uppinangadi

ಪಾಸ್ ಇಲ್ಲವೆಂದು ವಿದ್ಯಾರ್ಥಿಯನ್ನು ಅರ್ಧದಲ್ಲೇ ಇಳಿಸಿ ಅವಮಾನಿಸಿದ ನಿರ್ವಾಹಕ: ಆರೋಪ

(ನ್ಯೂಸ್ ಕಡಬ) newskadaba.com ಉಪ್ಪಿನಂಗಡಿ, ಅ. 01.  ಇಲ್ಲಿನ ಖಾಸಗಿ ವಿದ್ಯಾ ಸಂಸ್ಥೆಯ ಹನ್ನೊಂದರ ಹರೆಯದ ವಿದ್ಯಾರ್ಥಿ ಮನೆಗೆ ತೆರಳುವ ಸಂದರ್ಭದಲ್ಲಿ ಬಸ್ ಪಾಸ್ ಹೊಂದಿರದ ಕಾರಣಕ್ಕೆ ದಾರಿ ಮಧ್ಯದಲ್ಲಿಯೇ ವಿದ್ಯಾರ್ಥಿಯನ್ನು ಬಸ್ಸಿನಿಂದ ಇಳಿಸಿ ಅವಮಾನಿಸಿದ ಘಟನೆ ಬಗ್ಗೆ ಬಾಲಕನ ಹೆತ್ತವರು ಜಿಲ್ಲಾಡಳಿತಕ್ಕೆ ದೂರು ನೀಡಿದ್ದಾರೆ. ಉಪ್ಪಿನಂಗಡಿ ಬಸ್ ನಿಲ್ದಾಣದಿಂದ ಹೊರಟ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಬಸ್ ಕೆ ಎ19 ಎಫ್ 3276 ರನ್ನೇರಿದ್ದ ಈ ವಿದ್ಯಾರ್ಥಿಯು ಬಸ್ ನಿರ್ವಾಹಕ ಬಂದು ಬಸ್ ಪಾಸ್ […]

ಪಾಸ್ ಇಲ್ಲವೆಂದು ವಿದ್ಯಾರ್ಥಿಯನ್ನು ಅರ್ಧದಲ್ಲೇ ಇಳಿಸಿ ಅವಮಾನಿಸಿದ ನಿರ್ವಾಹಕ: ಆರೋಪ Read More »

ಕರಾವಳಿ

ಅಂತರಾಷ್ಟ್ರೀಯ ಮಟ್ಟದ ‘ಕರಾಟೆ ಚಾಂಪಿಯನ್‍ಶಿಪ್- 2024’: ಮಾಣಿ ಬಾಲವಿಕಾಸ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿ ಶಮಿರಾಜ್ ಆಳ್ವಗೆ ಬೆಳ್ಳಿಯ ಪದಕ

(ನ್ಯೂಸ್ ಕಡಬ) newskadaba.com ಉಪ್ಪಿನಂಗಡಿ, ಸೆ. 13.  ಅಂತರಾಷ್ಟ್ರೀಯ ಮಟ್ಟದ ‘ಕರಾಟೆ ಚಾಂಪಿಯನ್‍ಶಿಪ್- 2024’ ಕರಾಟೆ ಸ್ಪರ್ಧೆಯ 13 ವರ್ಷದ ವಿಭಾಗದಲ್ಲಿ ಮಾಣಿ ಬಾಲವಿಕಾಸ ಆಂಗ್ಲ ಮಾಧ್ಯಮ ಶಾಲೆಯ 8ನೇ ತರಗತಿ ವಿದ್ಯಾರ್ಥಿ ಶಮಿರಾಜ್ ಆಳ್ವ ಕಟಾದಲ್ಲಿ ಬೆಳ್ಳಿಪದಕವನ್ನು ಪಡೆದಿದ್ದಾನೆ. ಸೆಲ್ಫ್ ಡಿಫೆನ್ಸ್ ಸ್ಕೂಲ್ ಆಫ್ ಇಂಡಿಯನ್ ಕರಾಟೆ ಮತ್ತು ಮಂಗಳೂರು ಇಂಡಿಯನ್ ಕರಾಟೆ ಡೋಜೋ ವತಿಯಿಂದ ಕುಲಶೇಖರದ ಕೋರ್ಡೆಲ್ ಚರ್ಚ್ ಮೈದಾನದಲ್ಲಿ ಈ ಚಾಂಪಿಯನ್ ಶಿಪ್ ನಡೆಯಿತು. ಪೆರ್ನೆ ನಿವಾಸಿಯಾಗಿರುವ ಈತ ಪ್ರಮೋದ್ ಆಳ್ವ ಮತ್ತು

ಅಂತರಾಷ್ಟ್ರೀಯ ಮಟ್ಟದ ‘ಕರಾಟೆ ಚಾಂಪಿಯನ್‍ಶಿಪ್- 2024’: ಮಾಣಿ ಬಾಲವಿಕಾಸ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿ ಶಮಿರಾಜ್ ಆಳ್ವಗೆ ಬೆಳ್ಳಿಯ ಪದಕ Read More »

ಕರಾವಳಿ, ಕ್ರೀಡಾ ನ್ಯೂಸ್

‘ಇನ್ಸ್ಪೈರ್ ಅವಾರ್ಡ್ ಮಾನಕ್’ ಸ್ಪರ್ಧೆಯಲ್ಲಿ ರಾಷ್ಟ್ರಮಟ್ಟಕ್ಕೆ ಆಯ್ಕೆಯಾದ ಅಬ್ದುಲ್ ಬಾಸಿತ್  ತನ್ವೀರುಲ್ ಇಸ್ಲಾಂ ಮದ್ರಸದ ಎಸ್ ಕೆಎಸ್ ಬಿವಿ ವತಿಯಿಂದ ಸನ್ಮಾನ

(ನ್ಯೂಸ್ ಕಡಬ) newskadaba.com ಉಪ್ಪಿನಂಗಡಿ, ಸೆ. 10.  ವಿಜ್ಞಾನ ಮಾದರಿಯಲ್ಲಿ ರಾಷ್ಟ್ರಮಟ್ಟಕ್ಕೆ ಆಯ್ಕೆಯಾದ ಅಬ್ದುಲ್ ಬಾಸಿತ್ ಅವರನ್ನು ಮಾಲಿಕುದ್ದೀನಾರ್ ಜುಮಾ ಮಸೀದಿ ಇದರ ಅಧೀನದಲ್ಲಿರುವ ತನ್ವೀರುಲ್ ಇಸ್ಲಾಂ ಮದ್ರಸದ ಎಸ್ ಕೆ ಎಸ್ ಬಿವಿ ವತಿಯಿಂದ ಸನ್ಮಾನಿಸಲಾಯಿತು. ಅಬ್ದುಲ್ ಬಾಸಿತ್ ರಚಿಸಿದ ‘ಸೀವಿಂಗ್ ಚೆಯರ್ ಫಾರ್ ಹ್ಯಾಂಡಿಕ್ಯಾಪ್ಸ್’ ಎಂಬ ವಿಜ್ಞಾನ ಮಾದರಿ ಕೇಂದ್ರ ಸರ್ಕಾರದ ವಿಜ್ಞಾನ ತಂತ್ರಜ್ಞಾನ ಸಚಿವಾಲಯ ನಡೆಸುವ ‘ಇನ್ಸ್ಪೈರ್ ಅವಾರ್ಡ್ ಮಾನಕ್’ ಸ್ಪರ್ಧೆಯಲ್ಲಿ ರಾಷ್ಟ್ರಮಟ್ಟಕ್ಕೆ ಆಯ್ಕೆಯಾಗಿದೆ. ಸೆಪ್ಟೆಂಬರ್ 14 ರಿಂದ 20 ರವರೆಗೆ ದಿಲ್ಲಿಯ

‘ಇನ್ಸ್ಪೈರ್ ಅವಾರ್ಡ್ ಮಾನಕ್’ ಸ್ಪರ್ಧೆಯಲ್ಲಿ ರಾಷ್ಟ್ರಮಟ್ಟಕ್ಕೆ ಆಯ್ಕೆಯಾದ ಅಬ್ದುಲ್ ಬಾಸಿತ್  ತನ್ವೀರುಲ್ ಇಸ್ಲಾಂ ಮದ್ರಸದ ಎಸ್ ಕೆಎಸ್ ಬಿವಿ ವತಿಯಿಂದ ಸನ್ಮಾನ Read More »

ಕರಾವಳಿ

ಕಂಟೈನರ್ ಲಾರಿ- ಕಾರು ಢಿಕ್ಕಿ: ಓರ್ವ ಮೃತ್ಯು..!  ಇಬ್ಬರು ಗಂಭೀರ ಗಾಯ                 

(ನ್ಯೂಸ್ ಕಡಬ) newskadaba.com ಉಪ್ಪಿನಂಗಡಿ, ಸೆ. 10.  ಕಂಟೈನರ್ ಲಾರಿಯೊಂದು ಢಿಕ್ಕಿ ಹೊಡೆದ ಪರಿಣಾಮ ಕಾರಿನಲ್ಲಿದ್ದ ವ್ಯಕ್ತಿಯೋರ್ವರು ಮೃತಪಟ್ಟು, ಇಬ್ಬರು ಗಾಯಗೊಂಡ ಘಟನೆ ಸೆ.9ರಂದು ಸಂಜೆ ಶಿರಾಡಿ ಘಾಟಿಯ ಕೆಂಪುಹೊಳೆ ಬಳಿ ನಡೆದಿದೆ. ಮೃತರನ್ನು ಹಾಸನಿವಾಸಿ ಚಂದ್ರೇಗೌಡ (50) ಎಂದು ಗುರುತಿಸಲಾಗಿದೆ. ಅದೇ ಕಾರಿನಲ್ಲಿದ್ದ ಚಿನ್ನೇಗೌಡ (31) ಹಾಗೂ ಶೀಲಾ (40) ಎಂಬವರು ಗಂಭೀರ ಗಾಯಗೊಂಡಿದ್ದು, ಅವರನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಮಂಗಳೂರು ಕಡೆಯಿಂದ ಹಾಸನ ಕಡೆಗೆ ಹೋಗುತ್ತಿದ್ದ ಕಾರು ಎದುರಿನಿಂದ ಬರುತ್ತಿದ್ದ ಕಂಟೈನರ್‌ಗೆ ಡಿಕ್ಕಿ ಹೊಡೆದಿದ್ದು,

ಕಂಟೈನರ್ ಲಾರಿ- ಕಾರು ಢಿಕ್ಕಿ: ಓರ್ವ ಮೃತ್ಯು..!  ಇಬ್ಬರು ಗಂಭೀರ ಗಾಯ                  Read More »

ಕರಾವಳಿ, ಕ್ರೈಮ್ ನ್ಯೂಸ್

ಉಪ್ಪಿನಂಗಡಿ: ಶಾಂತಿ ಭಂಗ ಪ್ರಕರಣ – ಐವರು ಪೊಲೀಸ್ ವಶಕ್ಕೆ

(ನ್ಯೂಸ್ ಕಡಬ)newskadaba.com ಉಪ್ಪಿನಂಗಡಿ, ಆ.09. ವಾಹನಕ್ಕೆ ಸೈಡ್ ಕೊಡುವ ವಿಚಾರದಲ್ಲಿ ಜಗಳಕ್ಕಿಳಿದಿದ್ದ ಐವರ ವಿರುದ್ಧ ಉಪ್ಪಿನಂಗಡಿ ಪೊಲೀಸರು ಸಾರ್ವಜನಿಕ ಶಾಂತಿ ಭಂಗ ಪ್ರಕರಣದಡಿ ಕೇಸ್ ದಾಖಲಿಸಿಕೊಂಡಿರುವ ಬಗ್ಗೆ ವರದಿಯಾಗಿದೆ. ನೆಲ್ಯಾಡಿಯ ಬೆಥನಿ ಕಾಲೇಜು ಬಳಿಯ ರಸ್ತೆಯಲ್ಲಿ ಘಟನೆ ನಡೆದಿದ್ದು, ಪ್ರಕರಣಕ್ಕೆ ಸಂಬಂಧಿಸಿ ಮಹೇಶ್ ಕೆ (30), ಅಶ್ವಥ್ (26), ಸ್ವರೂಪ್ ಪಟ್ಟೆ (25), ಅಖಿಲೇಶ್ (21) ಲಕ್ಷ್ಮಣ ಗೌಡ (45) ಎಂಬವರನ್ನು ವಶಕ್ಕೆ ಪಡೆದುಕೊಂಡು ಪೊಲೀಸರು 2 ಬೈಕ್ ಗಳನ್ನು 5 ಮೊಬೈಲ್ ಗಳನ್ನು ವಶಪಡಿಸಿಕೊಂಡಿದ್ದಾರೆ ಎನ್ನಲಾಗಿದೆ.

ಉಪ್ಪಿನಂಗಡಿ: ಶಾಂತಿ ಭಂಗ ಪ್ರಕರಣ – ಐವರು ಪೊಲೀಸ್ ವಶಕ್ಕೆ Read More »

ಕರಾವಳಿ, ಕರ್ನಾಟಕ

ರಬ್ಬರ್ ಟ್ಯಾಪಿಂಗ್ ಕಾರ್ಮಿಕರ ನಡುವೆ ಜಗಳ..! – ಓರ್ವ ಆಸ್ಪತ್ರೆಗೆ ದಾಖಲು

(ನ್ಯೂಸ್ ಕಡಬ)newskadaba.com ಉಪ್ಪಿನಂಗಡಿ, ಆ.07. ರಬ್ಬರ್ ಟ್ಯಾಪಿಂಗ್ ಕಾರ್ಮಿಕರ ನಡುವೆ ಜಗಳ ನಡೆದು ಓರ್ವ ಆಸ್ಪತ್ರೆಗೆ ದಾಖಲಾದ ಘಟನೆ ಉಪ್ಪಿನಂಗಡಿ ಪೆರಿಯಡ್ಕದ ನೆಡ್ಚಿಲ್ ಬಳಿ ನಡೆದಿದೆ. ಕೇರಳ ಮೂಲದ ಮೂವರು ಇಲ್ಲಿ ಬಾಡಿಗೆ ರೂಂನಲ್ಲಿದ್ದು, ರಬ್ಬರ್ ಟ್ಯಾಪಿಂಗ್ ಕೆಲಸ ನಡೆಸುತ್ತಿದ್ದರು. ಇವರು ತಮ್ಮ ಬಾಡಿಗೆ ಕೊಠಡಿಯಲ್ಲಿ ಪರಸ್ಪರ ಜಗಳವಾಡಿಕೊಂಡಿದ್ದಾರೆ. ಈ ವೇಳೆ ಇಬ್ಬರು ಸೇರಿ ಮರದ ತುಂಡಿನಿಂದ ಮತ್ತೋರ್ವನ ತಲೆಗೆ ಹೊಡೆದಿದ್ದಲ್ಲದೆ, ತೀವ್ರ ಗಾಯಗೊಂಡು ಬಿದ್ದಿದ್ದ ಈತನನ್ನು ಕೊಠಡಿಯ ಹೊರಗೆ ಹಾಕಿ, ಬಾಗಿಲು ಹಾಕಿ ಕುಳಿತ್ತಿದ್ದರು ಎನ್ನಲಾಗಿದೆ.

ರಬ್ಬರ್ ಟ್ಯಾಪಿಂಗ್ ಕಾರ್ಮಿಕರ ನಡುವೆ ಜಗಳ..! – ಓರ್ವ ಆಸ್ಪತ್ರೆಗೆ ದಾಖಲು Read More »

ಕರಾವಳಿ, ಕ್ರೈಮ್ ನ್ಯೂಸ್

ನೇತ್ರಾವತಿ ನದಿಯಲ್ಲಿ ಕೊಳೆತ ಸ್ಥಿತಿಯಲ್ಲಿ ಮೃತದೇಹ ಪತ್ತೆ

(ನ್ಯೂಸ್ ಕಡಬ)newskadaba.com ಉಪ್ಪಿನಂಗಡಿ, ಆ.03. ನೇತ್ರಾವತಿ ನದಿಯಲ್ಲಿ ಮಹಿಳೆಯೋರ್ವರ ಮೃತದೇಹ ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿದ್ದು, ಮೃತದೇಹದ ಗುರುತು ಪತ್ತೆಗೆ ಪೊಲೀಸರು ಮನವಿ ಮಾಡಿದ್ದಾರೆ. ಇಲ್ಲಿನ ನೇತ್ರಾವತಿ ನದಿ ನೀರಿನಲ್ಲಿ ಸುಮಾರು 50ರಿಂದ 55 ವರ್ಷದ ಮಹಿಳೆಗೆ ಮೃತದೇಹ ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿದ್ದು, 142 ಸೆಂ. ಮೀ. ಎತ್ತರವಿದ್ದು, ಕೆಂಪು ಬಣ್ಣದ ರವಿಕೆ ಹಾಗೂ ಹಸಿರು ಬಣ್ಣದ ಬಟ್ಟೆ ತೊಟ್ಟಿರುತ್ತಾರೆ. ಮೂಗಲ್ಲಿ ಮೂಗುತಿ ಹಾಗೂ ಬಲ ಕೈಯಲ್ಲಿ ಗುಲಾಬಿ ಬಣ್ಣದ ಗಾಜಿನ ಬಳೆಯೊಂದಿದೆ. ಆದ್ದರಿಂದ ಇವರ ಬಗ್ಗೆ ತಿಳಿದವರು

ನೇತ್ರಾವತಿ ನದಿಯಲ್ಲಿ ಕೊಳೆತ ಸ್ಥಿತಿಯಲ್ಲಿ ಮೃತದೇಹ ಪತ್ತೆ Read More »

ಕರಾವಳಿ, ಕ್ರೈಮ್ ನ್ಯೂಸ್

ನೇತ್ರಾವತಿ- ಕುಮಾರಧಾರ ನದಿ ನೀರಿನ ಮಟ್ಟ ಇಳಿಕೆ – ತಹಶೀಲ್ದಾರ್ ಭೇಟಿ

(ನ್ಯೂಸ್ ಕಡಬ)newskadaba.com ಉಪ್ಪಿನಂಗಡಿ, ಜು.26. ನೇತ್ರಾವತಿ- ಕುಮಾರಧಾರ ನದಿ ನೀರಿನ ಮಟ್ಟವು ಇಳಿಕೆಯಾಗತೊಡಗಿದ್ದು, ಇಲ್ಲಿನ ಸಹಸ್ರಲಿಂಗೇಶ್ವರ – ಮಹಾಕಾಳಿ ದೇವಾಲಯದ ಬಳಿ ನೇತ್ರಾವತಿ ನದಿಗಿಳಿಯುವ 38  ಮೆಟ್ಟಿಲುಗಳಲ್ಲಿ 11 ಮೆಟ್ಟಿಲುಗಳು ಕಾಣಿಸಿಕೊಂಡಿದೆ ಎನ್ನಲಾಗಿದೆ. ನಿನ್ನೆ 3 ಮೆಟ್ಟಿಲುಗಳಷ್ಟೇ ಕಾಣಿಸಿಕೊಂಡಿದ್ದವು. ಪುತ್ತೂರು ತಹಶೀಲ್ದಾರ್ ಶಿವಶಂಕರ್ ದೇವಾಲಯದ ಬಳಿ ಆಗಮಿಸಿ ನದಿಗಳ ವೀಕ್ಷಣೆ ನಡೆಸಿದರು.

ನೇತ್ರಾವತಿ- ಕುಮಾರಧಾರ ನದಿ ನೀರಿನ ಮಟ್ಟ ಇಳಿಕೆ – ತಹಶೀಲ್ದಾರ್ ಭೇಟಿ Read More »

ಕರಾವಳಿ

ತೀರ್ವ ಜ್ವರದಿಂದ ಎಂಟು ತಿಂಗಳ ಮಗು ಮೃತ್ಯು ➤ ಪತಿ ವಿರುದ್ದ ದೂರು ದಾಖಲು 

(ನ್ಯೂಸ್ ಕಡಬ)newskadaba.ಉಪ್ಪಿನಂಗಡಿ, ಜು. 4. ಅನಾರೋಗ್ಯದಿಂದ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಫಲಕಾರಿಯಾಗದೆ ಎಂಟು ತಿಂಗಳ ಮಗು ಮೃತಪಟ್ಟಿರುವ ಘಟನೆ ಉಪ್ಪಿನಂಗಡಿಯ ನೆಕ್ಕಿಲಾಡಿ ಗ್ರಾಮದಲ್ಲಿ ನಡೆದಿದೆ. ಸಂತ್ಯಡ್ಕ ನಿವಾಸಿಗಳಾದ ಶ್ರೀಧರ ನಾಯ್ಕಹಾಗೂ ಚಿತ್ರಾ ದಂಪತಿಯ ಎಂಟು ತಿಂಗಳ ಮಗು ಜೀವಿತ್ ತೀವ್ರ ಜ್ವರದ ಕಾರಣ ಮಂಗಳೂರಿನ ವೆನ್ಲಾಕ್ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು, ಆದರೆ ಚಿಕಿತ್ಸೆ ಫಲಕಾರಿಯಾಗದೇ ಜುಲೈ 1 ರಂದು ಮಗು ಮೃತಪಟ್ಟಿದೆ.ಜುಲೈ 2 ರಂದು ಚಿತ್ರಾ ತನ್ನ ಮಗುವಿನ ಮರಣದ ಕುರಿತು ಸಂಶಯ ವ್ಯಕ್ತಪಡಿಸಿ ತನ್ನ ಗಂಡನ ಮೇಲೆ

ತೀರ್ವ ಜ್ವರದಿಂದ ಎಂಟು ತಿಂಗಳ ಮಗು ಮೃತ್ಯು ➤ ಪತಿ ವಿರುದ್ದ ದೂರು ದಾಖಲು  Read More »

ಕರಾವಳಿ, ಕರ್ನಾಟಕ

ಬಾಲಕಿಯರಿಗೆ ಕಿರುಕುಳ   ➤ಮದ್ರಸ ಶಿಕ್ಷಕ  ಅರೆಸ್ಟ್

(ನ್ಯೂಸ್ ಕಡಬ)newskadaba.com ಕಾಸರಗೋಡು, ಜೂ . 16 . ಅಪ್ರಾಪ್ತ ಬಾಲಕಿಯರಿಗೆ ಕಿರುಕುಳ ನೀಡಿದ ಆರೋಪದ ಮೇಲೆ ಮದ್ರಸ ಶಿಕ್ಷಕನನ್ನು ಬಂಧಿಸಿದ ಘಟನೆ ಕಾಸರಗೋಡಿನಲ್ಲಿ ನಡೆದಿದೆ. ಬಂಧಿತ ಆರೋಪಿಯನ್ನು ದಕ್ಷಿಣ ಕನ್ನಡದ ಉಪ್ಪಿನಂಗಡಿ ನಿವಾಸಿ ಅಬ್ದುಲ್ ಹಮೀದ್ ಎಂದು ಗುರುತಿಸಲಾಗಿದೆ . ಮದ್ರಸ ಶಿಕ್ಷಕರಾಗಿದ್ದ ಇವರು  ಏಳು ಮತ್ತು ಒಂಬತ್ತನೇ ತರಗತಿಯಲ್ಲಿ ಓದುತ್ತಿರುವ ಬಾಲಕಿಯರಿಗೆ ಕಿರುಕುಳ ನೀಡುತ್ತಿರುವ ಬಗ್ಗೆ ಆರೋಪಿಸಲಾಗಿತ್ತು.ಆದೂರು ಪೊಲೀಸರು ಈತನನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿ, ನ್ಯಾಯಾಂಗ ಬಂಧನ ವಿಧಿಸಲಾಗಿದೆ.  

ಬಾಲಕಿಯರಿಗೆ ಕಿರುಕುಳ   ➤ಮದ್ರಸ ಶಿಕ್ಷಕ  ಅರೆಸ್ಟ್ Read More »

ಕರ್ನಾಟಕ
Scroll to Top