ಕಾರ್‌ಗೆ ಟ್ರಕ್ ಡಿಕ್ಕಿ – ಕೂದಲೆಳೆಯ ಅಂತರದಲ್ಲಿ ಪಾರಾದ ಮಹಿಳಾ ಕಲ್ಯಾಣ ಸಚಿವೆ
(ನ್ಯೂಸ್ ಕಡಬ) newskadaba.com, ಅ.25 ಉತ್ತರ ಪ್ರದೇಶ: ಇಲ್ಲಿನ ಮಕ್ಕಳ ಅಭಿವೃದ್ಧಿ ಮತ್ತು ಮಹಿಳಾ ಕಲ್ಯಾಣ ಸಚಿವೆ ಬೇಬಿ ರಾಣಿ ಮೌರ್ಯ ಅವರು ಶುಕ್ರವಾರ ರಾತ್ರಿ ಆಗ್ರಾ-ಲಕ್ನೋ ಎಕ್ಸ್‌ಪ್ರೆಸ್‌ವೇಯಲ್ಲಿ ಸಂಭವಿಸಿದ ರಸ್ತೆ ಅಪಘಾತದಿಂದ ಕೂದಲೆಳೆಯ ಅಂತರದಲ್ಲಿ ಪಾರಾಗಿದ್ದಾರೆ. . ಹತ್ರಾಸ್ ಜಿಲ್ಲೆಯಲ್ಲಿ ಕಾರ್ಯಕ್ರಮಗಳಲ್ಲಿ ಭಾಗವಹಿಸಿದ ಬಳಿಕ ಅವರು ಲಕ್ನೋಗೆ ತೆರಳುತ್ತಿದ್ದ ವೇಳೆ ಈ ಘಟನೆ ಸಂಭವಿಸಿದೆ. ಫಿರೋಜಾಬಾದ್ ಜಿಲ್ಲೆಯ 56ನೇ ಕಿಲೋಮೀಟರ್ ಬಳಿ ಟ್ರಕ್‌ನ ಟೈರ್ ಸಿಡಿದು, ಅದು ನಿಯಂತ್ರಣ ತಪ್ಪಿ ಸಚಿವರ ಕಾರಿಗೆ ಡಿಕ್ಕಿ ಹೊಡೆದಿದೆ. […]
ಕಾರ್‌ಗೆ ಟ್ರಕ್ ಡಿಕ್ಕಿ – ಕೂದಲೆಳೆಯ ಅಂತರದಲ್ಲಿ ಪಾರಾದ ಮಹಿಳಾ ಕಲ್ಯಾಣ ಸಚಿವೆ Read More »
ಕರ್ನಾಟಕ, ಬ್ರೇಕಿಂಗ್ ನ್ಯೂಸ್
