ಅಮೆರಿಕದ 47ನೇ ಅಧ್ಯಕ್ಷರಾಗಿ ಡೊನಾಲ್ಡ್ ಟ್ರಂಪ್‌ ಇಂದು ಪ್ರಮಾಣವಚನ

(ನ್ಯೂಸ್ ಕಡಬ) newskadaba.com ಜ.20: ಅಮೆರಿಕದ ನೂತನ ಅಧ್ಯಕ್ಷರಾಗಿ ಚುನಾಯಿತರಾಗಿರುವ ಡೊನಾಲ್ಡ್ ಟ್ರಂಪ್‌ ಅವರು ಇಂದು ಅಮೆರಿಕದ 47ನೇ ಅಧ್ಯಕ್ಷರಾಗಿ ಪ್ರಮಾಣವಚನ ಸ್ವೀಕರಿಸಲಿದ್ದಾರೆ. ವಾಷಿಂಗ್ಟನ್‌ ಡಿಸಿಯ ಕ್ಯಾಪಿಟಲ್‌ನಲ್ಲಿ ನಡೆಯುವ ಐತಿಹಾಸಿಕ ಸಮಾರಂಭದಲ್ಲಿ ಅಮೆರಿಕ ಸುಪ್ರೀಂಕೋರ್ಟ್‌ ಮುಖ್ಯ ನ್ಯಾಯಾಧೀಶ ನ್ಯಾ ಜಾನ್‌ ರಾಬರ್ಟ್‌್ಸ ಅವರು ಪ್ರಮಾಣ ವಚನ ಬೋಧಿಸಲಿದ್ದಾರೆ. ಈ ಕಾರ್ಯಕ್ರಮದಲ್ಲಿ ಸೆಲೆಬ್ರಿಟಿಗಳು, ವಿದೇಶಿ ಗಣ್ಯರು ಮತ್ತು ಕಂಪನಿಗಳ ಮುಖ್ಯಸ್ಥರು ಭಾಗಿಯಾಗಲಿದ್ದಾರೆ. ಭಾರತದ ವಿದೇಶಾಂಗ ಸಚಿವ ಜೈಶಂಕರ್‌ ಭಾರತವನ್ನು ಪ್ರತಿನಿಧಿಸಲಿದ್ದಾರೆ.

ಜಗತ್ತಿನ ಅತಿ ಶ್ರೀಮಂತನೂ ಆಗಿರುವ ಟ್ರಂಪ್‌ ಆಪ್ತ ಎಲಾನ್‌ ಮಸ್ಕ್‌, ಖ್ಯಾತ ಉದ್ಯಮಿ ಜೆಫ್‌ ಬೆಜೋಸ್‌‍ ಮತ್ತು ಫೇಸ್ಬುಕ್‌ ಮುಖ್ಯಸ್ಥ ಮಾರ್ಕ್‌ ಜುಕರ್ಬರ್ಗ್‌, ಚೀನಾ ಸಾಮಾಜಿಕ ಮಾಧ್ಯಮ ದೈತ್ಯ ಟಿಕ್ಟಾಕ್‌ ಮುಖ್ಯಸ್ಥ ಶೌ ಚೆವ್‌, ಮಾಜಿ ಅಧ್ಯಕ್ಷರಾದ ಬಿಲ್‌ ಕ್ಲಿಂಟನ್‌, ಜಾರ್ಜ್‌ ಡಬ್ಲ್ಯೂ ಬುಷ್‌ ಮತ್ತು ಬರಾಕ್‌ ಒಬಾಮಾ, ಬಿಲ್‌ ಕ್ಲಿಂಟನ್‌ ಪತ್ನಿ ಹಿಲರಿ ಕ್ಲಿಂಟನ್‌, ನಿರ್ಗಮಿತ ಅಧ್ಯಕ್ಷ ಜೋ ಬೈಡೆನ್‌, ನಿರ್ಗಮಿತ ಉಪಾಧ್ಯಕ್ಷೆ ಕಮಲಾ ಹ್ಯಾರಿಸ್‌‍ ಭಾಗವಹಿಸಲಿದ್ದಾರೆ.

Also Read  ಕರಾವಳಿಗೆ ಬಿಜೆಪಿ, ಕಾಂಗ್ರೆಸ್‌ ಹಿರಿಯ ನಾಯಕರ ಯಾತ್ರೆ ➤ ಮೇ 6ರಂದು ಮೋದಿ ಮಂಗಳೂರಿಗೆ

error: Content is protected !!
Scroll to Top