ಚೆಕ್ ಬೌನ್ಸ್ ಕೇಸ್: ಮಾಣಿಕ್ಯ ಸಿನಿಮಾ ನಿರ್ಮಾಪಕ ಎಂ.ಎನ್. ಕುಮಾರ್‌ ಬಂಧನ

(ನ್ಯೂಸ್ ಕಡಬ) newskadaba.com, ಎ.04  ಬೆಂಗಳೂರು: ಚೆಕ್‌ ಬೌನ್ಸ್‌ ಪ್ರಕರಣವೊಂದರಲ್ಲಿ ಮಾಣಿಕ್ಯ ಚಿತ್ರ ನಿರ್ಮಾಪಕ ಎಂ.ಎನ್‌. ಕುಮಾರ್‌ ಅವರನ್ನು ಉಪ್ಪಾರಪೇಟೆ ಠಾಣೆ ಪೊಲೀಸರು ಬಂಧನಕ್ಕೊಳಪಡಿಸಿದ್ದು, ಪರಪ್ಪನ ಅಗ್ರಹಾರ ಜೈಲಿಗೆ ಕಳಿಸಿದ್ದಾರೆ.

ನಟರೊಬ್ಬರಿಂದ ಸಾಲ ಪಡೆದುಕೊಂಡಿದ್ದ ಕುಮಾರ್ ಅವರು ಹಣವನ್ನು ವಾಪಸ್‌ ನೀಡಿರಲಿಲ್ಲ. ಕುಮಾರ್ ಅವರು ನೀಡಿದ್ದ ಚೆಕ್‌ ಸಹ ಬೌನ್ಸ್ ಆಗಿತ್ತು. ಕುಮಾರ್ ಅವರ ವಿರುದ್ಧ 4ನೇ ಎಸಿಎಂಎಂ ಕೋರ್ಟ್‌ನಲ್ಲಿ ದೂರು ದಾಖಲಾಗಿತ್ತು. ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಲಯ ಕುಮಾರ್‌ಗೆ ಶಿಕ್ಷೆ ವಿಧಿಸಿ ಬಂಧನದ ವಾರಂಟ್‌ ಹೊರಡಿಸಿತ್ತು. ಕುಮಾರ್‌ ಅವರ ಕಚೇರಿ ಗಾಂಧಿನಗರದಲ್ಲಿ ಇದ್ದ ಕಾರಣ ಉಪ್ಪಾರಪೇಟೆ ಠಾಣೆ ಪೊಲೀಸರಿಗೆ ಕೋರ್ಟ್‌ನಿಂದ ವಾರೆಂಟ್‌ ಜಾರಿ ಮಾಡಲು ನ್ಯಾಯಾಲಯ ಆದೇಶಿಸಿತ್ತು.

Also Read  ಆಹಾರ ಸಚಿವರ ಜಿಲ್ಲೆಯಲ್ಲಿ ಹಂದಿಗಳ ಪಾಲಾಗುತ್ತಿರುವ ಅನ್ನಭಾಗ್ಯ ಅಕ್ಕಿ..! ➤ ಸಾರ್ವಜನಿಕರಿಂದ ಆಕ್ರೋಶ

 

error: Content is protected !!
Scroll to Top