ಕಾರಿನಲ್ಲಿ ಒಂದೇ ಕುಟುಂಬದ 7 ಮಂದಿಯ ಮೃತದೇಹಗಳು ಪತ್ತೆ

(ನ್ಯೂಸ್ ಕಡಬ) newskadaba.com, ಮೇ.27. ಹರಿಯಾಣದ ಪಂಚಕುಲದ ವಸತಿ ಪ್ರದೇಶದಲ್ಲಿ ನಿಲ್ಲಿಸಿದ್ದ ಕಾರಿನೊಳಗೆ ಒಂದೇ ಕುಟುಂಬದ ಏಳು ಮಂದಿಯ ಮೃತದೇಹಗಳು ಪತ್ತೆಯಾಗಿದೆ. ಪಂಚಕುಲದಸೆಕ್ಟರ್-27 ಪ್ರದೇಶದಲ್ಲಿ ಮನೆಯ ಮುಂದೆ ಕಾರು ನಿಂತಿತ್ತು, ಅದರೊಳಗೆ ಇದ್ದವರುನಿಗೂಢವಾಗಿಮೃತಪಟ್ಟಿರುವುದುತಡರಾತ್ರಿ ಬೆಳಕಿಗೆ ಬಂದಿದೆ.

ಪೊಲೀಸರು ದಾವಿಸಿ ಪರಿಶೀಲಿಸಿದಾಗ ಕಾರಿನೊಳಗೆ ದಂಪತಿ, ಮೂವರು ಮಕ್ಕಳು ಮತ್ತು ಇಬ್ಬರು ವೃದ್ಧರು ಮೃತಪಟ್ಟಿರುವುದು ಕಂಡುಬಂದಿದೆ ಮತ್ತು ಇವರು ಡೆಹ್ರಾಡೂನ್‌ನ ನಿವಾಸಿಗಳಾಗಿದ್ದು, ಎಲ್ಲರೂ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ.

error: Content is protected !!
Scroll to Top