ಎಸ್‌ವೈಎಸ್ ಮಾಣಿ ಸರ್ಕಲ್ ವತಿಯಿಂದ C-ಮೀಟ್ 2k23 ಕ್ಯಾಂಪ್ – ಪರಸ್ಪರ ಕೈಜೋಡಿಸಿ ಕಾರ್ಯಾಚರಿಸಿರಿ ಪರಾಜಯ ಹೊಂದಲಾರಿರಿ- ಬಹು| ಅಬ್ದುಲ್ ಅಝೀಝ್ ಮಿಸ್ಬಾಹಿ
(ನ್ಯೂಸ್ ಕಡಬ) newskadaba.com ಮಾಣಿ, ಜು. 21. ಸಂಘಟನಾ ಚಟುವಟಿಕೆಗಳನ್ನು ಬಲಿಷ್ಠಗೊಳಿಸಲು ಪರಸ್ಪರ ಕೈಜೋಡಿಸಿ ಕಾರ್ಯಾಚರಿಸಿರಿ. ನೀವು ಎಂದಿಗೂ ಪರಾಜಯ ಹೊಂದಲಾರಿರಿ ಎಂದು ಎಸ್‌ವೈಎಸ್ ದಕ ಈಸ್ಟ್ ಜಿಲ್ಲಾಧ್ಯಕ್ಷ ಅಬ್ದುಲ್ ಅಝೀಝ್ ಮಿಸ್ಬಾಹಿ ಹೇಳಿದರು. ಅವರು ಕರ್ನಾಟಕ ರಾಜ್ಯ ಸುನ್ನೀ ಯುವಜನ ಸಂಘ(ರಿ.) ಎಸ್‌ವೈಎಸ್ ಮಾಣಿ ಸರ್ಕಲ್ ವತಿಯಿಂದ ನಡೆದ C-ಮೀಟ್ 2k23 ಎಂಬ ಕ್ಯಾಂಪ್‌ನ ಆಧ್ಯಾತ್ಮಿಕ ತರಗತಿಯಲ್ಲಿ ಮಾತನಾಡಿದರು. ಎಸ್‌ವೈಎಸ್ ಪುತ್ತೂರು ಝೋನ್ ಪ್ರಧಾನ ಕಾರ್ಯದರ್ಶಿ ಅಬ್ದುಲ್ ಜಲೀಲ್ ಸಖಾಫಿ ಅಲ್ ಹಿಕಮಿ ಕಾರ್ಯಕ್ರಮವನ್ನು ಉದ್ಘಾಟಿಸಿದರು. […]

