ಮನಪಾ ನೂತನ ಆಯುಕ್ತರಾಗಿ ಮುಹಮ್ಮದ್ ನಝೀರ್ ಅಧಿಕಾರ ಸ್ವೀಕಾರ

(ನ್ಯೂಸ್ ಕಡಬ) newskadaba.com ಮಂಗಳೂರು, ಜೂ‌. 13. ಮಂಗಳೂರು ನಗರಾಭಿವೃದ್ಧಿ ಪ್ರಾಧಿಕಾರದ ನೂತನ ಆಯುಕ್ತರಾಗಿ ಮುಹಮ್ಮದ್ ನಝೀರ್ ಅವರು ಗುರುವಾರದಂದು ಅಧಿಕಾರ ಸ್ವೀಕರಿಸಿದರು.ನಿರ್ಗಮನ ಆಯುಕ್ತೆ ನೂರ್ ಜಹಾನ್ ಖಾನಂ ಅವರು ಅಧಿಕಾರ ಹಸ್ತಾಂತರಿಸಿದರು.

ಆರ್ಥಿಕ ಮತ್ತು ಸಾಂಖ್ಯಿಕ ನಿರ್ದೇಶನಾಲಯದ ಜಂಟಿ ನಿರ್ದೇಶಕರಾಗಿದ್ದ ಮುಹಮ್ಮದ್ ನಝೀರ್ ಅವರನ್ನು ನಿಯೋಜಿಸಿ ಸರಕಾರ ಜೂ.10ರಂದು ಆದೇಶ ಹೊರಡಿಸಿತ್ತು.

Scroll to Top