ಭಾರತದಿಂದ ಪಾಕ್‌ಗೆ ಔಷಧ ಬಂದ್; ಕೆಲಸ ಬಿಡಲು ಮುಂದಾಗ್ತಿರೋ ವೈದ್ಯರು

(ನ್ಯೂಸ್ ಕಡಬ) newskadaba.com ಎ. 30: ಪಹಲ್ಗಾಮ್ ನಲ್ಲಿ ನಡೆದ ಉಗ್ರರ ದಾಳಿಯ ನಂತರ ಭಾರತ, ಪಾಕಿಸ್ತಾನದೊಂದಿಗಿನ ವ್ಯಾಪಾರ ವಹಿವಾಟನ್ನು ಸ್ಥಗಿತಗೊಳಿಸಿದೆ. ಈ ಹಿನ್ನೆಲೆ ಪಾಕಿಸ್ತಾನ ಅಗತ್ಯ ಔಷಧಗಳ ಕೊರತೆ ಎದುರಿಸುತ್ತಿದ್ದು, ಪಾಕ್ ವೈದ್ಯರೇ ಕೆಲಸ ಬಿಡುವ ಯೋಚನೆ ಮಾಡುತ್ತಿದ್ದಾರೆ ಎನ್ನಲಾಗಿದೆ.

ಪಾಕಿಸ್ತಾನವು ಭಾರತದ ಜೆನೆರಿಕ್ ಮೆಡಿಸಿನ್ ಮೇಲೆ ಅವಲಂಬಿತವಾಗಿತ್ತು. ಭಾರತವು ಪಾಕಿಸ್ತಾನದೊಂದಿಗೆ ವ್ಯಾಪಾರ ವಹಿವಾಟನ್ನು ಸ್ಥಗಿತಗೊಳಿಸಿದ ಬಳಿಕ ಅನೇಕ ಮಾತ್ರೆಗಳ ತಯಾರಿಸಲು ಕಚ್ಚಾವಸ್ತುಗಳ ಕೊರತೆ ಎದುರಾಗಿದೆ. ಅಲ್ಲಿನ ಜನ ಹಾವು ಕಡಿತಕ್ಕೆ, ಕ್ಯಾನ್ಸರ್‌ಗೆ ಔಷಧವಿಲ್ಲದೇ ಪರದಾಡುತ್ತಿದ್ದಾರೆ. ವಿಟಮಿನ್-ಡಿ, ವಿಟಮಿನ್ ಬಿ1, ವಿಟಮಿನ್ ಬಿ12, ಮಕ್ಕಳಿಗೆ ಮಾಲ್ ನ್ಯೂಟ್ರೀಷನ್ಸ್ ಎಲ್ಲವೂ ಬಂದ್ ಆಗಿವೆ. ಬೇಸಿಕ್ ಮೆಡಿಸಿನ್ ಇಲ್ಲದೆ ಪಾಕಿಸ್ತಾನ ಪರದಾಡುತ್ತಿದೆ.

Also Read  'ಯುವರತ್ನ'ನ ನಿಧನದಿಂದ ಆಘಾತಗೊಂಡ ಅಭಿಮಾನಿಗಳು ➤ ಮೃತರ ಸಂಖ್ಯೆ 11ಕ್ಕೆ ಏರಿಕೆ

ಟರ್ಕಿ, ಯೂರೋಪ್, ಅಮೆರಿಕ, ಚೀನಾ ಬಳಿ ಔಷಧಕ್ಕಾಗಿ ಪಾಕಿಸ್ತಾನ ಅಂಗಲಾಚುತ್ತಿದೆ. ಆದರೆ ಪಾಕ್‌ಗೆ ನಮ್ಮಲ್ಲಿ ಸಿಗುವಷ್ಟು ಕಡಿಮೆ ದರಕ್ಕೆ ಬೇರೆ ದೇಶಗಳಿಂದ ಔಷಧ ಸಿಗುವುದಿಲ್ಲ. ಈ ಮಧ್ಯೆ ಪಾಕಿಸ್ತಾನದ ನಾಯಕರು ಔಷಧ ವ್ಯಾಪಾರ ನಿಷೇಧದಿಂದ ವಿನಾಯಿತಿ ನೀಡುವಂತೆ ಒತ್ತಾಯಿಸುತ್ತಿದ್ದಾರೆ.

error: Content is protected !!
Scroll to Top