ಪಶುಪಾಲನಾ ಚಟುವಟಿಕೆಗಳ ತರಬೇತಿ: ಅರ್ಜಿ ಆಹ್ವಾನ

(ನ್ಯೂಸ್ ಕಡಬ) newskadaba.com ಮಂಗಳೂರು, ಜೂ. 10. ದಕ್ಷಿಣ ಕನ್ನಡ ಜಿಲ್ಲೆಯ ಆಸಕ್ತ ರೈತರಿಗೆ ಪಶುಪಾಲನಾ ಇಲಾಖೆಯ ಪಶುಪಾಲನಾ ಮತ್ತು ಪಶುವೈದ್ಯಕೀಯ ತರಬೇತಿ ಕೇಂದ್ರ, ಮಂಗಳೂರು ವತಿಯಿಂದ ಪಶುಪಾಲನಾ ಚಟುವಟಿಕೆಗಳ ಬಗ್ಗೆ ತರಬೇತಿ ಏರ್ಪಡಿಸಲಾಗಿದೆ. ಆಸಕ್ತ ರೈತ ಭಾಂದವರು ತಮ್ಮ ತಾಲೂಕಿನ ಅಧಿಕಾರಿಗಳನ್ನು ಸಂಪರ್ಕಿಸಿ ನೋಂದಾವಣೆ ಮಾಡಿಕೊಳ್ಳಬಹುದು. ಜೂನ್ 12ರಿಂದ 13ರ ವರೆಗೆ ರೈತರಿಗೆ ಕೋಳಿ ಸಾಕಾಣಿಕೆ ತರಬೇತಿ ಹಾಗೂ ಜೂನ್ 26ರಿಂದ 27ರ ವರೆಗೆ ಆಧುನಿಕ ಹೈನುಗಾರಿಕೆ ತರಬೇತಿ ನೀಡಲಾಗುತ್ತದೆ.
ಹೆಚ್ಚಿನ ಮಾಹಿತಿಗೆ  ಮಂಗಳೂರು ತಾಲೂಕು – 9243306956/9141010713, ಉಳ್ಳಾಲ ತಾಲೂಕು – 9019198507, ಮುಲ್ಕಿ ತಾಲೂಕು – 8971024282, ಮೂಡಬಿದ್ರೆ ತಾಲೂಕು – 7204271943, ಬಂಟ್ವಾಳ ತಾಲೂಕು – 9481445365, ಬೆಳ್ತಂಗಡಿ ತಾಲೂಕು – 9481963820, ಪುತ್ತೂರು ತಾಲೂಕು – 9483920208, ಕಡಬ ತಾಲೂಕು – 9483922594, ಸುಳ್ಯ ತಾಲೂಕು – 9844995078 ಸಂಪರ್ಕಿಸಬಹುದು ಎಂದು ಪಶುಪಾಲನಾ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆ ಮುಖ್ಯ ಪಶುವೈದ್ಯಾಧಿಕಾರಿ(ಆಡಳಿತ) ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Scroll to Top