ಭೀಕರ ಅಗ್ನಿ ಅವಘಡ, ಜೀವ ಉಳಿಸಿಕೊಳ್ಳಲು 5ನೇ ಅಂತಸ್ತಿನಿಂದ ಹಾರಿದ ಯುವತಿ

(ನ್ಯೂಸ್ ಕಡಬ) newskadaba.com ಎ. 30: ಅಹ್ಮದಾಬಾದ್: ಗುಜರಾತ್ ರಾಜಧಾನಿ ಅಹ್ಮದಾಬಾದ್ ನಲ್ಲಿ ನಡೆದ ಭೀಕರ ಅಗ್ನಿಅವಘಡದಲ್ಲಿ ಮಹಿಳೆಯೊಬ್ಬರು ಜೀವ ಉಳಿಸಿಕೊಳ್ಳಲು ಕಟ್ಟಡದ 5ನೇ ಅಂತಸ್ತಿನಿಂದ ಕೆಳಗೆ ಹಾರಿದ್ದಾರೆ.

ಅಹ್ಮದಾಬಾದ್ ನ ಇಂದಿರಾ ಸೇತುವೆ ಪ್ರದೇಶದ ಆಟ್ರೆ ಆರ್ಕಿಡ್‌ನಲ್ಲಿರುವ ಬಹುಮಹಡಿ ಕಟ್ಟಡದಲ್ಲಿ ಈ ಅಗ್ನಿ ಅವಘಡ ಸಂಭವಿಸಿದ್ದು, ಅಪಾರ್ಟ್‌ಮೆಂಟ್ ಬೆಂಕಿಯಿಂದ ತಪ್ಪಿಸಿಕೊಳ್ಳಲು ಅಹ್ಮದಾಬಾದ್‌ನ ಐದನೇ ಮಹಡಿಯ ಕಟ್ಟಡದಿಂದ ಜಿಗಿದ ಯುವತಿಯೊಬ್ಬಳು ಬದುಕುಳಿದಿದ್ದಾಳೆ.

ಯುವತಿ ಕೆಳಗೆ ಹಾರುತ್ತಲೇ ಕೆಳಗೆ ಇದ್ದ ಸುಮಾರು 20-25 ಜನರು ಬಲೆ ಅಥವಾ ಬಟ್ಟೆಯಂತಹ ವಸ್ತುವನ್ನು ಬಲೆ ರೀತಿಯಲ್ಲಿ ಹಿಡಿದುಕೊಂಡಿದ್ದು ಯುವತಿ ನೇರವಾಗಿ ಅದರೊಳಗೆ ಬಿದ್ದಿದ್ದಾಳೆ. ಆ ಮೂಲಕ ಸಣ್ಣ ಪುಟ್ಟ ಗಾಯಗಳೊಂದಿಗೆ ಪ್ರಾಣಾಪಾಯದಿಂದ ಪಾರಾಗಿದ್ದಾಳೆ. ಇನ್ನು ಅಗ್ನಿ ಅವಘಡ ಕುರಿತು ಮಾಹಿತಿ ಲಭ್ಯವಾಗುತ್ತಲೇ ಅಗ್ನಿಶಾಮಕ ದಳ ವಾಹನಗಳು ಸ್ಥಳಕ್ಕೆ ದೌಡಾಯಿಸಿ ಬೆಂಕಿ ನಂದಿಸುವ ಕಾರ್ಯಾಚರಣೆ ಮಾಡಿದರು. ಅಪಾರ್ಟ್ಮೆಂಟ್ನ ಸಿಮತ್ತು ಡಿಬ್ಲಾಕ್ ನಲ್ಲಿ ಬೆಂಕಿ ವ್ಯಾಪಕವಾಗಿ ಹಬ್ಬಿತ್ತು. ಮೂಲಗಳ ಪ್ರಕಾರ ಅಪಾರ್ಟ್ ಮೆಂಟ್ ನ ಹವಾನಿಯಂತ್ರಣ ವ್ಯವಸ್ಥೆಯಲ್ಲಿ ಮೊದಲು ಬೆಂಕಿ ಕಾಣಿಸಿಕೊಂಡಿದ್ದು ಬಳಿಕ ಬೆಂಕಿ ಕಟ್ಟಡದ ಇತರೆ ಭಾಗಕ್ಕೆ ವ್ಯಾಪಿಸಿಕೊಂಡಿದೆ

error: Content is protected !!
Scroll to Top