(ನ್ಯೂಸ್ ಕಡಬ) newskadaba.com, ಫೆ.12. ಮಂಗಳೂರು: ಅನಾರೋಗ್ಯದ ಹಿನ್ನೆಲೆಯಲ್ಲಿ ತಮಿಳಿನ ಖ್ಯಾತ ನಟ ವಿಶಾಲ್ ತುಳುನಾಡಿನ ದೈವದ ಮೊರೆ ಹೋಗಿದ್ದಾರೆ. ಇತ್ತೀಚೆಗೆ ಬಿಡುಗಡೆಯಾದ ತಮಿಳಿನ ʼಮದಗಜರಾಜʼ ಸಿನಿಮಾ ಪ್ರಚಾರದ ವೇಳೆ ವಿಶಾಲ್ ತೀವ್ರ ಅನಾರೋಗ್ಯಕ್ಕೀಡಾಗಿದ್ದರು. ಮೈಕ್ ಹಿಡಿದು ಮಾತನಾಡುವ ವೇಳೆ ಮೈ ಕೈ ನಡುಗಿದ್ದರಿಂದ ಅವರ ಅಭಿಮಾನಿಗಳು ಆತಂಕಗೊಂಡಿದ್ದರು. ಬಳಿಕ ಅವರು ತೀವ್ರ ವೈರಲ್ ಫೀವರ್ನಿಂದ ಬಳಲುತ್ತಿರುವುದಾಗಿ ವೈದ್ಯರು ತಿಳಿಸಿದ್ದರು.
![](https://i0.wp.com/newskadaba.com/wp-content/uploads/2024/11/Pilya-Scheme.gif?resize=1200%2C1698&ssl=1)
![](https://i0.wp.com/newskadaba.com/wp-content/uploads/2024/10/1001612748.jpg?resize=904%2C1280&ssl=1)
ಆದರೆ, ಇದೀಗ ಅನಾರೋಗ್ಯದ ನಿವಾರಣೆಗಾಗಿ ತುಳುನಾಡಿನ ದೈವಸ್ಥಾನಕ್ಕೆ ನಟ ಆಗಮಿಸಿದ್ದಾರೆ. ದಕ್ಷಿಣ ಕನ್ನಡ ಜಿಲ್ಲೆಯ ಮೂಲ್ಕಿ ತಾಲೂಕಿನ ಹರಿಪಾದೆಯ ಧರ್ಮದೈವ ಜಾರಂದಾಯ ದೈವಸ್ಥಾನಕ್ಕೆ ಅವರು ಮಂಗಳವಾರ ರಾತ್ರಿ ಭೇಟಿ ನೀಡಿ, ದೈವಕ್ಕೆ ಮಲ್ಲಿಗೆ ಹೂವು ಅರ್ಪಿಸಿ, ಆರೋಗ್ಯ ಸಮಸ್ಯೆ ಬಗ್ಗೆ ಜಾರಂದಾಯ ದೈವದ ಬಳಿ ಪ್ರಾರ್ಥನೆ ಸಲ್ಲಿಸಿದ್ದಾರೆ.