Udupi

ರೈಲು ಹತ್ತಲು ಹೋಗಿ ಆಯತಪ್ಪಿ ಬಿದ್ದ ಮಹಿಳೆಯ ರಕ್ಷಿಸಿದ ಆರ್.ಪಿಎಫ್ ಮಹಿಳಾ ಸಿಬ್ಬಂದಿ- ವ್ಯಾಪಕ ಮೆಚ್ಚುಗೆ

(ನ್ಯೂಸ್ ಕಡಬ) newskadaba.com ಉಡುಪಿ, ಸೆ. 20. ಚಲಿಸುತ್ತಿರುವ ರೈಲನ್ನು ಹತ್ತಲು ಹೋಗಿ ಮಹಿಳೆ ಆಯತಪ್ಪಿ ಬಿದ್ದಿದ್ದು, ತಕ್ಷಣವೇ ಸ್ಥಳದಲ್ಲಿದ್ದ ಆರ್ ಪಿಎಫ್ ಮಹಿಳಾ ಸಿಬ್ಬಂದಿ ರಕ್ಷಣೆ ಮಾಡಿರುವ ಕುರಿತು ಉಡುಪಿಯಿಂದ ವರದಿಯಾಗಿದೆ. ಮಂಗಳೂರು- ಮಡಗಾಂವ್ ಮಧ್ಯೆ ಚಲಿಸುತ್ತಿದ್ದ ರೈಲನ್ನು ಹತ್ತಲು ಮಹಿಳೆ ಓಡುತ್ತಿದ್ದ ವೇಳೆ ಆಯತಪ್ಪಿ ಬಿದ್ದಿದ್ದು, ತಕ್ಷಣವೇ ಸಮಯಪ್ರಜ್ಞೆ ಮೆರೆದ ಆರ್ಪಿಎಫ್ ಮಹಿಳಾ ಸಿಬ್ಬಂದಿ ಮಹಿಳೆಯನ್ನು ರಕ್ಷಿಸಿದ್ದಾರೆ. ಇದೀಗ ಆರ್ಪಿಎಫ್ ಮಹಿಳಾ ಸಿಬ್ಬಂದಿ ಕಾರ್ಯಕ್ಕೆ ವ್ಯಾಪಕ ಶ್ಲಾಘನೆ ವ್ಯಕ್ತವಾಗುತ್ತಿದೆ.

ರೈಲು ಹತ್ತಲು ಹೋಗಿ ಆಯತಪ್ಪಿ ಬಿದ್ದ ಮಹಿಳೆಯ ರಕ್ಷಿಸಿದ ಆರ್.ಪಿಎಫ್ ಮಹಿಳಾ ಸಿಬ್ಬಂದಿ- ವ್ಯಾಪಕ ಮೆಚ್ಚುಗೆ Read More »

ಕರಾವಳಿ, ಬ್ರೇಕಿಂಗ್ ನ್ಯೂಸ್

ಮದ್ಯಪಾನ ಸೇವಿಸಿ ಬಸ್ ಚಲಾಯಿಸಿದ ಚಾಲಕನ ವಿರುದ್ದ ಪ್ರಕರಣ ದಾಖಲು

(ನ್ಯೂಸ್ ಕಡಬ) newskadaba.com ಉಡುಪಿ, ಸೆ. 20.  ಮದ್ಯಪಾನ ಮಾಡಿ ನಿರ್ಲಕ್ಷ್ಯತನದಿಂದ ಬಸ್ ಚಲಾಯಿಸಿದ ಚಾಲಕನ ವಿರುದ್ದ ಉಡುಪಿ ಸಂಚಾರ ಠಾಣೆಯ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ ಎನ್ನಲಾಗಿದೆ. ಉಡುಪಿ ಸಂಚಾರ ಪೊಲೀಸ್ ಠಾಣೆಯ ಉಪನಿರೀಕ್ಷಕರಾದ ಸುದರ್ಶನ ದೊಡ್ಡಮನಿ ಅವರು ಗುರುವಾರ ಉಡುಪಿ ಸರ್ವಿಸ್ ಬಸ್ ನಿಲ್ದಾಣದ ಬಳಿ ವಾಹನ ತಪಾಸಣೆ ಮಾಡುತ್ತಿದ್ದ ವೇಳೆ ಖಾಸಗಿ ಬಸ್ಸೊಂದರ ಚಾಲಕ ಪ್ರಿನ್ಸ್ ಬೆನ್ನಿ ಎಂಬಾತ ಸಾರ್ವಜನಿಕ ರಸ್ತೆಯಲ್ಲಿ ಮಾನವ ಜೀವಕ್ಕೆ ಅಪಾಯಕರ ರೀತಿಯಲ್ಲಿ ದುಡುಕುತನದಿಂದ ಬಸ್ಸು ಚಲಾಯಿಸಿದ್ದು ಆತನನ್ನು ತಪಾಸಣೆ

ಮದ್ಯಪಾನ ಸೇವಿಸಿ ಬಸ್ ಚಲಾಯಿಸಿದ ಚಾಲಕನ ವಿರುದ್ದ ಪ್ರಕರಣ ದಾಖಲು Read More »

ಕರಾವಳಿ, ಕ್ರೈಮ್ ನ್ಯೂಸ್

ಉಡುಪಿ: ಸೆ.22 ರಂದು ವಾರ್ಷಿಕ ಮಹಾಸಭೆ, “ಪ್ರೇರಣಾ ಪ್ರಶಸ್ತಿ 2024” ಪ್ರದಾನ ಸಮಾರಂಭ

(ನ್ಯೂಸ್ ಕಡಬ) newskadaba.com ಉಡುಪಿ, ಸೆ. 20.  ಕರಾವಳಿ ಕ್ರಿಶ್ಚಿಯನ್ ಚೇಂಬರ್ ಆಫ್ ಕಾಮರ್ಸ್ ಅಂಡ್ ಇಂಡಸ್ಟ್ರಿ (ಆರ್) ವಾರ್ಷಿಕ ಮಹಾಸಭೆ ಮತ್ತು “ಪ್ರೇರಣಾ” ಪ್ರಶಸ್ತಿ ಪ್ರದಾನ ಸಮಾರಂಭವು ಕಡಿಯಾಳಿಯ ಮಾಂಡವಿ ಸಭಾಂಗಣದಲ್ಲಿ ಸೆಪ್ಟೆಂಬರ್ 22 ರಂದು ನಡೆಯಲಿದೆ. “ಪ್ರೇರಣಾ ಪ್ರಶಸ್ತಿ 2024” ಅನ್ನು ವಿವಿಧ ವಿಭಾಗಗಳಲ್ಲಿ ಸಾಧಕರಿಗೆ ನೀಡಲಾಗುವುದು, ಜೂಲಿಯನ್ ದಾಂತಿ, ಕುತ್ಪಾಡಿ, ಉಡುಪಿ. ಶಿಕ್ಷಣ, ಸಂಗೀತ, ಕ್ರೀಡೆ ಮತ್ತು ಇತರ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಸದಸ್ಯರ ಮಕ್ಕಳನ್ನು ಸಹ ದಿನದಂದು ಪುರಸ್ಕರಿಸಲಾಗುವುದು. ಸಮಾರಂಭವು ಸಂಜೆ

ಉಡುಪಿ: ಸೆ.22 ರಂದು ವಾರ್ಷಿಕ ಮಹಾಸಭೆ, “ಪ್ರೇರಣಾ ಪ್ರಶಸ್ತಿ 2024” ಪ್ರದಾನ ಸಮಾರಂಭ Read More »

ಕರಾವಳಿ

ಉಡುಪಿ: ಬಾರ್ಕೂರಿನ ರಿಶಾ ತಾನ್ಯಾ ಪಿಂಟೋರವರಿಗೆ “ಮಿಸ್ ಟೀನ್ ಕರಾವಳಿ 2024” ಕಿರೀಟ

(ನ್ಯೂಸ್ ಕಡಬ) newskadaba.com ಉಡುಪಿ, ಸೆ. 17.  ಪ್ರತಿಭೆ ಮತ್ತು ಚೆಲುವಿನ ಅದ್ಭುತ ಪ್ರದರ್ಶನದಲ್ಲಿ ಬಾರ್ಕೂರಿನ ರಿಷಾ ತಾನ್ಯಾ ಪಿಂಟೋ ಅವರು “ಮಿಸ್ ಟೀನ್ ಕರಾವಳಿ 2024” ಎಂಬ ಪ್ರತಿಷ್ಠಿತ ಪ್ರಶಸ್ತಿಯನ್ನು ಗೆದ್ದು ತಮ್ಮ ಸಮುದಾಯಕ್ಕೆ ಗೌರವ ತಂದಿದ್ದಾರೆ. ಯುಪಿಎಸ್ ಮಾಡೆಲ್ ಮ್ಯಾನೇಜ್‌ಮೆಂಟ್ ಆಯೋಜಿಸಿರುವ ಸರಣಿ ಕಾರ್ಯಕ್ರಮದ ಭಾಗವಾದ ಈ ಕಾರ್ಯಕ್ರಮವು ಸೆಪ್ಟೆಂಬರ್ 15 ರಂದು ಮಂಗಳೂರಿನ ಎಜೆ ಗ್ರ್ಯಾಂಡ್ ಹೋಟೆಲ್‌ನಲ್ಲಿ ನಡೆಯಿತು. ಸ್ಪರ್ಧೆಯಲ್ಲಿ ಮಿಸ್ ಟೀನ್ ಕರಾವಳಿ, ಮಿಸ್ ಕರಾವಳಿ, ಮಿಸೆಸ್ ಕರಾವಳಿ ಮತ್ತು ಮಿಸ್ಟರ್

ಉಡುಪಿ: ಬಾರ್ಕೂರಿನ ರಿಶಾ ತಾನ್ಯಾ ಪಿಂಟೋರವರಿಗೆ “ಮಿಸ್ ಟೀನ್ ಕರಾವಳಿ 2024” ಕಿರೀಟ Read More »

ಕರಾವಳಿ

ಉಡುಪಿ: ಯಕ್ಷಗಾನ ಗುರು ಸಂಜೀವ ಸುವರ್ಣ ‘ಪಾರ್ತಿಸುಬ್ಬ ಪ್ರಶಸ್ತಿ’ಗೆ ಆಯ್ಕೆ

(ನ್ಯೂಸ್ ಕಡಬ) newskadaba.com ಉಡುಪಿ, ಸೆ. 14.  ಯಕ್ಷಗಾನ ಗುರು ಬನ್ನಂಜೆ ಸಂಜೀವ ಸುವರ್ಣರನ್ನು 2023ನೇ ಸಾಲಿನ ಪ್ರತಿಷ್ಠಿತ ಪಾರ್ತಿಸುಬ್ಬ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ ಎಂದು ಕರ್ನಾಟಕ ಯಕ್ಷಗಾನ ಅಕಾಡಮಿಯ ಅಧ್ಯಕ್ಷ ಡಾ.ತಲ್ಲೂರು ಶಿವರಾಮ ಶೆಟ್ಟಿ ತಿಳಿಸಿದ್ದಾರೆ. ಉಡುಪಿಯಲ್ಲಿ ಕರೆದ ಸುದ್ದಿಗೋಷ್ಠಿಯಲ್ಲಿ ಅವರು ಈ ವಿಷಯ ತಿಳಿಸಿದರು. ನವೆಂಬರ್ ತಿಂಗಳಲ್ಲಿ ನಡೆಯುವ ಸಮಾರಂಭದಲ್ಲಿ ಪ್ರಶಸ್ತಿ ಪದಾನ ಮಾಡಲಾಗುವುದು. ಪ್ರಶಸ್ತಿಯು ಒಂದು ಲಕ್ಷ ರೂ ನಗದು, ಪ್ರಶಸ್ತಿ ಫಲಕಗಳನ್ನು ಹೊಂದಿರುತ್ತದೆ ಎಂದರು. ಇದರೊಂದಿಗೆ ಅಕಾಡಮಿಯ ನೂತನ ಅಧ್ಯಕ್ಷರು ಅಕಾಡಮಿಯ

ಉಡುಪಿ: ಯಕ್ಷಗಾನ ಗುರು ಸಂಜೀವ ಸುವರ್ಣ ‘ಪಾರ್ತಿಸುಬ್ಬ ಪ್ರಶಸ್ತಿ’ಗೆ ಆಯ್ಕೆ Read More »

ಕರಾವಳಿ

ಉಡುಪಿ: ಯುವಕ ನಾಪತ್ತೆ..!

(ನ್ಯೂಸ್ ಕಡಬ) newskadaba.com ಉಡುಪಿ, ಸೆ. 13.  ಇಲ್ಲಿನ ಬನ್ನಂಜೆಯ ನಿವಾಸಿ ನಾಗಪ್ಪ ನಡುವಿನಮನೆ (31) ಎಂಬ ಯುವಕ ಮನೆಯಿಂದ ಹೊರಗೆ ಹೋದವರು ವಾಪಾಸು ಬಾರದೇ ನಾಪತ್ತೆಯಾಗಿದ್ದಾರೆ ಎನ್ನಲಾಗಿದೆ. 5 ಅಡಿ 4 ಇಂಚು ಎತ್ತರ, ಸಾಧಾರಣ ಮೈಕಟ್ಟು, ಎಣ್ಣೆಕಪ್ಪು ಮೈಬಣ್ಣ, ದುಂಡುಮುಖ ಹೊಂದಿದ್ದು, ಕನ್ನಡ ಹಾಗೂ ತುಳು ಭಾಷೆ ಮಾತನಾಡುತ್ತಾರೆ. ಇವರ ಬಗ್ಗೆ ಮಾಹಿತಿ ದೊರೆತಲ್ಲಿ ಉಡುಪಿ ನಗರ ಪೊಲೀಸ್ ಠಾಣಾಧಿಕಾರಿಯನ್ನು ಸಂಪರ್ಕಿಸಬಹುದು ಎಂದು ಪ್ರಕಟಣೆ ತಿಳಿಸಿದೆ.    

ಉಡುಪಿ: ಯುವಕ ನಾಪತ್ತೆ..! Read More »

ಕರಾವಳಿ, ಕ್ರೈಮ್ ನ್ಯೂಸ್

ಮನೆಯ ಶೌಚಾಲಯದಲ್ಲಿ ಕುಸಿದು ಬಿದ್ದು ನಿವೃತ್ತ ಶಿಕ್ಷಕಿ ಮೃತ್ಯು..!

(ನ್ಯೂಸ್ ಕಡಬ) newskadaba.com ಉಡುಪಿ, ಸೆ. 12.  ನಿವೃತ್ತ ಶಿಕ್ಷಕಿರೊಬ್ಬರು ಮನೆಯ ಶೌಚಾಲಯದಲ್ಲಿ ಕುಸಿದು ಬಿದ್ದು ಮೃತಪಟ್ಟ ಘಟನೆ ನಿಟ್ಟೂರಿನಲ್ಲಿ ಇಂದು ನಡೆದಿದೆ. ಮೃತ ಶಿಕ್ಷಕಿಯನ್ನು ಹಿರಿಯ ವಕೀಲ ದಿವಂಗತ ವಿಲಿಯಂ ಪಿಂಟೋ ಅವರ ಪತ್ನಿ ರೋಸಿ ವಿಲಿಯಂ ಪಿಂಟೋ(72) ಎಂದು ಗುರುತಿಸಲಾಗಿದೆ. ನಿಟ್ಟೂರು ಶಾಲೆಯ ನಿವೃತ್ತ ಶಿಕ್ಷಕಿಯಾಗಿರುವ ಇವರು, ಮನೆಯಲ್ಲಿ ಒಂಟಿಯಾಗಿ ವಾಸ ಮಾಡುತ್ತಿದ್ದರು. ಮಕ್ಕಳು ಕರೆ ಮಾಡಿದಾಗ ಕರೆ ಎತ್ತದೇ ಇದ್ದರಿಂದ ಮನೆಗೆ ಬಂದು ನೋಡುವಾಗ ರೋಸಿ ಪಿಂಟೋ ಅವರು ಬಾತ್‌ರೂಮಿನಲ್ಲಿ ಕುಸಿದು ಬಿದ್ದು

ಮನೆಯ ಶೌಚಾಲಯದಲ್ಲಿ ಕುಸಿದು ಬಿದ್ದು ನಿವೃತ್ತ ಶಿಕ್ಷಕಿ ಮೃತ್ಯು..! Read More »

ಕರಾವಳಿ, ಕ್ರೈಮ್ ನ್ಯೂಸ್

ಉಡುಪಿ: ಬಾಲಕರ ಭವನದಿಂದ ನಾಪತ್ತೆಯಾಗಿದ್ದ ವಿದ್ಯಾರ್ಥಿ ಬಸ್ ನಿಲ್ದಾಣದಲ್ಲಿ ಪತ್ತೆ

(ನ್ಯೂಸ್ ಕಡಬ) newskadaba.com ಉಡುಪಿ, ಸೆ. 12.  ನಗರದ ಸರ್ವಿಸ್ ಬಸ್ ನಿಲ್ದಾಣದಲ್ಲಿ ಬುಧವಾರ ಶಾಲಾ ಸಮವಸ್ತ್ರದಲ್ಲಿದ್ದ ಬಾಲಕನನ್ನು ಸಮಾಜಸೇವಕ ನಿತ್ಯಾನಂದ ಒಳಕಾಡು ರಕ್ಷಿಸಿ, ಮಕ್ಕಳ ರಕ್ಷಣಾ ಘಟಕಕ್ಕೆ ಒಪ್ಪಿಸಿದ್ದಾರೆ. ರಕ್ಷಿಸಲ್ಪಟ್ಟ ಬಾಲಕ ದೊಡ್ಡಣಗುಡ್ಡೆಯ ಬಾಲಕರ ಬಾಲ ಭವನದಲ್ಲಿ ಆಶ್ರಯ ಪಡೆದಿದ್ದು, ನಿಟ್ಟೂರಿನ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಯ 3 ನೇ ತರಗತಿ ವಿದ್ಯಾರ್ಥಿ ಎಂದು ತಿಳಿದುಬಂದಿದೆ. ಬಾಲಕರ ಭವನದಿಂದ ಶಾಲೆಗೆಂದು ತೆರಳಿದ ಈತ, ಶಾಲೆಗೆ ಹೋಗದೆ, ಮರಳಿ ಬಾಲಕರ ಭವನಕ್ಕೂ ಬಾರದೆ ನಾಪತ್ತೆಯಾಗಿದ್ದನು. ಬಾಲಕನ ಅನುಮಾನಸ್ಪದ

ಉಡುಪಿ: ಬಾಲಕರ ಭವನದಿಂದ ನಾಪತ್ತೆಯಾಗಿದ್ದ ವಿದ್ಯಾರ್ಥಿ ಬಸ್ ನಿಲ್ದಾಣದಲ್ಲಿ ಪತ್ತೆ Read More »

ಕರಾವಳಿ

ಉಡುಪಿ: ಸೆ.22 ರಂದು ತಾಲೂಕು ಮಟ್ಟದ ದಸರಾ ಕ್ರೀಡಾಕೂಟ

(ನ್ಯೂಸ್ ಕಡಬ) newskadaba.com ಉಡುಪಿ, ಸೆ. 12.  ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಜಿಲ್ಲಾ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ವತಿಯಿಂದ ಪ್ರಸ್ತುತ ಸಾಲಿನ ಉಡುಪಿ ಮತ್ತು ಬ್ರಹ್ಮಾವರ ತಾಲೂಕು ಮಟ್ಟದ ದಸರಾ ಕ್ರೀಡಾಕೂಟವು ನಗರದ ಅಜ್ಜರ ಕಾಡು ಜಿಲ್ಲಾ ಕ್ರೀಡಾಂಗಣದಲ್ಲಿ, ಕಾಪು ತಾಲೂಕು ಮಟ್ಟದ ದಸರಾ ಕ್ರೀಡಾ ಕೂಟವು ಹೆಜಮಾಡಿ ಕ್ರೀಡಾಂಗಣದಲ್ಲಿ, ಕುಂದಾಪುರ ಮತ್ತು ಬೈಂದೂರು ತಾಲೂಕು ಮಟ್ಟದ ದಸರಾ ಕ್ರೀಡಾಕೂಟವು ಕುಂದಾಪುರ ತಾಲೂಕು ಕ್ರೀಡಾಂಗಣದಲ್ಲಿ ಹಾಗೂ ಕಾರ್ಕಳ ಮತ್ತು ಹೆಬ್ರಿ ತಾಲೂಕು ಮಟ್ಟದ

ಉಡುಪಿ: ಸೆ.22 ರಂದು ತಾಲೂಕು ಮಟ್ಟದ ದಸರಾ ಕ್ರೀಡಾಕೂಟ Read More »

ಕರಾವಳಿ

ನೋಟರಿ ಹುದ್ದೆಗಳ ನೇಮಕಾತಿಗೆ ಅರ್ಜಿ ಆಹ್ವಾನ

(ನ್ಯೂಸ್ ಕಡಬ) newskadaba.com ಉಡುಪಿ, ಸೆ. 12.  ಜಿಲ್ಲೆಯ ಬೈಂದೂರು ತಾಲೂಕಿಗೆ ಹೊಸದಾಗಿ ಸೃಜಿಸಲಾದ ಎರಡು ನೋಟರಿ ಹುದ್ದೆಗಳನ್ನು ಭರ್ತಿ ಮಾಡುವ ಸಲುವಾಗಿ ಅರ್ಹ ವಕೀಲರಿಂದ ಅರ್ಜಿ ಆಹ್ವಾನಿಸಲಾಗಿದೆ. ವಕೀಲ ವೃತ್ತಿಯಲ್ಲಿ ಕನಿಷ್ಠ ಹತ್ತು ವರ್ಷಗಳ ಅನುಭವ ಹೊಂದಿರುವವರು ಹಾಗೂ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಮತ್ತು ಇತರೆ ವರ್ಗಗಳ ಹಾಗೂ ಮಹಿಳಾ ಅಭ್ಯರ್ಥಿಗಳಿಗೆ ವಕೀಲ ವೃತ್ತಿಯಲ್ಲಿ ಕನಿಷ್ಟ ಏಳು ವರ್ಷಗಳ ಅನುಭವ ಇರುವವರು ಸೆ.27ರೊಳಗೆ ಅರ್ಜಿ ಸಲ್ಲಿಸಬಹುದು. ಅರ್ಜಿ ನಮೂನೆ ಹಾಗೂ ಹೆಚ್ಚಿನ ಮಾಹಿತಿಗಾಗಿ ಪ್ರಧಾನ

ನೋಟರಿ ಹುದ್ದೆಗಳ ನೇಮಕಾತಿಗೆ ಅರ್ಜಿ ಆಹ್ವಾನ Read More »

ಕರಾವಳಿ
Scroll to Top