(ನ್ಯೂಸ್ ಕಡಬ) newskadaba.com ಫೆ. 26: ಮಂಗಳೂರು: ಮಲಬಾರ್ ಗೋಲ್ಡ್ ಮತ್ತು ಡೈಮಂಡ್ಸ್ ನ ಮಂಗಳೂರು ಶಾಖೆಯಿಂದ ಸಿಅಸ್ಆರ್ ಯೋಜನೆಯಡಿ ಜಿಲ್ಲೆಯ ಸರ್ಕಾರಿ ಶಾಲೆಗಳ 462 ಕಾಲೇಜು ವಿದ್ಯಾರ್ಥಿಯನಿಯರಿಗೆ 37.28 ಲಕಷ ರೂಪಾಯಿ ಮೊತ್ತದ ವಿದ್ಯಾರ್ಥಿ ವೇತನ ವಿತರಣೆ ಕಾರ್ಯಕ್ರಮ ನಗರದ ಕುದ್ಮಲ್ ರಂಗರಾವ್ ಪುರಭವನದಲ್ಲಿ ನಡೆಯಿತು.


‘ಶಿಕ್ಷಣ ಸಬಲೀಕರಣ, ಮಹಿಳಾ ಸಬಲೀಕರಣ’ ಎಂಬ ಧ್ಯೇಯ ವಾಕ್ಯದಡಿ ನಡೆದ ಕಾರ್ಯಕ್ರಮದಲ್ಲಿ ಪ್ರಾಸ್ತಾವಿಕವಾಗಿ ಮಾತನಾಡಿದ ಮಂಗಳೂರು ಸ್ಟೋರ್ ಮುಖ್ಯಸ್ಥ ಶರತ್ ಚಂದ್ರನ್, ಸಂಸ್ಥೆಯು ತನ್ನ ಲಾಭಾಂಶದ ಶೇ. 5ರಷ್ಟನ್ನು ಪ್ರತಿವರ್ಷ ಸಿಎಸ್‌ಆರ್ ಯೋಜನೆಯಡಿ ವಿವಿಧ ಕಾರ್ಯಗಳಿಗೆ ಬಳಸುತ್ತಿದೆ.