ಬೆಲೆಯೇರಿಕೆ | ಟೊಮೆಟೋ ಸುತ್ತ ಸರ್ಪಗಾವಲು- ರಾತ್ರಿ ಹೊತ್ತು ಟಾರ್ಚ್ ಹಾಕಿ ಅಡ್ಡಾಡುತ್ತಿರುವ ರೈತರು- ವಿಡಿಯೋ ವೈರಲ್
(ನ್ಯೂಸ್ ಕಡಬ) newskadaba.com ಕೋಲಾರ, ಜು.13. ದಿನದಿಂದ ದಿನಕ್ಕೆ ಟೊಮ್ಯಾಟೋ ಬೆಲೆ ಗಗನಕ್ಕೇರುತ್ತಿದ್ದು, ಇದರಿಂದಾಗಿ ಅನೇಕ ಜನರ ಆರ್ಥಿಕತೆಯ ಮೇಲೆ ಹೊಡೆತಬಿದ್ದಿದೆ. ಅಲ್ಲದೇ ಅಡುಗೆಗೆ ಟೊಮ್ಯಾಟೋ ಹಾಕಬೇಕೋ ಬೇಡವೋ ಎಂದು ಯೋಚಿಸುವ ಮಟ್ಟಕ್ಕೆ ತಲುಪಿದೆ. ಅದಾಗ್ಯೂ ಈ ಪರಿಸ್ಥಿತಿಯಲ್ಲಿ ಅಲ್ಲಲ್ಲಿ ಟೊಮ್ಯಾಟೊ ಕಳ್ಳತನ ಪ್ರಕರಣಗಳು ನಡೆಯುತ್ತಲೇ ಇದೆ. ಬೆಲೆ ಏರಿಕೆಯಿಂದಾಗಿ ರೈತರು ತಮ್ಮ ತೋಟಗಳಲ್ಲಿ ಬೆಳೆದ ಟೊಮೆಟೊ ವನ್ನು ಕಾಪಾಡಿಕೊಳ್ಳಲು ಹರಸಾಹಸ ಪಡುತ್ತಿದ್ದು, ಹಗಲು ರಾತ್ರಿಯೆನ್ನದೇ ಗಿಡದ ಬಳಿಯೇ ಮಲಗುತ್ತಿದ್ದಾರೆ. ಆದರೂ ಕಳ್ಳರ ಕಾಟದಿಂದ ತಪ್ಪಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. […]

