(ನ್ಯೂಸ್ ಕಡಬ) newskadaba.com, ಮೇ.03. ಬೆಂಗಳೂರು: ಪಾಕಿಸ್ತಾನಕ್ಕೂ ನಮಗೂ ಎಂದಿಗೂ ಸಂಬಂಧವಿಲ್ಲ, ಪಾಕಿಸ್ತಾನ ಯಾವತ್ತಿಗೂ ನಮ್ಮ ಶತ್ರು ದೇಶನೇ ಎಂದು ಸಚಿವ ಜಮೀರ್ ಅಹ್ಮದ್ ಖಾನ್ ತಿಳಿಸಿದ್ದಾರೆ.

ಭಾರತ ಮತ್ತು ಪಾಕಿಸ್ತಾನದ ನಡುವೆ ಉದ್ವಿಗ್ನತೆ ಏರ್ಪಟ್ಟಿರುವ ವಿಚಾರವಾಗಿ ವಿಜಯನಗರ ಜಿಲ್ಲೆಯ ಹೊಸಪೇಟೆಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪಾಕಿಸ್ತಾನ ನಮ್ಮ ವಿರೋಧಿ ರಾಷ್ಟ್ರ. ಅದರ ಮೇಲೆ ಕೇಂದ್ರ ಸರ್ಕಾರ ಯುದ್ಧ ಸಾರಿದರೆ, ನನಗೆ ಅವಕಾಶ ನೀಡಲಿ. ನಾನು ಗಡಿಯಲ್ಲಿ ಯುದ್ಧಕ್ಕೆ ಹೋಗಲು ಸಿದ್ಧನಿದ್ದೇನೆ ಎಂದಿದ್ದಾರೆ.
ಕೇಂದ್ರ ಸರ್ಕಾರ ಪಾಕಿಸ್ತಾನದ ಮೇಲೆ ಕೂಡಲೇ ಯುದ್ಧ ಸಾರಲಿ. ಗಡಿಯಲ್ಲಿ ನಿಂತು ಭಾರತಕ್ಕಾಗಿ ಹೋರಾಟ ಮಾಡುತ್ತೇವೆ. ಭಾರತ ಯಾವತ್ತಿದ್ದರೂ ಹಿಂದೂಸ್ಥಾನ ಎಂದು ಹೇಳಿದ್ದಾರೆ.