ಪುತ್ತೂರು: ಅತ್ತೆ ಹಾಗೂ ಅತ್ತಿಗೆಯಿಂದ ವರದಕ್ಷಿಣೆ ಕಿರುಕುಳ, ಹಲ್ಲೆ ಪ್ರಕರಣ ➤ ಮಹಿಳೆ ಆಸ್ಪತ್ರೆಗೆ ದಾಖಲು
(ನ್ಯೂಸ್ ಕಡಬ) newskadaba.com ಬೆಳಂದೂರು, ಡಿ. 24. ಮಹಿಳೆಯೊಬ್ಬರ ಮೇಲೆ ಅತ್ತೆ ಮತ್ತು ಅತ್ತಿಗೆ ವರದಕ್ಷಿಣೆ ಕಿರುಕುಳ ನೀಡಿ ಜೀವ ಬೆದರಿಕೆಯೊಡ್ಡಿ ಕತ್ತಿಯಿಂದ ಹಲ್ಲೆಗೈದಿರುವ ಘಟನೆ ಬೆಳಂದೂರು ಗ್ರಾಮದ ಅಮೈ ಎಂಬಲ್ಲಿ ನಡೆದಿದೆ. ಬೆಳಂದೂರು ಗ್ರಾಮದ ಅಮೈ ನಿವಾಸಿ ಕುಲದೀಪ್ ಎಂಬವರ ಪತ್ನಿಗೆ ಅವರ ಅತ್ತೆ ಹಾಗೂ ಅತ್ತಿಗೆ ವರದಕ್ಷಿಣೆ ಕಿರುಕುಳ ನೀಡಿದ್ದಲ್ಲದೇ ಜೀವ ಬೆದರಿಕೆಯೊಡ್ಡಿ ಕತ್ತಿಯಿಂದ ಹಲ್ಲೆ ಮಾಡಿದ್ದಾರೆ ಎನ್ನಲಾಗಿದೆ. ಗಾಯಾಳು ಪುತ್ತೂರಿನ ಸರಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಾಗಿದ್ದಾರೆ ಎನ್ನಲಾಗಿದೆ.
