ಬಂಟ್ವಾಳ: ಅಕ್ರಮ ಮರಳು ಅಡ್ಡೆಗೆ ದಾಳಿ ► 48 ಬೋಟ್ ಗಳು ಸೇರಿ 60 ಲಕ್ಷ ರೂ‌. ಮೌಲ್ಯದ ಸ್ವತ್ತು ವಶ

(ನ್ಯೂಸ್ ಕಡಬ) newskadaba.com ಬಂಟ್ವಾಳ, ಮಾ.28. ಖಚಿತ ಮಾಹಿತಿ ಆಧರಿಸಿ ಅಕ್ರಮ ಮರಳು ಅಡ್ಡೆಗೆ ದಾಳಿ ಮಾಡಿರುವ ಪೊಲೀಸರು 48 ಬೋಟ್ ಗಳ ಸಹಿತ 60 ಲಕ್ಷ ರೂ. ಮೌಲ್ಯದ ಸೊತ್ತುಗಳನ್ನು ವಶಪಡಿಸಿಕೊಂಡ ಘಟನೆ ಬುಧವಾರದಂದು ಬಂಟ್ವಾಳದಲ್ಲಿ ನಡೆದಿದೆ.

ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯ ಬಡಗಬೆಳ್ಳೂರು ಎಂಬಲ್ಲಿ ಫಲ್ಗುಣಿ ನದಿಯಿಂದ ಅಕ್ರಮವಾಗಿ ಮರಳು ತೆಗೆಯಲಾಗುತ್ತಿದೆ ಎಂದು ಬಂದ ಖಚಿತ ಮಾಹಿತಿಯ ಮೆರೆಗೆ ದಕ್ಷಿಣ ಕನ್ನಡ ಜಿಲ್ಲಾ ಎಸ್ಪಿ ಡಾ| ರವಿಕಾಂತೇಗೌಡರವರ ಮಾರ್ಗದರ್ಶನದಲ್ಲಿ ದಾಳಿ ನಡೆಸಿದ ಪೊಲೀಸರು ಪೂರ್ತಿ ಮರಳು ತುಂಬಿದ್ದ 15 ನಾಡಬೋಟ್ ಗಳು ಹಾಗೂ ಭಾಗಶಃ ಮರಳು ತುಂಬಿದ್ದ 33 ಬೋಟ್ ಗಳು ಸೇರಿದಂತೆ ಒಟ್ಟು 48 ಬೊಟ್ ಗಳನ್ನು ವಶಕ್ಕೆ ಪಡೆದಿದ್ದಾರೆ. ವಶಪಡಿಸಿಕೊಂಡ ಒಟ್ಟು ಸ್ವತ್ತುಗಳ ಮೌಲ್ಯ ಸುಮಾರು 60 ಲಕ್ಷ ರೂ.ಗಳು ಎಂದು ಅಂದಾಜಿಸಲಾಗಿದೆ.

Also Read  ಮಕ್ಕಳ ಮೇಲೆ ಶೋಷಣೆ ಮತ್ತು ದೌರ್ಜನ್ಯ ಕಂಡುಬಂದಲ್ಲಿ ಈ ದೂರವಾಣಿ 1098 ಸಂಖ್ಯೆ ಗೆ ಕರೆ ಮಾಡಿ

 

IPS ಪ್ರೊಬೆಷನರಿ ಆಫೀಸರ್ ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಸಬ್ ಇನ್ಸ್‌ಪೆಕ್ಟರ್ ಆಗಿ ತರಬೇತಿ ಪಡೆಯುತ್ತಿರುವ ಅಕ್ಷಯ್ ಹಾಕೆಯವರ ನೇತೃತ್ವದಲ್ಲಿ ಸಬ್ ಇನ್ಸ್‌ಪೆಕ್ಟರ್ ಪ್ರಸನ್ನ ಹಾಗೂ ಸಿಬ್ಬಂದಿಗಳು ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದಾರೆ.

error: Content is protected !!
Scroll to Top