Udupi

ಉಡುಪಿ: ಅಣ್ಣ ತಂಗಿ ನೇಣಿಗೆ ಶರಣು-ಕಾರಣ ನಿಗೂಢ

(ನ್ಯೂಸ್‌ ಕಡಬ) newskadaba.com,  ಅ.18: ಅಣ್ಣ-ತಂಗಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಉಡುಪಿಯ ಲೇಬರ್ ಕಾಲೋನಿಯ ಜೋಪಡಿಯಲ್ಲಿ ನಡೆದಿದೆ. ಮಲ್ಲೇಶ್ (23) ಮತ್ತು ಪವಿತ್ರಾ (17) ಮೃತರಾಗಿದ್ದು, ಪವಿತ್ರಾ ತಾಯಿ ಮನೆಯಲ್ಲಿ ಇಲ್ಲದ ವೇಳೆ ಇಬ್ಬರೂ ನೇಣಿಗೆ ಕೊರಳೊಡ್ಡಿದ್ದಾರೆ ಎನ್ನಲಾಗಿದೆ. ಆತ್ಮಹತ್ಯೆಗೆ ಕಾರಣ ನಿಗೂಢವಾಗಿದ್ದು ಅಕ್ಕ ಮತ್ತು ತಂಗಿಯರ ಮಕ್ಕಳಾಗಿರೋ ಇವರಿಬ್ಬರು ಯಾಕೆ ಇಂತಹ ನಿರ್ಧಾರ ತೆಗೆದುಕೊಂಡರು ಎಂಬುದು ಪ್ರಶ್ನೆಯಾಗಿಯೇ ಉಳಿದಿದೆ. ಬೇರೊಂದು ಮನೆಯಲ್ಲಿ ಕೆಲಸ ಮಾಡಿ, ಉಡುಪಿಯ ಪ್ರತಿಷ್ಠಿತ ಸರ್ಕಾರಿ ಕಾಲೇಜಿನಲ್ಲಿ ಪವಿತ್ರಾ ಪ್ರಥಮ […]

ಉಡುಪಿ: ಅಣ್ಣ ತಂಗಿ ನೇಣಿಗೆ ಶರಣು-ಕಾರಣ ನಿಗೂಢ Read More »

ಕರಾವಳಿ, ಕ್ರೈಮ್ ನ್ಯೂಸ್

ಆನ್ ಲೈನ್ ಹೂಡಿಕೆ ಹೆಸರಿನಲ್ಲಿ ವಂಚನೆ, ವ್ಯಕ್ತಿಗೆ 29.68 ಲಕ್ಷರೂ. ಪಂಗನಾಮ

(ನ್ಯೂಸ್‌ ಕಡಬ) newskadaba.com,  ಅ. 16. ವ್ಯಕ್ತಿಯೊಬ್ಬರು ಆನ್‌ಲೈನ್ ಹೂಡಿಕೆ ವಂಚನೆಗೆ ಬಲಿಯಾಗಿ ಲಕ್ಷಾಂತರ ರೂಪಾಯಿ ಕಳೆದುಕೊಂಡಿರುವ ಕುರಿತು ಉಡುಪಿಯಿಂದ ವರದಿಯಾಗಿದೆ. ದೂರಿನ ಪ್ರಕಾರ, ಕಳೆದ ಸೆಪ್ಟೆಂಬರ್ 11 ರಂದು ಟೆಲಿಗ್ರಾಮ್‌ನಲ್ಲಿ @Anjana_198_off  ಎಂಬ ಖಾತೆಯಿಂದ ಸಂದೇಶ ಬಂದಿದ್ದು, ಇದನ್ನು ಅಧಿಕೃತ ಯುಕೆ ಸರ್ಕಾರ ಎಂದು ವಿವರಿಸಲಾಗಿದೆ. ಆ ಸಂದೇಶದಲ್ಲಿ ಚಿನ್ನ, ಬೆಳ್ಳಿ ನಾಣ್ಯಗಳು, ಬಾರ್‌ಗಳು ಮತ್ತು ಇತರ ಚಿನ್ನ-ಸಂಬಂಧಿತ ಉತ್ಪನ್ನಗಳ ಮೇಲೆ ಲಾಭದಾಯಕ ಆದಾಯದ ಭರವಸೆ ನೀಡಲಾಗಿದೆ. ಈ ವೇದಿಕೆಯಲ್ಲಿ “ಚಿನ್ನದ ಬಿಡ್ಡರ್” ಆಗಿ ಕೆಲಸ

ಆನ್ ಲೈನ್ ಹೂಡಿಕೆ ಹೆಸರಿನಲ್ಲಿ ವಂಚನೆ, ವ್ಯಕ್ತಿಗೆ 29.68 ಲಕ್ಷರೂ. ಪಂಗನಾಮ Read More »

ಕರಾವಳಿ, ಕರ್ನಾಟಕ, ಬ್ರೇಕಿಂಗ್ ನ್ಯೂಸ್

ಆರ್ ಟಿಒ ಅಧಿಕಾರಿಯ ಮನೆಗೆ ಲೋಕಾಯುಕ್ತ ದಾಳಿ

(ನ್ಯೂಸ್‌ ಕಡಬ) newskadaba.com ಅ. 14. ಉಡುಪಿ ಆರ್ ಟಿಒ ಅಧಿಕಾರಿ ಲಕ್ಷ್ಮೀನಾರಾಯಣ ಪಿ. ನಾಯಕ್ ಅವರ ಮನೆಗೆ ಲೋಕಾಯುಕ್ತ ಅಧಿಕಾರಿಗಳು ಮಂಗಳವಾರದಂದು ಬೆಳಗ್ಗೆ ದಾಳಿ ನಡೆಸಿದ್ದಾರೆ. ಮೂಲತಃ ಉತ್ತರ ಕನ್ನಡ ಜಿಲ್ಲೆಯ ಕುಮಟಾದವರಾಗಿರುವ ಲಕ್ಷ್ಮೀನಾರಾಯಣ ಪಿ. ನಾಯಕ್ ಅವರು, ಪ್ರಸ್ತುತ ಉಡುಪಿಯಲ್ಲಿ ಆರ್ ಟಿಒ ಅಧಿಕಾರಿಯಾಗಿ ಸೇವೆ ಸಲ್ಲಿಸುತ್ತಿದ್ದರು. ಸಾರ್ವಜನಿಕರಿಂದ ಕೇಳಿಬಂದ ದೂರಿನ ಹಿನ್ನೆಲೆಯಲ್ಲಿ ಲೋಕಾಯುಕ್ತ ಅಧಿಕಾರಿಗಳು ಅವರ ಮನೆ ಮತ್ತು ಸಂಬಂಧಿಕರ ನಿವಾಸಗಳಲ್ಲಿ ಶೋಧ ನಡೆಸಿದ್ದಾರೆ ಎಂದು ಮೂಲಗಳು ತಿಳಿಸಿವೆ. ಉಡುಪಿಯ ಕಿನ್ನಿಮುಲ್ಕಿ ಪ್ರದೇಶದಲ್ಲಿರುವ

ಆರ್ ಟಿಒ ಅಧಿಕಾರಿಯ ಮನೆಗೆ ಲೋಕಾಯುಕ್ತ ದಾಳಿ Read More »

ಕರಾವಳಿ

ಉಡುಪಿ: ಪತ್ರಕರ್ತ ಜನಾರ್ದನ್ ಕೊಡವೂರಿಗೆ ವಾಲ್ಮೀಕಿ ಸಮ್ಮಾನ್ ಪ್ರಶಸ್ತಿ

(ನ್ಯೂಸ್‌ ಕಡಬ) newskadaba.com,  ಅ .13. ಉಡುಪಿ: ವಾಲ್ಮೀಕಿ ನಾಡುಕಂಡ ಶ್ರೇಷ್ಠ ಸಂತ. ಬದುಕಿನಲ್ಲಿ ಪರಿವರ್ತನೆ ಮೂಲಕ ವ್ಯಕ್ತಿ ಎಷ್ಟು ಉನ್ನತ ಸ್ಥಾನಕ್ಕೆ ತಲುಪಬಹುದು ಎಂಬುದಕ್ಕೆ ವಾಲ್ಮೀಕಿ ಮಾದರಿ. ಅವರ ಆದರ್ಶಗಳನ್ನು ನಿತ್ಯದ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಶಾಸಕ ಯಶ್ಪಾಲ್ ಸುವರ್ಣ ಹೇಳಿದರು. ಅವರು ಮಹರ್ಷಿ ವಾಲ್ಮೀಕಿ ಸಂಘದ ಆಶ್ರಯದಲ್ಲಿ ನಡೆದ ಮಹರ್ಷಿ ವಾಲ್ಮೀಕಿ ಸಮ್ಮಾನ್ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಮಾತನಾಡಿದರು. ಈ ಸಮಯದಲ್ಲಿ ಸಂಘಟಕ, ಹಿರಿಯ ಛಾಯಾಚಿತ್ರ ಪತ್ರಕರ್ತ ಜನಾರ್ದನ್ ಕೊಡವೂರು ಅವರಿಗೆ ಮಹರ್ಷಿ ವಾಲ್ಮೀಕಿ

ಉಡುಪಿ: ಪತ್ರಕರ್ತ ಜನಾರ್ದನ್ ಕೊಡವೂರಿಗೆ ವಾಲ್ಮೀಕಿ ಸಮ್ಮಾನ್ ಪ್ರಶಸ್ತಿ Read More »

ಕರಾವಳಿ, ಕರ್ನಾಟಕ, ಬ್ರೇಕಿಂಗ್ ನ್ಯೂಸ್

ಉಡುಪಿ ನಗರಸಭೆಗೆ ಸೇರಿದ ಅಲೆವೂರು ಕಸ ವಿಲೇವಾರಿ ಘಟಕದಲ್ಲಿ ಭಾರಿ ಅಗ್ನಿ ಅವಘಡ: ಅಪಾರ ಪ್ರಮಾಣದ ಹಾನಿ

(ನ್ಯೂಸ್‌ ಕಡಬ) newskadaba.com,  ಅ.04 ಉಡುಪಿ: ನಗರಸಭೆಗೆ ಸೇರಿದ ಅಲೆವೂರು ಕಸ ವಿಲೇವಾರಿ ಘಟಕದಲ್ಲಿ ಶುಕ್ರವಾರ ಭಾರಿ ಅಗ್ನಿ ಅವಘಡ ಸಂಭವಿಸಿದ್ದು, ಅಪಾರ ಪ್ರಮಾಣದ ಹಾನಿಯಾಗಿದೆ. ನಗರದ ತ್ಯಾಜ್ಯವನ್ನು ಸಂಗ್ರಹಿಸಿ ಸಂಸ್ಕರಿಸುವ ಈ ಘಟಕವು ಘಟನೆಯಿಂದ ತೀವ್ರವಾಗಿ ಹಾನಿಗೊಳಗಾಗಿದೆ. ಅಗ್ನಿಶಾಮಕ ಮತ್ತು ತುರ್ತು ಸೇವಾ ಸಿಬ್ಬಂದಿ ಸ್ಥಳೀಯ ನಿವಾಸಿಗಳ ನೆರವಿನೊಂದಿಗೆ ಬೆಂಕಿಯನ್ನು ಹತೋಟಿಗೆ ತರುವಲ್ಲಿ ಯಶಸ್ವಿಯಾಗಿದ್ದಾರೆ. ಮೂಲಗಳ ಪ್ರಕಾರ, ಕಸದ ರಾಶಿಯಿಂದಲೇ ಅಗ್ನಿ ಹೊತ್ತಿಕೊಂಡಿರುವ ಶಂಕೆ ವ್ಯಕ್ತವಾಗಿದೆ. ಘಟನೆಯ ನಿಖರ ಪ್ರಮಾಣ ಇನ್ನಷ್ಟೇ ತಿಳಿದುಬರಬೇಕಿದೆ. ಅಪಾರ ಪ್ರಮಾಣದ

ಉಡುಪಿ ನಗರಸಭೆಗೆ ಸೇರಿದ ಅಲೆವೂರು ಕಸ ವಿಲೇವಾರಿ ಘಟಕದಲ್ಲಿ ಭಾರಿ ಅಗ್ನಿ ಅವಘಡ: ಅಪಾರ ಪ್ರಮಾಣದ ಹಾನಿ Read More »

ಕರಾವಳಿ

ರೌಡಿ ಶೀಟರ್ ಸೈಫುದ್ದೀನ್ ನನ್ನು ಉಡುಪಿಯ ಮಲ್ಪೆಯಲ್ಲಿ ಗುಂಡಿಕ್ಕಿ ಹತ್ಯೆ

(ನ್ಯೂಸ್‌ ಕಡಬ) newskadaba.com,  ಸೆ. 27 ಉಡುಪಿ: ಮಲ್ಪೆಯಲ್ಲಿ ರೌಡಿ ಶೀಟರ್ ಸೈಫುದ್ದೀನ್ ನನ್ನು ಗುಂಡಿಕ್ಕಿ ಹತ್ಯೆ ಮಾಡಿರುವ ಆಘಾತಕಾರಿ ಘಟನೆ ಸೆಪ್ಟೆಂಬರ್ 27 ರ ಶನಿವಾರ ಬೆಳಕಿಗೆ ಬಂದಿದೆ. ಮಣಿಪಾಲ ಮೂಲದ ಸಾರಿಗೆ ವ್ಯವಹಾರದಲ್ಲಿಯೂ ತೊಡಗಿಸಿಕೊಂಡಿದ್ದ ಸೈಫುದ್ದೀನ್ ಮೇಲೆ ಅಪರಿಚಿತ ದುಷ್ಕರ್ಮಿಗಳು ಗುಂಡು ಹಾರಿಸಿ ಹಲ್ಲೆ ನಡೆಸಿ ಪರಾರಿಯಾಗಿದ್ದಾರೆ  ಎಂದು ವರದಿಯಾಗಿದೆ .ಆತನ ಮೇಲೆ ಗುಂಡು ಹಾರಿಸಿದ ನಂತರ, ದಾಳಿಕೋರರು ಆತನ ಮೇಲೆ ಮತ್ತಷ್ಟು ಹಲ್ಲೆ ನಡೆಸಿದ್ದಾರೆ ಎಂದು ಮೂಲಗಳು ತಿಳಿಸಿವೆ.ಉಡುಪಿ ಪೊಲೀಸ್ ವರಿಷ್ಠಾಧಿಕಾರಿ ಹರಿರಾಮ್ ಶಂಕರ್

ರೌಡಿ ಶೀಟರ್ ಸೈಫುದ್ದೀನ್ ನನ್ನು ಉಡುಪಿಯ ಮಲ್ಪೆಯಲ್ಲಿ ಗುಂಡಿಕ್ಕಿ ಹತ್ಯೆ Read More »

ಕರಾವಳಿ, ಕರ್ನಾಟಕ, ಬ್ರೇಕಿಂಗ್ ನ್ಯೂಸ್

ಉಡುಪಿಯ ಕಲ್ಸಂಕ ಬಳಿ ಡಿವೈಡರ್ ಮೇಲೇರಿದ ಟಿಪ್ಪರ್ ಬೈಕ್ ಗೆ ಡಿಕ್ಕಿ – ಸವಾರರಿಗೆ ಗಂಭೀರ ಗಾಯ

(ನ್ಯೂಸ್‌ ಕಡಬ) newskadaba.com,  ಸೆ.26 ಉಡುಪಿ : ಡಿವೈಡರ್ ಮೇಲೇರಿದ ಟಿಪ್ಪರ್ ಬೈಕ್ ಗೆ ಡಿಕ್ಕಿ ಹೊಡೆದ ಘಟನೆ ಉಡುಪಿ ಕಲ್ಸಂಕ-ಗುಂಡಿಬೈಲು ಸಮೀಪ ನಡೆದಿದೆ. ಘಟನೆಯಲ್ಲಿ ಬೈಕ್ ಸವಾರ ಹಾಗೂ ಸಹಸವಾರನಿಗೆ ಗಂಭೀರ ಗಾಯಗಳಾಗಿದೆ..ಬೈಕ್ ಸವಾರ ಗಣೇಶ್ ಕರ್ಕೇರ, ಸಹಸವಾರ ಗಜೇಂದ್ರ ಅವರನ್ನು ಸ್ಥಳೀಯರ ಸಹಕಾರದಿಂದ ಮಣಿಪಾಲ ಆಸ್ಪತ್ರೆಗೆ ದಾಖಲು ಮಾಡಲಾಗಿದೆ..ಅಪಘಾತದ ಭೀಕರ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.

ಉಡುಪಿಯ ಕಲ್ಸಂಕ ಬಳಿ ಡಿವೈಡರ್ ಮೇಲೇರಿದ ಟಿಪ್ಪರ್ ಬೈಕ್ ಗೆ ಡಿಕ್ಕಿ – ಸವಾರರಿಗೆ ಗಂಭೀರ ಗಾಯ Read More »

ಕರಾವಳಿ, ಕರ್ನಾಟಕ, ಬ್ರೇಕಿಂಗ್ ನ್ಯೂಸ್

ಉಡುಪಿಯಲ್ಲಿ ಹುಲಿ ವೇಷಧಾರಿಯಿಂದ ಹೆಬ್ಬಾವು ರಕ್ಷಣೆ

(ನ್ಯೂಸ್‌ ಕಡಬ) newskadaba.com,  ಸೆ.17 ಉಡುಪಿ:  ಉಡುಪಿಯಲ್ಲಿ ಅಷ್ಟಮಿ ಆಚರಣೆ ಸಂದರ್ಭದಲ್ಲಿ ಹುಲಿ ನೃತ್ಯ ಪ್ರದರ್ಶಿಸುತ್ತಿದ್ದ ಗುಂಡಿಬೈಲಿನ ಅಕ್ಷಯ್ ಶೇಟ್ ಅವರಿಗೆ ಹಾವು ಇರುವ ಬಗ್ಗೆ ತುರ್ತು ಕರೆ ಬಂದ ಹಿನ್ನಲೆ ಸ್ಥಳಕ್ಕೆ ಬಂದು  ಬೃಹತ್ ಹೆಬ್ಬಾವನ್ನು ರಕ್ಷಿಸಿದ ಘಟನೆ ಬೆಳಕಿಗೆ ಬಂದಿದೆ. ಅಕ್ಷಯ್ ಶೇಟ್ ಐಟಿ ವೃತ್ತಿಪರರಾಗಿದ್ದರೂ, ಹಾವುಗಳನ್ನು ಸುರಕ್ಷಿತವಾಗಿ ರಕ್ಷಿಸುವ ಮತ್ತು ಹಿಡಿಯುವುದರಲ್ಲಿ ಪರಿಣತಿ ಹೊಂದಿದ್ದಾರೆ. ಅವರು ತಮ್ಮ ಹುಲಿ ವೇಷಭೂಷಣವನ್ನು ಸಹ ತೆಗೆಯದೆ, ನೇರವಾಗಿ ಸ್ಥಳಕ್ಕೆ ಬಂದು, ಕೆಲವೇ ನಿಮಿಷಗಳಲ್ಲಿ ಹಾವನ್ನು ಸುರಕ್ಷಿತವಾಗಿ

ಉಡುಪಿಯಲ್ಲಿ ಹುಲಿ ವೇಷಧಾರಿಯಿಂದ ಹೆಬ್ಬಾವು ರಕ್ಷಣೆ Read More »

ಕರ್ನಾಟಕ, ಬ್ರೇಕಿಂಗ್ ನ್ಯೂಸ್

ಉಡುಪಿಯ ವಿಟ್ಲಪಿಂಡಿಯಲ್ಲಿ ವಿರಾಟ್ ಕೊಹ್ಲಿ ಹೋಲಿಕೆ ಇರುವ ಯುವಕ

(ನ್ಯೂಸ್‌ ಕಡಬ) newskadaba.com,  ಸೆ.17 ಉಡುಪಿ: ಶ್ರೀ ಕೃಷ್ಣ ಮಠದ ರಥಬೀದಿಯಲ್ಲಿ ನಡೆದ ವಿಟ್ಲಪಿಂಡಿ ಸಂಭ್ರಮಾಚರಣೆಗಳು ಈ ವರ್ಷ ಭಾರೀ ವಿಶೇಷವಾಗಿತ್ತು. ಕ್ರಿಕೆಟ್ ಅಭಿಮಾನಿಗಳಿಗೆ ಈ ಬಾರಿ ಅಚ್ಚರಿ ಕಾದಿತ್ತು. ಸಾಂಪ್ರದಾಯಿಕ ಮೆರವಣಿಗೆ ಮತ್ತು ಸಾಂಸ್ಕೃತಿಕ ಪ್ರದರ್ಶನಗಳ ನಡುವೆ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ತಂಡದ ವಿಜಯೋತ್ಸವ ಪ್ರಮುಖ ಆಕರ್ಷಣೆಯಾಗಿತ್ತು. ಇದರಲ್ಲಿ ವಿರಾಟ್ ಕೊಹ್ಲಿ ಹೋಲಿಕೆ ಇರುವ ಯುವಕ ಎಲ್ಲರ ಗಮನ ಸೆಳೆದರು. ಆರ್‌ಸಿಬಿ ತಾರೆಯರಾದ ವಿರಾಟ್ ಕೊಹ್ಲಿ, ಕ್ರಿಸ್ ಗೇಲ್, ರೊಮಾರಿಯೋ ಶೆಫರ್ಡ್ ಮತ್ತು ಡ್ಯಾನಿಶ್

ಉಡುಪಿಯ ವಿಟ್ಲಪಿಂಡಿಯಲ್ಲಿ ವಿರಾಟ್ ಕೊಹ್ಲಿ ಹೋಲಿಕೆ ಇರುವ ಯುವಕ Read More »

ಕರಾವಳಿ, ಕರ್ನಾಟಕ, ಬ್ರೇಕಿಂಗ್ ನ್ಯೂಸ್
crime, arrest, suspected

16 ವರ್ಷಗಳಿಂದ ನ್ಯಾಯಾಲಯಕ್ಕೆ ಹಾಜರಾಗದೆ ತಲೆಮರೆಸಿಕೊಂಡಿದ್ದ ಆರೋಪಿಯ ಬಂಧನ

(ನ್ಯೂಸ್‌ ಕಡಬ) newskadaba.com ಸೆ. 09. ಕಳೆದ 16 ವರ್ಷಗಳಿಂದ ನ್ಯಾಯಾಲಯಕ್ಕೆ ಹಾಜರಾಗದೇ ತಲೆಮರೆಸಿಕೊಂಡಿದ್ದ ಆರೋಪಿಯನ್ನು ಮಣಿಪಾಲ ಪೊಲೀಸರು ಬಂಧಿಸಿರುವ ಕುರಿತು ವರದಿಯಾಗಿದೆ. ಬಂಧಿತ ಆರೋಪಿಯನ್ನು ರಾಜೇಶ್ ಕುಮಾರ್ ಎಂದು ಗುರುತಿಸಲಾಗಿದೆ. ಆರೋಪಿಯನ್ನು ಸೆಪ್ಟೆಂಬರ್ 7ರಂದು ಬೆಂಗಳೂರಿನ ಬನಶಂಕರಿ, ಇಟ್ಟಮಡು ಎಂಬಲ್ಲಿ ಪತ್ತೆ ಹಚ್ಚಿ ವಶಕ್ಕೆ ಪಡೆಯಲಾಗಿದೆ. ಮಣಿಪಾಲ ಪೊಲೀಸ್ ಠಾಣೆಯ ಇನ್ಸ್‌ ಪೆಕ್ಟರ್ ಮಹೇಶ್ ಪ್ರಸಾದ್ ಅವರ ಮಾರ್ಗದರ್ಶನದಲ್ಲಿ, ಸಬ್ ಇನ್ಸ್‌ಪೆಕ್ಟರ್ ಅಕ್ಷಯ ಕುಮಾರಿ ನೇತೃತ್ವದಲ್ಲಿ ಪೊಲೀಸ್ ಸಿಬ್ಬಂದಿಗಳಾದ ರಾಜೇಶ್ ಮತ್ತು ಮಂಜುನಾಥ್ ಹಾವಂಜೆ ಅವರು ಆರೋಪಿಯನ್ನು ಯಶಸ್ವಿಯಾಗಿ

16 ವರ್ಷಗಳಿಂದ ನ್ಯಾಯಾಲಯಕ್ಕೆ ಹಾಜರಾಗದೆ ತಲೆಮರೆಸಿಕೊಂಡಿದ್ದ ಆರೋಪಿಯ ಬಂಧನ Read More »

ಕರ್ನಾಟಕ, ಕ್ರೈಮ್ ನ್ಯೂಸ್
Scroll to Top