ 4ರೂ ದಿಢೀರ್ ಏರಿಕೆಯಾಗಿದೆ.
ಅಡುಗೆ ಎಣ್ಣೆಯ ಬೆಲೆ ಈ ರೀತಿಯಾಗಿದೆ. 139 ರೂ. ಇದ್ದ ಸನ್ ಫ್ಲವರ್ ಆಯಿಲ್ 141ರೂ. 142 ರೂ.ಇದ್ದ ಗೋಲ್ಡ್ ವಿನ್ನರ್ 145 ರೂಪಾಯಿಗಳಿಗೆ ಏರಿಕೆಯಾಗಿದೆ. ರುಚಿಗೋಲ್ಡ್ 110ರೂ. ನಿಂದ 112ರೂಗೆ ಏರಿಕೆಯಾಗಿದೆ. ಜೆಮಿನಿ 147ರೂ. 150ರೂ., ಫ್ರೀಡಂ 137ರೂ. 141ರೂ., ದೀಪದ ಎಣ್ಣೆ 111ರೂ. 114ರೂಗೆ ಏರಿಕೆಯಾಗಿದೆ.