ಇಂದು (ಮಾ.30) ಕೆಸಿಎಫ್ ವತಿಯಿಂದ ದುಬೈನಲ್ಲಿ ಕರ್ನಾಟಕ ಫ್ಯಾಮಿಲಿ ಫೆಸ್ಟ್ – 2018

(ನ್ಯೂಸ್ ಕಡಬ) newskadaba.com ದುಬೈ, ಮಾ.30. ಕರ್ನಾಟಕ ಕಲ್ಚರಲ್ ಫೌಂಡೇಶನ್ – ಕೆಸಿಎಫ್ ಐದನೇ ವರ್ಷಾಚರಣೆಯ ಪ್ರಯುಕ್ತ ಗಲ್ಫ್ ಅನಿವಾಸಿ ಕನ್ನಡಿಗರ ಕರ್ನಾಟಕ ಫ್ಯಾಮಿಲಿ ಫೆಸ್ಟ್-18 ಇದೇ ಬರುವ ಮಾರ್ಚ್ 30 ರಂದು ಅಜ್ಮಾನ್ ಗಲ್ಫ್ ಮೆಡಿಕಲ್ ಯೂನಿವರ್ಸಿಟಿ (ತುಂಬೆ ಮೈದಾನ) ಯಲ್ಲಿ ನಡೆಯಲಿದೆ. ಬೆಳಿಗ್ಗೆ 8 ರಿಂದ ರಾತ್ರಿ 10 ರ ವರೆಗೆ ಹಲವಾರು ಸಾಂಸ್ಕೃತಿಕ ಕಾರ್ಯಕ್ರಮಗಳು ಮತ್ತು ಆಟೋಟ ಸ್ಪರ್ಧೆಗಳು ನಡೆಯಲಿದೆ. ಖಿರಾಅತ್, ಬುರ್ದಾ, ಆಧ್ಯಾತ್ಮಿಕತೆ, ಭಾಷಣ ಸ್ಪರ್ಧೆಗಳು, ಆಟೋಟಗಳು, ಐತಿಹಾಸಿಕ ಪ್ರವಾಸ, ಆರೋಗ್ಯ ತರಬೇತಿ, ಹಾಡು, ಚಿತ್ರಕಲೆ (ಡ್ರಾಯಿಂಗ್), ಪ್ರಬಂಧ, ಚಿಣ್ಣರಲೋಕ ಸೇರಿದಂತೆ ಹಲವು ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿದೆ.

ಕಾರ್ಯಕ್ರಮದ ಅಂಗವಾಗಿ ಬೆಳಿಗ್ಗೆ 8 ಘಂಟೆಗೆ ನಡೆಯುವ ಸಮಾರಂಭವು ಅಸ್ಸಯ್ಯದ್ ಹಸನ್ ಅಹ್ದಲ್ ತಂಙ್ಙಳ್ ರವರ ಪ್ರಾರ್ಥನೆಯೊಂದಿಗೆ ಆರಂಭಗೊಳ್ಳಲಿದ್ದು, ಕೆಸಿಎಫ್ ಯುಎಇ ಸಮಿತಿ ಕೋಶಾಧಿಕಾರಿ ಅಬ್ದುಲ್ ಜಲೀಲ್ ನಿಝಾಮಿ ಎಮ್ಮೆಮಾಡು ಅಧ್ಯಕ್ಷತೆ ವಹಿಸಲಿದ್ದಾರೆ. ದುಬೈ ಪ್ರಖ್ಯಾತ ಕನ್ನಡಿಗ ಉದ್ಯಮಿಗಳ ಮತ್ತು ವಿಶೇಷ ಅತಿಥಿಗಳ ಸಮ್ಮುಖದಲ್ಲಿ ಕಾರ್ಯಕ್ರಮದ ಉದ್ಘಾಟನೆ ನಡೆಯಲಿದ್ದು, ಮುಖ್ಯ ಅತಿಥಿಗಳಾಗಿ ಹರೀಷ್ ಶೇರಿಗಾರ್, ಬಿಸಿಎಫ್ ದುಬೈ ಉಪಾಧ್ಯಕ್ಷರಾದ ಅಬ್ದುಲ್ ಲತೀಫ್ ಮುಲ್ಕಿ, ಶೈಖ್ ಕುನಾಲ್ ಮುನೀರ್, ಅಬ್ದುಲ್ ಹಮೀದ್ ಬಜ್ಪೆ, ಪಿಎಂಹೆಚ್ ಅಬ್ದುಲ್ ಹಮೀದ್, ಮುಹಮ್ಮದ್ ಇಕ್ಬಾಲ್ ಸಿದ್ದಕಟ್ಟೆ ಮುಖ್ಯ ಅಥಿತಿಗಳಾಗಿ ಬಾಗವಹಿಸಲಿದ್ದಾರೆ.

ನಂತರ ನಡೆಯುವ ಪ್ರತಿಭೋತ್ಸವ ಸಮಾರಂಭದಲ್ಲಿ ಜೂನಿಯರ್, ಸೀನಿಯರ್, ಜನರಲ್ ವಿಭಾಗಗಳಲ್ಲಿ ಯುಎಇಯ ವಿವಿಧ ಝೋನ್ ಗಳಿಂದ ಆಯ್ಕೆಯಾದ ಪ್ರತಿಭೆಗಳ ರಾಷ್ಟ್ರೀಯ ಮಟ್ಟದ ಸ್ಪರ್ಧೆಯ ಪ್ರಯುಕ್ತ ಖಿರಾಅತ್, ಭಾಷಣ, ಹಾಡು, ಪ್ರಬಂಧ ಸ್ಪರ್ಧೆ, ರಸಪ್ರಶ್ನೆ, ಚಿತ್ರಕಲಾ ಸ್ಪರ್ಧೆಗಳು ನಡೆಯಲಿದ್ದು, ಶೈಕ್ಷಣಿಕ ವಿಚಾರ ಗೋಷ್ಠಿ, ಆರೋಗ್ಯ ವಿಚಾರ ಸಂಕಿರಣ, ಆಧ್ಯಾತ್ಮಿಕ ಶಿಬಿರ, ಪಾಕಶಾಸ್ತ್ರ, ದಫ್ಫ್ ಸ್ಪರ್ಧೆ ಗಳು ಕಾರ್ಯಕ್ರಮಕ್ಕೆ ಆಕರ್ಷಣೆ ನೀಡಲಿದೆ. ಮಹಿಳೆಯರಿಗೆ ಮತ್ತು ಮಕ್ಕಳಿಗೆ ಪ್ರತ್ಯೇಕವಾಗಿ ಹಲವು ಸ್ಪರ್ಧೆಗಳು ನಡೆಯಲಿದೆ.

ಸಂಜೆ 8 ಘಂಟೆಗೆ ನಡೆಯುವ ಸಮಾರೋಪ ಸಮಾರಂಭದಲ್ಲಿ ವಿಶೇಷ ಆಹ್ವಾನಿತರಾಗಿ ಖ್ಯಾತ ಉದ್ಯಮಿಯು ಸಮಾಜ ಸೇವಕರೂ, ತುಂಬೆ ಗ್ರೂಪ್ ಸ್ಥಾಪಕರಾದ ತುಂಬೆ ಮೊಯಿದೀನ್ ಹಾಜಿ ಭಾಗವಹಿಸಲಿದ್ದು, ಕೆಸಿಎಫ್ ಯುಎಇ ಸಮಿತಿ ಅಧ್ಯಕ್ಷರಾದ ಅಬ್ದುಲ್ ಹಮೀದ್ ಸಅದಿ ಅಧ್ಯಕ್ಷತೆ ವಹಿಸಲಿದ್ದಾರೆ, ಹಿರಿಯ ಉದ್ಯಮಿಗಳಾದ ಬಿಎಂ ಅಶ್ರಫ್ ಮೊಹಿಯುದ್ದೀನ್ ಸಮಾರಂಭವನ್ನು ಉದ್ಘಾಟಿಸಲಿದ್ದು, ಉಜಿರೆ ಮಲ್ಜಹ್ ಸಂಸ್ಥೆಯ ಜನರಲ್ ಮ್ಯಾನೇಜರ್ ಮಹಬೂಬುರ್ರಹ್ಮಾನ್ ಸಖಾಫಿ ಪ್ರಾಸ್ತಾವಿಕ ಭಾಷಣ ಮಾಡಲಿದ್ದಾರೆ, ಮುಖ್ಯ ಅತಿಥಿಗಳಾಗಿ ಅಬ್ದುಲ್ ರಝಾಕ್ ಹಾಜಿ ( ಉದ್ಯಮಿಗಳು ದುಬೈ) ಪ್ರವೀಣ್ ಕುಮಾರ್ ಶೆಟ್ಟಿ (ಅಧ್ಯಕ್ಷರು ಕರ್ನಾಟಕ ಎಂ ಆರ್ ಫೋರಮ್), ಶೈಖ್ ಅಮಲ್ ಮುನೀರ್ (ದುಬೈ), ಹಾಜಿ ಬಿಕೆ ಫೈಝಲ್ (ಉದ್ಯಮಿಗಳು, ದುಬೈ), ಬಿಎಂ ಶಬ್ಬಾರ್ (ಉದ್ಯಮಿಗಳು ದುಬೈ) ಸೇರಿದಂತೆ ಯುಎಇಯಲ್ಲಿರುವ ಹಿರಿಯ ಉದ್ಯಮಿಗಳು, ಧಾರ್ಮಿಕ ಮುಖಂಡರುಗಳು, ಸಾಮಾಜಿಕ ನಾಯಕರು ಭಾಗವಹಿಸಲಿದ್ದಾರೆ.

error: Content is protected !!

Join the Group

Join WhatsApp Group