ಇಂದಿನ ಹವಮಾನ ವರದಿ
(ನ್ಯೂಸ್ ಕಡಬ) newskadaba.com ಡಿ. 18 ಬೆಂಗಳೂರು: ರಾಜ್ಯದಲ್ಲಿ ಮಳೆ ಪ್ರಮಾಣ ಕಡಿಮೆಯಾಗಿ ಮೈ ಕೊರೆಯುವ ಚಳಿ ಹೆಚ್ಚಾಗಿದೆ. ಇನ್ನೂ ಎರಡು ದಿನ ಉತ್ತರ ಒಳನಾಡಿನಲ್ಲಿ ಶೀತ ಗಾಳಿ ಬೀಸುವ (cold wave) ಸಾಧ್ಯತೆ ಇದ್ದು, ದಟ್ಟ ಮಂಜು ಆವರಿಸಲಿದೆ. ತಾಪಮಾನ ವಾಡಿಕೆಗಿಂತ 5ರಿಂದ 6 ಡಿಗ್ರಿ ಸೆಲ್ಸಿಯಸ್ ಕಡಿಮೆ ಇರುವ ಸಾಧ್ಯತೆ ಇದ್ದು, ಜನರು ಮುನ್ನೆಚ್ಚರಿಕೆ ವಹಿಸಬೇಕು ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಡಿ.18ರಂದು ಬುಧವಾರ ರಾಜ್ಯದಲ್ಲಿ ಒಣ ಹವಾಮಾನ ಚಾಲ್ತಿಯಲ್ಲಿರುವ ಸಾಧ್ಯತೆಯಿದೆ. ಉತ್ತರ ಒಳನಾಡಿನ […]


