ಮೃತಪಟ್ಟ ಸ್ಥಿತಿಯಲ್ಲಿ ಕಾಡಾನೆ ಪತ್ತೆ – ವಿದ್ಯುತ್ ಸ್ಪರ್ಶ ಶಂಕೆ
(ನ್ಯೂಸ್ ಕಡಬ) newskadaba.com ಅ. 17. ಆಕಸ್ಮಿಕವಾಗಿ ವಿದ್ಯುತ್ ತಂತಿ ಸ್ಪರ್ಶಿಸಿ ಕಾಡಾನೆಯೊಂದು ಮೃತಪಟ್ಟ ಸ್ಥಿತಿಯಲ್ಲಿ ತಾಲೂಕಿನ ಬಾಳ್ಳುಪೇಟೆ ಬನವಾಸೆ ಗ್ರಾಮದ ಬಿಎಸ್ಎನ್ಎಲ್ ಕಚೇರಿ ಸಮೀಪ ಪತ್ತೆಯಾಗಿದೆ. ಆನೆಯ ಸೊಂಡಿಲು ವಿದ್ಯುತ್ ತಂತಿಗೆ ತಾಗಿ, ವಿದ್ಯುತ್ ಶಾಕ್ ಸಂಭವಿಸಿರಬಹುದು ಎಂದು ಅರಣ್ಯಾಧಿಕಾರಿಗಳು ಅಭಿಪ್ರಾಯಪಟ್ಟಿದ್ದಾರೆ. ವಲಯ ಅರಣ್ಯಾಧಿಕಾರಿ ಹೇಮಂತ್ ಘಟನೆಯನ್ನು ದೃಢಪಡಿಸಿದ್ದು, ಮರಣೋತ್ತರ ಪರೀಕ್ಷೆಯ ನಂತರ ಸಾವಿಗೆ ನಿಖರ ಕಾರಣ ತಿಳಿಯಲಿದೆ ಎಂದು ತಿಳಿಸಿದ್ದಾರೆ.
ಮೃತಪಟ್ಟ ಸ್ಥಿತಿಯಲ್ಲಿ ಕಾಡಾನೆ ಪತ್ತೆ – ವಿದ್ಯುತ್ ಸ್ಪರ್ಶ ಶಂಕೆ Read More »
ಕರ್ನಾಟಕ, ಕ್ರೈಮ್ ನ್ಯೂಸ್
