ಕಡಬ ಸರಸ್ವತಿ ವಿದ್ಯಾಲಯದಲ್ಲಿ ಅಂತರಾಷ್ಟ್ರೀಯ ಯೋಗ ದಿನಾಚರಣೆ
(ನ್ಯೂಸ್ ಕಡಬ) newskadaba.com ಕಡಬ, ಜೂ. 21. ಇಲ್ಲಿನ ಸರಸ್ವತೀ ವಿದ್ಯಾಲಯದಲ್ಲಿ ಅಂತರಾಷ್ಟ್ರೀಯ ಯೋಗ ದಿನಾಚರಣೆಯನ್ನು ಶನಿವಾರದಂದು ಆಚರಿಸಲಾಯಿತು. ಡಾ.ಗ್ರೀಷ್ಮ ಇವರ ನೇತೃತ್ವದಲ್ಲಿ ಶಾಲೆಯ 331 ಮಕ್ಕಳಿಂದ ಯೋಗಾಭ್ಯಾಸ ನಡೆಸಲಾಯಿತು. ಸಭಾಧ್ಯಕ್ಷತೆಯನ್ನು ರವಿರಾಜ್ ಶೆಟ್ಟಿ ಕಡಬ, ಮುಖ್ಯ ಅತಿಥಿಗಳಾಗಿ ಅಶೋಕ ರೈ ವಾರಿಜ ಟೆಕ್ಸ್ ಟೈಲ್ಸ್‍ನ ಮಾಲ್ಹಕರು ಹಾಗೂ ಆಡಳಿತ ಮಂಡಳಿಯ ನಿರ್ದೇಶಕಿ ಪ್ರಮೀಳಾ ಲೋಕೇಶ್ ಉಪಸ್ಥಿತರಿದ್ದರು. ಮುಖ್ಯಗುರುಗಳಾದ ಮಾಧವ ಕೋಲ್ಪೆ ಸ್ವಾಗತಿಸಿದರು. ಸಹಶಿಕ್ಷಕರಾದ ಗಿರೀಶ್ ವಂದಿಸಿದರು ಹಾಗೂ ಕಾರ್ಯಕ್ರಮವನ್ನು ಶ್ವೇತಾ ಮಾತಾಜಿ ನಿರೂಪಿಸಿದರು.
ಕಡಬ ಸರಸ್ವತಿ ವಿದ್ಯಾಲಯದಲ್ಲಿ ಅಂತರಾಷ್ಟ್ರೀಯ ಯೋಗ ದಿನಾಚರಣೆ Read More »
ಕರಾವಳಿ

