(ನ್ಯೂಸ್ ಕಡಬ) newskadaba.com , ಮೇ.12. ಭಾರತ-ಪಾಕ್ ಯುದ್ಧದ ಉದ್ವಿಗ್ನ ಸ್ಥಿತಿಯ ನಡುವೆ ಪಾಕಿಸ್ತಾನ ಈಗ ಭೂಕಂಪದಿಂದ ನಲುಗಿದೆ. ರಿಕ್ಟರ್ ಮಾಪಕದಲ್ಲಿ 4.6 ತೀವ್ರತೆ ದಾಖಲಾಗಿದೆ. ರಾಷ್ಟ್ರೀಯ ಭೂಕಂಪಶಾಸ್ತ್ರ ಕೇಂದ್ರದ ಪ್ರಕಾರ, ಭೂಕಂಪದ ಅಕ್ಷಾಂಶ 29.12N ಮತ್ತು ರೇಖಾಂಶ 67.26E ಆಗಿತ್ತು. ಶುಕ್ರವಾರ-ಶನಿವಾರದ ಮಧ್ಯರಾತ್ರಿ ಪಾಕಿಸ್ತಾನದಲ್ಲಿ 4.0 ತೀವ್ರತೆಯ ಭೂಕಂಪ ಸಂಭವಿಸಿದೆ.
ರಾಷ್ಟ್ರೀಯ ಭೂಕಂಪಶಾಸ್ತ್ರ ಕೇಂದ್ರದ ಮಾಹಿತಿ ಪ್ರಕಾರ, ಇಂದು ಮಧ್ಯಾಹ್ನ 1:26ರ ಸುಮಾರಿಗೆ ಮತ್ತೆ ಭೂಕಂಪ ಸಂಭವಿಸಿದೆ. ರಿಕ್ಟರ್ ಮಾಪಕದಲ್ಲಿ 4.6 ತೀವ್ರತೆ ದಾಖಲಾಗಿದ್ದು, 10 ಕಿ.ಮೀ ಆಳದಲ್ಲಿ ಸಂಭವಿಸಿದ್ದು, ಇದು ನಂತರದ ಆಘಾತಗಳಿಗೆ ಗುರಿಯಾಗುವ ಸಾಧ್ಯತೆ ಇದೆ. ಕಳೆದ ಒಂದು ವಾರದಲ್ಲಿ ಉಂಟಾಗಿರುವ ನಾಲ್ಕು ಭೂಕಂಪಗಳು ಒಂದೇ ಪ್ರಮಾಣದಲ್ಲಿವೆ ಎಂದು ತಿಳಿಸಿದೆ.
ಪಾಕಿಸ್ತಾನವು ವಿಶ್ವದ ಅತ್ಯಂತ ಭೂಕಂಪನಶೀಲ ದೇಶಗಳಲ್ಲಿ ಒಂದಾಗಿದ್ದು, ಆಗಾಗ್ಗೆ ಭೂಕಂಪ ಉಂಟಾಗುತ್ತಿರುತ್ತವೆ. ಇದಕ್ಕೂ ಮುನ್ನ ಮೇ 10ರಂದು 4.6 ತೀವ್ರತೆಯಲ್ಲಿ ಭೂಕಂಪ ಸಂಭವಿಸಿತ್ತು.