ಅಕ್ರಮ ಮರಳು ದಂಧೆ ತಡೆಯಲು ಹೋದ ಮಹಿಳಾ ಅಧಿಕಾರಿಗೆ ಬೆದರಿಕೆ, ನಿಂದನೆ: ಮೂವರ ಬಂಧನ

(ನ್ಯೂಸ್ ಕಡಬ) newskadaba.com, ಫೆ.12. ಭದ್ರಾವತಿ: ಅಕ್ರಮ ಮರಳು ಗಣಿಗಾರಿಕೆ ನಡೆಯುತ್ತಿದ್ದ ಸ್ಥಳದ ಮೇಲೆ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಮಹಿಳಾ ಅಧಿಕಾರಿಯೊಬ್ಬರು ದಾಳಿ ನಡೆಸಿದ ಸಂದರ್ಭದಲ್ಲಿ ಜಿಲ್ಲೆಯ ಶಾಸಕರೊಬ್ಬರ ಪುತ್ರ ಅಶ್ಲೀಲ ಪದಗಳಿಂದ ನಿಂದಿಸಿ, ಬೆದರಿಕೆ ಹಾಕಿದ ಪ್ರಕರಣ ರಾಜ್ಯದಲ್ಲಿ ಸಾಕಷ್ಟು ಸದ್ದು ಮಾಡುತ್ತಿದ್ದು, ಈ ನಡುವಲ್ಲೇ ಪ್ರಕರಣ ಸಂಬಂಧ ಮೂವರು ಆರೋಪಿಗಳನ್ನು ಪೊಲೀಸರು ಬಂಧನಕ್ಕೊಳಪಡಿಸಿದ್ದಾರೆ.

ಬಂಧಿತರನ್ನು ದಾವಣಗೆರೆ ಜಿಲ್ಲೆಯ ಚನ್ನಗಿರಿ ತಾಲೂಕಿನ ಮಾವಿನಕಟ್ಟೆಯ ರವಿ (30), ಹಾಸನ ಜಿಲ್ಲೆಯ ಅರಕಲಗೂಡಿನ ವರುಣ್ (34) ಮತ್ತು ಭದ್ರಾವತಿ ತಾಲೂಕಿನ ಸುರೇಂದ್ರಗೌಡ ಕ್ಯಾಂಪ್‌ನ ಅಜಯ್ (28) ಎಂದು ಗುರುತಿಸಲಾಗಿದೆ.

Also Read  ಮೆಟ್ರೋ ಟಿಕೆಟ್ ಬೆಲೆ 10 ರೂ. ಇಳಿಕೆ, ಇಂದಿನಿಂದಲೇ ಜಾರಿ

ಪೊಲೀಸ್ ದೂರು ದಾಖಲಿಸಿದ ಮಹಿಳಾ ಅಧಿಕಾರಿಗಳು, ಆರೋಪಿಗಳು ತಮ್ಮ ತಂಡದ ಸದಸ್ಯರ ಮೇಲೆ ಭಾರೀ ವಾಹನ ಚಲಾಯಿಸುವುದಾಗಿ ಬೆದರಿಕೆ ಹಾಕಿದ್ದರು ಎಂದು ಹೇಳಿಕೊಂಡಿದ್ದಾರೆ. ಈ ಮಧ್ಯೆ, ಶಾಸಕನ ಪುತ್ರನ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿ ಬಿಜೆಪಿ ಕಾರ್ಯಕರ್ತರು ಭದ್ರಾವತಿಯ ತಹಶೀಲ್ದಾರ್ ಕಚೇರಿ ಮುಂದೆ ಪ್ರತಿಭಟನೆ ನಡೆಸಿದರು.

error: Content is protected !!