ಅಕ್ರಮ ಚಿನ್ನ ಸಾಗಾಟ ಪ್ರಕರಣ: ನಟಿ ರನ್ಯಾರಾವ್ ಗೆ 14 ದಿನಗಳ ಕಾಲ ನ್ಯಾಯಾಂಗ ಬಂಧನ

(ನ್ಯೂಸ್ ಕಡಬ) newskadaba.com ಮಾ. 05 ಬೆಂಗಳೂರು: ಅಕ್ರಮವಾಗಿ ಚಿನ್ನ ಸಾಗಿಸುತ್ತಿದ್ದ ಪ್ರಕರಣಕ್ಕೆ ಸಂಬಂದಿಸಿ ನಟಿ ರನ್ಯಾ ರಾವ್ ಅವರನ್ನು 14 ದಿನಗಳ ಕಾಲ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿ ವಿಶೇಷ ಆರ್ಥಿಕ ಅಪರಾಧಗಳ ನ್ಯಾಯಾಧೀಶರು ಹೊರಡಿಸಿದ್ದಾರೆ.

ಗೋಲ್ಡ್ ಸ್ಮಗ್ಲಿಂಗ್ ಆರೋಪದ ಮೇಲೆ ನಟಿ ರನ್ಯಾ ರಾವ್ ಅವರನ್ನು ಬೆಂಗಳೂರು ಏರ್‌ಪೋರ್ಟ್‌ನಲ್ಲಿ ಬಂಧಿಸಲಾಗಿದೆ. ಸೋಮವಾರ ರಾತ್ರಿ ದೆಹಲಿಯಿಂದ ಬಂದಿಳಿದ ನಟಿ ರನ್ಯಾ ರಾವ್ ಬಳಿ 12 ಕೋಟಿ ಮೌಲ್ಯದ 14.8 ಕೆಜಿ ಚಿನ್ನ ಪತ್ತೆಯಾಗಿದೆ.

ಬ್ಯುಸಿನೆಸ್ ಮೇಲೆ ದುಬೈ ಹೋಗಿ ಬರುತ್ತಿದ್ದ ನಟಿ ರನ್ಯಾರಾವ್ ಮೇಲೆ ಡಿಆರ್‌ಐ ಅಧಿಕಾರಿಗಳು ನಿಗಾ ವಹಿಸಿದ್ದರು. ಕಳ್ಳಸಾಗಣೆಯಾದ ಚಿನ್ನವನ್ನು ನಟಿ ರನ್ಯಾರಾವ್ ದೆಹಲಿಯಿಂದ ಬೆಂಗಳೂರಿಗೆ ತರುತ್ತಿರುವ ಬಗ್ಗೆ ಡಿಆರ್‌ಐ ಅಧಿಕಾರಿಗಳಿಗೆ ಖಚಿತ ಮಾಹಿತಿ ಸಿಕ್ಕಿ ಕಾರ್ಯಚರಣೆ ನಡೆಸಿದ ಡಿಆರ್‌ಐ ಅಧಿಕಾರಿಗಳು ನಟಿ ರನ್ಯಾರಾವ್‌ರನ್ನು ರೆಡ್ ಹ್ಯಾಂಡ್ ಆಗಿ ಹಿಡಿದಿದ್ದಾರೆ.

Also Read  ನಮ್ಮ ಮೆಟ್ರೋ ನಿಲ್ದಾಣಗಳಲ್ಲಿ ಪ್ರಿಪೇಯ್ಡ್ ಆಟೋ ಸೇವೆ ಆರಂಭ

error: Content is protected !!
Scroll to Top