Udupi

ಮೀನುಗಾರಿಕಾ ದೋಣಿ ದುರಂತ ➤ ಶಾಸಕ ವೇದವ್ಯಾಸ್ ಕಾಮತ್ ಸಾಂತ್ವನ

(ನ್ಯೂಸ್ ಕಡಬ) newskadaba.com ಮಂಗಳೂರು ಡಿ. 02 : ಧಕ್ಕೆಯ ಅಳಿವೆ ಬಾಗಿಲಿನಲ್ಲಿ ಸಂಭವಿಸಿದ ಮೀನುಗಾರಿಕಾ ದೋಣಿ ದುರಂತದಿಂದ ಮೃತಪಟ್ಟವರಿಗೆ ಸರಕಾರದಿಂದ ಪರಿಹಾರ ಧನ ಘೋಷಿಸುವ ಕುರಿತು ಸಚಿವ ಕೋಟಾ ಶ್ರೀನಿವಾಸ್ ಪೂಜಾರಿ ಅವರೊಂದಿಗೆ ಚರ್ಚಿಸಿದ್ದೇನೆ ಎಂದು ಶಾಸಕ ವೇದವ್ಯಾಸ್ ಕಾಮತ್ ತಿಳಿಸಿದ್ದಾರೆ.   ಬಂದರಿಗೆ ಭೇಟಿ ನೀಡಿದ ವೇಳೆ ಮಾತನಾಡಿದ‌ ಶಾಸಕ ಕಾಮತ್, ಬೋಟ್ ದುರಂತಕ್ಕೀಡಾಗಿರುವ‌ ವಿಚಾರ ತಿಳಿದು ಮನಸ್ಸಿಗೆ ಅತೀವ ನೋವಾಗಿದೆ. ವಿಚಾರ ತಿಳಿದ ತಕ್ಷಣವೇ ಅಧಿಕಾರಿಗಳೊಂದಿಗೆ ಮಾತುಕತೆ ನಡೆಸಿದ್ದೇನೆ. ಇಬ್ಬರ ಮೃತ ದೇಹ ಪತ್ತೆಯಾಗಿದ್ದು […]

ಮೀನುಗಾರಿಕಾ ದೋಣಿ ದುರಂತ ➤ ಶಾಸಕ ವೇದವ್ಯಾಸ್ ಕಾಮತ್ ಸಾಂತ್ವನ Read More »

ಕರಾವಳಿ

ಉಡುಪಿ: ಅಂಧ ಕಲಾವಿದನ ಹಣ ಜೇಬುಗಳ್ಳರ ಪಾಲು

(ನ್ಯೂಸ್ ಕಡಬ) newskadaba.com ಉಡುಪಿ, ಡಿ. 02 : ಅಂಧ ಸಂಗೀತ ಕಲಾವಿದನ ಹಣವನ್ನು ಜೇಬುಗಳ್ಳರು ದೋಚಿದ್ದು, ಕಲಾವಿದ ತನ್ನೂರು ಬಾಗಲಕೋಟೆಗೆ ತೆರಳಲು ಟಿಕೆಟ್ ಗೆ ಹಣವಿಲ್ಲದೆ ಉಡುಪಿಯಲ್ಲಿ ಅಸಹಾಯಕ ಪರಿಸ್ಥಿತಿ ಎದುರಿಸಿದ್ದಾರೆ. ಈ ಸಂದರ್ಭ ಉಡುಪಿ ನಾಗರಿಕ ಸಮಿತಿಯ ಸಹೃದಯ ಕಾರ್ಯಕರ್ತರಾದ ನಿತ್ಯಾನಂದ ಒಳಕಾಡು, ತಾರಾನಾಥ್ ಮೇಸ್ತ ಶಿರೂರು ನೆರವಿಗೆ ಬಂದಿದ್ದು, ಅಂಧ ಕಲಾವಿದನನ್ನು ಬಾಗಲಕೋಟೆಗೆ ಬಸ್ಸು ಹತ್ತಿಸಿ ಕಳಿಸಿಕೊಟ್ಟಿದ್ದಾರೆ. ನಗರಸಭೆ ಆಸ್ತಿ ತೆರಿಗೆ ಸಲಹಾ ಕೇಂದ್ರದ ಸಿಬ್ಬಂದಿ ವಿದ್ಯಾ, ಚಂದ್ರಾವತಿ, ಪೂರ್ಣಿಮಾ, ತ್ರಿವೇಣಿ ಅವರು ಹಸಿದ

ಉಡುಪಿ: ಅಂಧ ಕಲಾವಿದನ ಹಣ ಜೇಬುಗಳ್ಳರ ಪಾಲು Read More »

ಕರಾವಳಿ, ಕ್ರೈಮ್ ನ್ಯೂಸ್

ಕರ್ನಾಟಕ ಬಂದ್ ಗೆ ಕರೆ ನೀಡಿದವರ ಆಸ್ತಿ ಜಪ್ತಿ ಮಾಡಿ ➤ ಡಿ.5ರ ಬಂದ್ ವಿರೋಧಿಸಿ ಪ್ರತಿಭಟನೆ

(ನ್ಯೂಸ್ ಕಡಬ) newskadaba.com ಬೆಂಗಳೂರು ಡಿ. 02:ರಾಜ್ಯ ಸರ್ಕಾರ ಮರಾಠಾ ಅಭಿವೃದ್ದಿ ನಿಗಮ ರಚನೆ ವಿರೋಧಿಸಿ ಕನ್ನಡ ಪರ ಸಂಘಟನೆಗಳು ಡಿ.5 ರಂದು ಕರೆ ನೀಡಿರುವ ಕರ್ನಾಟಕ ಬಂದನ್ನು ವಿರೋಧಿಸಿ ಮಂಗಳವಾರ ನಗರದಲ್ಲಿ ವಿವಿಧ ಸಂಘಟನೆಗಳ ನೇತೃತ್ವದಲ್ಲಿ ಪ್ರತಿಭಟನೆ ನಡೆಯಿತು. ಕರ್ನಾಟಕ ಮಾಧ್ಯಮ ಪರಿಷತ್ ಮತ್ತು ಜೀಸ್ನಾ ಶಿಕ್ಷಣ ಮತ್ತು ಸಮಾಜ ಕಲ್ಯಾಣ ಸಂಸ್ಥೆ ಹಾಗೂ ಸುದರ್ಶನ ಸಮೀತಿ ನೇತೃತ್ವದಲ್ಲಿ ನೂರಾರು‌ ಕಾರ್ಯಕರ್ತರು ನಗರದ ಡಾ.ಬಿ.ಆರ್.ಅಂಬೇಡ್ಕರ್ ವೃತ್ತದಲ್ಲಿ ಪ್ರತಿಭಟನೆ ನಡೆಸಿದರು. ನಂತರ ಡಾ.ಅಂಬೇಡ್ಕರ್ ವೃತ್ತದಿಂದ ಜಿಲ್ಲಾಧಿಕಾರಿ ಕಚೇರಿ ವರೆಗೆ

ಕರ್ನಾಟಕ ಬಂದ್ ಗೆ ಕರೆ ನೀಡಿದವರ ಆಸ್ತಿ ಜಪ್ತಿ ಮಾಡಿ ➤ ಡಿ.5ರ ಬಂದ್ ವಿರೋಧಿಸಿ ಪ್ರತಿಭಟನೆ Read More »

ಕರ್ನಾಟಕ

ಉಡುಪಿ: ಇಬ್ಬರು ಪುತ್ರಿಯರಿಗೆ ಲೈಂಗಿಕ ಹಲ್ಲೆ ಪ್ರಕರಣ ➤ ತಂದೆಗೆ ಜೀವಾವಧಿ ಜೈಲು ಶಿಕ್ಷೆ

(ನ್ಯೂಸ್ ಕಡಬ) newskadaba.com ಉಡುಪಿ ಡಿ. 01: ಪುತ್ರಿಯರಿಬ್ಬರ ಮೇಲೆ ಲೈಂಗಿಕ ಹಲ್ಲೆ ನಡೆಸಿದ ಆರೋಪ ಹೊತ್ತಿದ್ದ ತಂದೆಗೆ ಜೀವಾವಧಿ ಶಿಕ್ಷೆ ವಿಧಿಸಿ ಉಡುಪಿ ಜಿಲ್ಲಾ ನ್ಯಾಯಾಲಯ ಆದೇಶ ಹೊರಡಿಸಿದೆ. ಉಡುಪಿ ಜಿಲ್ಲಾ ಹೆಚ್ಚುವರಿ ಮತ್ತು ಸತ್ರ ನ್ಯಾಯಾಲಯದ ಪೋಕ್ಸೋ ತ್ವರಿತ ವಿಶೇಷ ನ್ಯಾಯಾಲಯದ (FTSC-1) ನ್ಯಾಯಾಧೀಶರಾದ ಯಾದವ್ ವನಮಾಲಾ ಆನಂದರಾವ್ ಈ ಆದೇಶ ಹೊರಡಿಸಿದ್ದಾರೆ. ಆರೋಪಿಯ ಪತ್ನಿ ಮಾನಸಿಕ ಖಿನ್ನತೆಗೆ ಒಳಗಾಗಿದ್ದಳು. ಕಿರಿಯ ಮಗಳಿಗೆ ಲೈಂಗಿಕ ಹಲ್ಲೆ ನಡೆಸುತ್ತಿದ್ದ. ಹಿರಿಯ ಮಗಳು ಇದಕ್ಕೆ ವಿರೋಧಿಸಿದ್ದಳು. ನಂತರದಲ್ಲಿ ಪತ್ನಿ

ಉಡುಪಿ: ಇಬ್ಬರು ಪುತ್ರಿಯರಿಗೆ ಲೈಂಗಿಕ ಹಲ್ಲೆ ಪ್ರಕರಣ ➤ ತಂದೆಗೆ ಜೀವಾವಧಿ ಜೈಲು ಶಿಕ್ಷೆ Read More »

ಕರಾವಳಿ, ಕ್ರೈಮ್ ನ್ಯೂಸ್

” ಶ್ರೀ ಕೃಷ್ಣ ಮಠ ನಾಮಫಲಕದಲ್ಲಿ ಕನ್ನಡ ಹೊರಗಿಟ್ಟದ್ದು ಅಪರಾಧ” ➤ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ನೀಲಾವರ ಸುರೇಂದ್ರ ಅಡಿಗ

(ನ್ಯೂಸ್ ಕಡಬ) newskadaba.com ಉಡುಪಿ ಡಿ. 01: ಶ್ರೀ ಕೃಷ್ಣ ಮಠದ ನಾಮಫಲಕದಲ್ಲಿ ಕನ್ನಡವನ್ನು ತೆಗೆದು ಹಾಕಿದ್ದು ಸೂಕ್ತ ಕ್ರಮವಲ್ಲ. ಕನ್ನಡ ಸಾಹಿತ್ಯ ಪರಿಷತ್ ಇದನ್ನು ಉಗ್ರವಾಗಿ ಖಂಡಿಸುತ್ತದೆ ಎಂದು ಉಡುಪಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ನೀಲಾವರ ಸುರೇಂದ್ರ ಅಡಿಗ ತಿಳಿಸಿದ್ದಾರೆ. ಕನ್ನಡ ನಾಡಿನಲ್ಲಿ ಮೊದಲು ಕನ್ನಡಕ್ಕೆ ಆದ್ಯತೆ. ನಾಮಫಲಕ ದಲ್ಲಿ ಮೊದಲು ಕನ್ನಡ ಇರಬೇಕು. ಅನಂತರ ಇತರ ಭಾಷೆ, ಒಂದು ಧಾರ್ಮಿಕ ಸಂಸ್ಥೆಯು ಭಾಷೆಗಳ ನಡುವೆ ಕಂದಕ ಸೃಷ್ಟಿಸುವುದು ಸರಿಯಲ್ಲ. ನಾಮ ಫಲಕದ ಈ

” ಶ್ರೀ ಕೃಷ್ಣ ಮಠ ನಾಮಫಲಕದಲ್ಲಿ ಕನ್ನಡ ಹೊರಗಿಟ್ಟದ್ದು ಅಪರಾಧ” ➤ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ನೀಲಾವರ ಸುರೇಂದ್ರ ಅಡಿಗ Read More »

ಕರಾವಳಿ

ಮಣಿಪಾಲ ಸಮೀಪ ಗುಡ್ಡದಲ್ಲಿ ಕಾಣಿಸಿಕೊಂಡ ಬೆಂಕಿ ➤ಯುವಕರ ಸಮಯ ಪ್ರಜ್ಞೆಯಿಂದ ತಪ್ಪಿದ ಅನಾಹುತ

(ನ್ಯೂಸ್ ಕಡಬ) newskadaba.com ಮಣಿಪಾಲ ಡಿ. 01: ದುಗ್ಲಿ ಪದವು ಎಂಬಲ್ಲಿ ತಡರಾತ್ರಿ ಸುಮಾರಿಗೆ ಬೆಂಕಿಬಿದ್ದಿದ್ದು ಬಹಳಷ್ಟು ಆಸ್ತಿಪಾಸ್ತಿ ನಷ್ಟವಾಗುವುದು ಯುವಕರ ಸಮಯಪ್ರಜ್ಞೆಯಿಂದ ತಪ್ಪಿದೆ. ಕಳೆದ ದಿನ ಹತ್ತು ಗಂಟೆ ಸುಮಾರಿಗೆ ಮಣಿಪಾಲ ಅಲೆವೂರು ರಸ್ತೆಯ ದುಗ್ಲಿ ಪದವು ಎಂಬಲ್ಲಿ ಆಕಸ್ಮಿಕ ಬೆಂಕಿಬಿದ್ದಿದೆ. ಈ ಪ್ರದೇಶದಲ್ಲಿ ಬಹಳಷ್ಟು ಜನವಸತಿ ಇದ್ದು 10.30 ಗಂಟೆಗೆ ಬೆಂಕಿಬಿದ್ದಾಗ ರಸ್ತೆಯಲ್ಲಿ ಬರುತ್ತಿದ್ದ ಬೈಕ್ ಸವಾರರಾದ ಅಲೆವೂರಿನ ಜಲೇಶ್ ಶೆಟ್ಟಿ ಮತ್ತು ಕುಕ್ಕಿಕಟ್ಟೆಯ ನವೀನ್ ಸೇರಿಗಾರ್ ಕೂಡಲೇ ಅಗ್ನಿಶಾಮಕ ದಳಕ್ಕೆ ವಿಷಯ ತಿಳಿಸಿದ್ದಾರೆ.

ಮಣಿಪಾಲ ಸಮೀಪ ಗುಡ್ಡದಲ್ಲಿ ಕಾಣಿಸಿಕೊಂಡ ಬೆಂಕಿ ➤ಯುವಕರ ಸಮಯ ಪ್ರಜ್ಞೆಯಿಂದ ತಪ್ಪಿದ ಅನಾಹುತ Read More »

ಕರಾವಳಿ

ಉಡುಪಿ : ದೊಂದಿ ಬೆಳಕಿನ ತೆಪ್ಪೋತ್ಸವ ಸಂಪನ್ನ

(ನ್ಯೂಸ್ ಕಡಬ) newskadaba.com ಉಡುಪಿ, ನ. 30: ಕಳೆದ ಮೂರು ದಿನಗಳಿಂದ ನಡೆಯುತ್ತಿರುವ ಕೃಷ್ಣಮಠದ ಲಕ್ಷ ದೀಪೋತ್ಸವ ಕೊನೆಯ ದಿನ ದೊಂದಿ ಬೆಳಕಿನ ತೆಪ್ಪೋತ್ಸವ ನಡೆಯುವುದರೊಂದಿಗೆ ಸಂಪನ್ನಗೊಂಡಿತು. ಲಕ್ಷದೀಪೋತ್ಸವ ,ತೆಪ್ಪೋತ್ಸವದೊಂದಿಗೆ ಉತ್ಸವಪ್ರಿಯ ಕೃಷ್ಣನಿಗೆ ನಿತ್ಯ ಉತ್ಸವಗಳು ನಡೆಯುವುದು ಸಂಪ್ರದಾಯ. ಮಳೆಗಾಲದ 4 ತಿಂಗಳು ಕೃಷ್ಣನಿಗೆ ಯಾವುದೇ ಉತ್ಸವಗಳು ನಡೆಯುವುದಿಲ್ಲ. ಇದೇ ಸಂದರ್ಭದಲ್ಲಿ ಶ್ರೀಗಳ ಚಾತುರ್ಮಾಸ್ಯ ವ್ರತವೂ ನಡೆಯುತ್ತದೆ. ಉತ್ಥಾನ ದ್ವಾದಶಿಯ ನಂತರ ದೇವರನ್ನು ಹೊರಗೆ ತಂದು ಮತ್ತೆ ನಿತ್ಯವೂ ಉತ್ಸವಗಳನ್ನು ನಡೆಸಲಾಗುತ್ತದೆ. ರಥಬೀದಿಯಲ್ಲಿ ಲಕ್ಷದೀಪೋತ್ಸವ ಮತ್ತು ಮಧ್ವಸರೋವರದಲ್ಲಿ ದೊಂದಿ

ಉಡುಪಿ : ದೊಂದಿ ಬೆಳಕಿನ ತೆಪ್ಪೋತ್ಸವ ಸಂಪನ್ನ Read More »

ಕರಾವಳಿ, ಕರ್ನಾಟಕ

ಮಲ್ಪೆ :ಸಮುದ್ರದಲ್ಲಿ ಮುಳುಗಿದ 7 ಮಂದಿಯಿದ್ದ ಮೀನುಗಾರಿಕೆ ದೋಣಿ

(ನ್ಯೂಸ್ ಕಡಬ) newskadaba.com ಮಲ್ಪೆ ನ. 29: ಗೋವಾ-ಮಹಾರಾಷ್ಟ್ರ ಗಡಿ ಭಾಗದ ಸಮುದ್ರದಲ್ಲಿ ಮೀನುಗಾರಿಕೆಗೆ ತೆರಳಿದ್ದ ಏಳು ಮಂದಿ ಮೀನುಗಾರರಿದ್ದ ದೋಣಿ ಕಳೆದ ದಿನ  ಮುಳುಗಡೆಯಾಗಿತ್ತು. ಮೀನುಗಾರರು ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎನ್ನಲಾಗಿದೆ . ಸಮುದ್ರದಲ್ಲಿ ಮುಳುಗಿದ ದೋಣಿಯು ಮಲ್ಪೆಯದ್ದಾಗಿದ್ದು, ಮಥುರಾ ಹೆಸರಿನ ಈ ಆಳಸಮುದ್ರ ಮೀನುಗಾರಿಕಾ ದೋಣಿಯು ನ. 17ರಂದು ಮಲ್ಪೆ ಬಂದರಿನಿಂದ ಮೀನುಗಾರಿಕೆಗೆ ತೆರಳಿತ್ತು.   ದೋಣಿಯಲ್ಲಿ ಏಳು ಮಂದಿ ಮೀನುಗಾರರಿದ್ದರು. ಸಮುದ್ರದಲ್ಲಿ ಮುಳುಗಿದ ದೋಣಿಯಲ್ಲಿ ಬಲೆ, ಡೀಸೆಲ್, ಮೀನು ಸೇರಿದಂತೆ ಸುಮಾರು 65 ಲಕ್ಷ ರೂ.

ಮಲ್ಪೆ :ಸಮುದ್ರದಲ್ಲಿ ಮುಳುಗಿದ 7 ಮಂದಿಯಿದ್ದ ಮೀನುಗಾರಿಕೆ ದೋಣಿ Read More »

ಕರಾವಳಿ, ಕರ್ನಾಟಕ

ಪ್ರೊ ಕಬಡ್ಡಿ ಲೀಗ್ ಮುಂದಿನ ವರ್ಷಕ್ಕೆ

(ನ್ಯೂಸ್ ಕಡಬ) newskadaba.com ಹೊಸದಿಲ್ಲಿ ನ. 29: ಕೋವಿಡ್ -19 ಕಾರಣದಿಂದಾಗಿ ಪ್ರೊ ಕಬಡ್ಡಿ ಲೀಗ್ (ಪಿಕೆಎಲ್)ನ ಎಂಟನೇ ಆವೃತ್ತಿಯ ಟೂರ್ನಿಯನ್ನು ಮುಂದೂಡಲಾಗಿದೆ. ಆಟಗಾರರ ಅಧಿಕೃತ ಮಾರ್ಗಸೂಚಿಗಳು ಮತ್ತು ಸುರಕ್ಷತೆಯನ್ನು ಗಮನದಲ್ಲಿಟ್ಟುಕೊಂಡು ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ಸಂಘಟಕರು ಶನಿವಾರ ಹೇಳಿಕೆಯಲ್ಲಿ ತಿಳಿಸಿದ್ದಾರೆ. ಪಿಕೆಎಲ್‌ನ 8ನೇ ಆವೃತ್ತಿಯನ್ನು ಮುಂದೂಡಿದ್ದಕ್ಕಾಗಿ ನಾವು ವಿಷಾದಿಸುತ್ತೇವೆ. ಪುನರಾರಂಭಿಸಲು ಮುಂದಿನ ವರ್ಷ ಸೂಕ್ತ ಸಮಯ ನೋಡುತ್ತೇವೆ ಎಂದು ಸಂಘಟಕರು ತಿಳಿಸಿದ್ದಾರೆ.     ಸ್ಟಾರ್ ಸ್ಪೋರ್ಟ್ಸ್ ಲೀಗ್‌ನ ಐದು ವರ್ಷಗಳ ಒಪ್ಪಂದವು ಕಳೆದ ವರ್ಷ

ಪ್ರೊ ಕಬಡ್ಡಿ ಲೀಗ್ ಮುಂದಿನ ವರ್ಷಕ್ಕೆ Read More »

ರಾಷ್ಟ್ರೀಯ ನ್ಯೂಸ್

ಉಡುಪಿ: ಕೃಷ್ಣ ಮಠ, ಕಮಲಶಿಲೆ, ಕೊಲ್ಲೂರು ದೇಗುಲಕ್ಕೆ ಡಿಕೆಶಿ ಭೇಟಿ

(ನ್ಯೂಸ್ ಕಡಬ) newskadaba.com ಉಡುಪಿ ನ. 29: ಉಡುಪಿ ಪ್ರವಾಸ ಕೈಗೊಂಡಿರುವ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ರಾತ್ರಿ ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನ ಕಮಲಶಿಲೆ ದೇಗುಲಕ್ಕೆ ಭೇಟಿ ನೀಡಿದರು. ದುರ್ಗಾಪರಮೇಶ್ವರಿ ದೇವಿಯ ದರ್ಶನ ಪಡೆದ ಅವರು,ರಾತ್ರಿಯ ಮಹಾಪೂಜೆಯಲ್ಲಿ ಪಾಲ್ಗೊಂಡರು. ಬಳಿಕ ದೇವಸ್ಥಾನದಲ್ಲಿ ಅನ್ನ ಪ್ರಸಾದ ಸ್ವೀಕರಿಸಿದ ಡಿಕೆಶಿ, ಕೊಲ್ಲೂರು ಮೂಕಾಂಬಿಕಾ ದೇವಸ್ಥಾನಕ್ಕೆ ತೆರಳಿದರು. ಇಂದು ಕೊಲ್ಲೂರಿನಲ್ಲಿ ಪೂಜೆಯ ಬಳಿಕ ಉಡುಪಿಗೆ ಆಗಮಿಸಲಿದ್ದಾರೆ. ಉಡುಪಿಯಲ್ಲಿ ಕಾಂಗ್ರೆಸ್ ಕಾರ್ಯಕರ್ತರ ಸಮಾವೇಶ ಆಯೋಜನೆಗೊಂಡಿದೆ. ಉಡುಪಿಯಲ್ಲಿ ಶ್ರೀ ಕೃಷ್ಣಮಠ ಭೇಟಿಯ ಕಾರ್ಯಕ್ರಮವೂ ನಿಗದಿಯಾಗಿದೆ.

ಉಡುಪಿ: ಕೃಷ್ಣ ಮಠ, ಕಮಲಶಿಲೆ, ಕೊಲ್ಲೂರು ದೇಗುಲಕ್ಕೆ ಡಿಕೆಶಿ ಭೇಟಿ Read More »

ಕರಾವಳಿ
Scroll to Top