tamilnadu

ತಮಿಳುನಾಡಿಗೆ ಅಪ್ಪಳಿಸಿದ ದಿತ್ವಾ ಚಂಡಮಾರುತ

(ನ್ಯೂಸ್‌ ಕಡಬ) newskadaba.com,  ನ.29: ಬಂಗಾಳಕೊಲ್ಲಿಯ ನೈಋತ್ಯ ಮತ್ತು ಶ್ರೀಲಂಕಾದ ಉತ್ತರ ಭಾಗದಲ್ಲಿ ಬೀಸುತ್ತಿರುವ ದಿತ್ವಾ ಚಂಡಮಾರುತ ವಾಯುವ್ಯ ದಿಕ್ಕಿನತ್ತ ಸಾಗುತ್ತಿದ್ದು, ಉತ್ತರ ತಮಿಳುನಾಡು, ಪುದುಚೇರಿ ಮತ್ತು ದಕ್ಷಿಣ ಆಂಧ್ರಪ್ರದೇಶದ ಕರಾವಳಿಗಳಲ್ಲಿ ಶನಿವಾರ ಭಾರೀ ಮಳೆಯಾಗುತ್ತಿದೆ. ಈ ಹಿನ್ನೆಲೆಯಲ್ಲಿ ರೆಡ್ ಅಲರ್ಟ್ ಘೋಷಿಸಲಾಗಿದೆ. ಬೆಳಿಗ್ಗೆ 8.30ಕ್ಕೆ ಕೊನೆಗೊಂಡ ಆರು ಗಂಟೆಗಳಲ್ಲಿ ವ್ಯವಸ್ಥೆಯು ಗಂಟೆಗೆ 8 ಕಿ.ಮೀ ವೇಗದಲ್ಲಿ ನಿಧಾನವಾಗಿ ಚಲಿಸುತ್ತಿದೆ ಮತ್ತು ಅದೇ ಪ್ರದೇಶದಲ್ಲಿ ಬಹುತೇಕ ಸ್ಥಿರವಾಗಿದೆ ಎಂದು ಭಾರತೀಯ ಹವಾಮಾನ ಇಲಾಖೆ (ಐಎಂಡಿ) ವರದಿ ಮಾಡಿದೆ. […]

ತಮಿಳುನಾಡಿಗೆ ಅಪ್ಪಳಿಸಿದ ದಿತ್ವಾ ಚಂಡಮಾರುತ Read More »

ಬ್ರೇಕಿಂಗ್ ನ್ಯೂಸ್

ವಾಯುಭಾರ ಕುಸಿತ- ವಿಪರೀತ ಮಳೆ; ಚೆನ್ನೈ-ಬೆಂಗಳೂರು ನಡುವೆ ರೈಲು ಸಂಚಾರ ರದ್ದು

(ನ್ಯೂಸ್ ಕಡಬ) newskadaba.com ಅ.16. ವಾಯುಭಾರ ಕುಸಿತದ ಪರಿಣಾಮ ಭಾರೀ ಮಳೆ ಸುರಿಯುತ್ತಿರುವ ಹಿನ್ನೆಲೆ ಚೆನ್ನೈನಿಂದ ಬೆಂಗಳೂರಿಗೆ ಸಂಚರಿಸುವ ಕೆಲವು ರೈಲುಗಳನ್ನು ರದ್ದುಗೊಳಿಸಲಾಗಿದೆ. ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತದ ಪರಿಣಾಮ ತಮಿಳುನಾಡಿನ ಕೆಲವು ಕಡೆ ಭಾರೀ ಮಳೆ ಸುರಿಯುತ್ತಿದೆ. ಕಳೆದ ಎರಡು ದಿನಗಳಿಂದ ಚೆನ್ನೈನಲ್ಲಿ ಬಿಟ್ಟುಬಿಡದೇ ಮಳೆಯಾಗುತ್ತಿದ್ದು, ಜನಜೀವನ ಅಸ್ತವ್ಯಸ್ತವಾಗಿದೆ. ಇದರಿಂದಾಗಿ ಭಾರತೀಯ ಹವಾಮಾನ ಇಲಾಖೆ ತಮಿಳುನಾಡು ರಾಜ್ಯಾದ್ಯಂತ ಹೆಚ್ಚು ಮಳೆಯಾಗುವ ಮೂನ್ಸೂಚನೆ ನೀಡಿದೆ. ಈ ಹಿನ್ನೆಲೆಯಲ್ಲಿ ತ್ರೀವ ಮಳೆಯ ಪರಿಣಾಮ ಮುನ್ನೆಚ್ಚರಿಕಾ ಕ್ರಮವಾಗಿ ರೈಲ್ವೆ ಇಲಾಖೆ ಇಂದು

ವಾಯುಭಾರ ಕುಸಿತ- ವಿಪರೀತ ಮಳೆ; ಚೆನ್ನೈ-ಬೆಂಗಳೂರು ನಡುವೆ ರೈಲು ಸಂಚಾರ ರದ್ದು Read More »

ರಾಷ್ಟ್ರೀಯ ನ್ಯೂಸ್

2 ಬಸ್ ಗಳ ನಡುವೆ ಮುಖಾಮುಖಿ ಢಿಕ್ಕಿ ➤ ಇಬ್ಬರು ಮೃತ್ಯು

(ನ್ಯೂಸ್ ಕಡಬ) newskadaba.com ಚೆನ್ನೈ, ಜೂ. 19. ಎರಡು ಖಾಸಗಿ ಬಸ್ ಗಳ ನಡುವೆ ಮುಖಾಮುಖಿ ಢಿಕ್ಕಿ ಸಂಭವಿಸಿದ ಪರಿಣಾಮ ಇಬ್ಬರು ಮೃತಪಟ್ಟು, ಕನಿಷ್ಠ 30 ಮಂದಿ ಗಾಯಗೊಂಡ ಘಟನೆ ಕಡಲೂರು ಜಿಲ್ಲೆಯಲ್ಲಿ ನಡೆದಿದೆ. ಘಟನೆಯಲ್ಲಿ ಎರಡೂ ವಾಹನಗಳ ಮುಂಭಾಗ ಸಂಪೂರ್ಣ ಜಖಂಗೊಂಡಿದೆ. ಅಪಘಾತ ಸಂಭವಿಸಿದ ತಕ್ಷಣ ಸಾರ್ವಜನಿಕರು ಹಾಗೂ ಪೊಲೀಸರು ಸ್ಥಳಕ್ಕೆ ಧಾವಿಸಿ ಗಾಯಳುಗಳನ್ನು ಆಸ್ಪತ್ರೆಗೆ ಸಾಗಿಸಲು ಸಹಕರಿಸಿದ್ದಾರೆ. ಘಟನೆಗೆ ನಿಖರ ಕಾರಣ ತನಿಖೆಯ ಬಳಿಕವಷ್ಟೇ ತಿಳಿದುಬರಬೇಕಿದೆ ಎಂದು ಪೊಲೀಸರು ತಿಳಿಸಿದ್ದಾರೆ.

2 ಬಸ್ ಗಳ ನಡುವೆ ಮುಖಾಮುಖಿ ಢಿಕ್ಕಿ ➤ ಇಬ್ಬರು ಮೃತ್ಯು Read More »

ಕ್ರೈಮ್ ನ್ಯೂಸ್, ರಾಷ್ಟ್ರೀಯ ನ್ಯೂಸ್

ಇಬ್ಬರು ಮಕ್ಕಳನ್ನು ಬಾವಿಗೆಸೆದು ಆತ್ಮಹತ್ಯೆ ಮಾಡಿಕೊಂಡ ತಾಯಿ…!

(ನ್ಯೂಸ್ ಕಡಬ) newskadaba.com ತಮಿಳುನಾಡು, ಮಾ. 15. ಮಹಿಳೆಯೊಬ್ಬರು ತನ್ನ ಇಬ್ಬರು ಮಕ್ಕಳನ್ನು ಬಾವಿಗೆ ಎಸೆದು, ಬಳಿಕ ತಾನೂ ಮೋಟಾರ್ ಪಂಪ್ ರೂಮಿನಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ತಡರಾತ್ರಿ ತಮಿಳುನಾಡು ನಾಮಕ್ಕಲ್ ಜಿಲ್ಲೆಯ ಮೋಹನೂರಿನಲ್ಲಿ ನಡೆದಿದೆ. ಮೃತರನ್ನು ಗುಣವತಿ, ಆಕೆಯ ಮಕ್ಕಳಾದ ಪ್ರಿಯಾನ್ (5) ಸುಜಿತ್ಪ್ರಿಯನ್ (2) ಎಂದು ಗುರುತಿಸಲಾಗಿದೆ.

ಇಬ್ಬರು ಮಕ್ಕಳನ್ನು ಬಾವಿಗೆಸೆದು ಆತ್ಮಹತ್ಯೆ ಮಾಡಿಕೊಂಡ ತಾಯಿ…! Read More »

ಕ್ರೈಮ್ ನ್ಯೂಸ್, ರಾಷ್ಟ್ರೀಯ ನ್ಯೂಸ್

ಚಾಲಕನ ನಿಯಂತ್ರಣ ತಪ್ಪಿವಿರುದ್ದ ದಿಕ್ಕಿಗೆ ಚಲಿಸಿದ ಲಾರಿ ► ಅಪಾಯದಿಂದ ಪಾರು

(ನ್ಯೂಸ್ ಕಡಬ) newskadaba.com ಕಡಬ, ಆ.29. ಸುಬ್ರಹ್ಮಣ್ಯ ಧರ್ಮಸ್ಥಳ ರಾಜ್ಯ ಹೆದ್ದಾರಿಯ ಮರ್ಧಾಳ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ತಿರುವಿನಲ್ಲಿ ಲಾರಿಯೊಂದು ಚರಂಡಿಗೆ ಇಳಿದ ಘಟನೆ ಮಂಗಳವಾರ ಬೆಳಗ್ಗಿನ ಜಾವ ನಡೆದಿದೆ. ತಮಿಳುನಾಡು ನೋಂದಣಿಯ ಲಾರಿ ಚಾಲಕನ ನಿಯಂತ್ರಣ ತಪ್ಪಿ ವಿರುದ್ಧ ದಿಕ್ಕಿನ ಚರಂಡಿಗೆ ಇಳಿದಿದ್ದು, ಬಲಭಾಗ ಜಖಂಗೊಂಡಿದೆ. ಲಾರಿಯಲ್ಲಿ ಚಾಲಕ ಹಾಗೂ ಕ್ಲೀನರ್ ಇದ್ದು, ಅಪಾಯದಿಂದ ಪಾರಾಗಿದ್ದಾರೆ.

ಚಾಲಕನ ನಿಯಂತ್ರಣ ತಪ್ಪಿವಿರುದ್ದ ದಿಕ್ಕಿಗೆ ಚಲಿಸಿದ ಲಾರಿ ► ಅಪಾಯದಿಂದ ಪಾರು Read More »

ಕರಾವಳಿ
Scroll to Top