ಮಂಗಳೂರು : ನೇತ್ರಾವತಿ ಒಡಲಿಗೆ ಕಲುಷಿತ ನೀರು – ಜಾಗೃತ ಹಿರಿಯ ನಾಗರಿಕರ ತಂಡದಿಂದ ಸಮೀಕ್ಷೆ

(ನ್ಯೂಸ್ ಕಡಬ) newskadaba.com ಎ. 30: ನೇತ್ರಾವತಿ ನದಿಗೆ ಕಲುಷಿತ ನೀರು ಸೇರುವ ವಿಚಾರಕ್ಕೆ ಸಂಬಂಧಿಸಿ ಮಾಧ್ಯಮಗಳಲ್ಲಿ ಈ ಕುರಿತು ಬಿತ್ತರವಾದ ವರದಿಗಳನ್ನು ಗಮನಿಸಿ, ಮಂಗಳೂರಿನ ಜಾಗೃತ ಹಿರಿಯ ನಾಗರಿಕರ ತಂಡವೊಂದು ಬಂಟ್ವಾಳದ ಪ್ರದೇಶಗಳಲ್ಲಿ ಸಮೀಕ್ಷೆ ನಡೆಸಿತು.

ಪ್ರತ್ಯಕ್ಷ ಭೇಟಿ ಸಂದರ್ಭ ನದಿಯ ಒಡಳಿಗೆ ತ್ಯಾಜ್ಯ ಸೇರುವುದನ್ನು ಗಮನಿಸಿದ ತಂಡ, ಈ ಕುರಿತು ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಅವರಿಗೆ ಮನವಿ ಸಲ್ಲಿಸಿ, ಕೂಡಲೇ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದೆ.

error: Content is protected !!
Scroll to Top