sullia

ಸುಳ್ಯ: ಅರಂತೋಡು ಗ್ರಾ.ಪಂ. ಘನತ್ಯಾಜ್ಯ ಘಟಕಕ್ಕೆ ಬೆಂಕಿ

(ನ್ಯೂಸ್ ಕಡಬ) newskadaba.com, ಜು. 10. ಸುಳ್ಯ: ಅರಂತೋಡು ಗ್ರಾಮ ಪಂಚಾಯಿತಿಯ ಘನತ್ಯಾಜ್ಯ ಘಟಕಕ್ಕೆ ಆಕಸ್ಮಿಕವಾಗಿ ಬೆಂಕಿ ತಗುಲಿದ್ದು ಘಟಕ ಹೊತ್ತಿ ಉರಿದಿದೆ.   ಬುಧವಾರ ಸಂಜೆ ಘಟನೆ ನಡೆದಿದ್ದು ಘಟಕದಲ್ಲಿ ಪೂರ್ತಿಯಾಗಿ ತ್ಯಾಜ್ಯ ಬೇರ್ಪಡಿಸಿ ತುಂಬಿಡಲಾಗಿದ್ದು ಬೆಂಕಿ ತಗುಲಿ ಹೊತ್ತಿ ಉರಿದಿದೆ. ಕಟ್ಟಡ ಮತ್ತಿತರ ಸೇರಿ ಅಪಾರ ಹಾನಿ ಸಂಭವಿಸಿದೆ. ವಿದ್ಯುತ್ ಶಾರ್ಟ್ ಸಕ್ಯೂಟ್ ನಿಂದ ಬೆಂಕಿ ತಗುಲಿರಬಹುದು ಎಂದು ಶಂಕಿಸಲಾಗಿದೆ. ಅಗ್ನಿ ಶಾಮಕ ದಳದವರು ಬಂದು ಬೆಂಕಿ ನಂದಿಸಿದರು. ಘಟನೆಯಲ್ಲಿ ಘನತ್ಯಾಜ್ಯ ಸಂಪೂರ್ಣ ಹೊತ್ತಿ […]

ಸುಳ್ಯ: ಅರಂತೋಡು ಗ್ರಾ.ಪಂ. ಘನತ್ಯಾಜ್ಯ ಘಟಕಕ್ಕೆ ಬೆಂಕಿ Read More »

ಕರಾವಳಿ

ಸುಳ್ಯ: 3 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಆರೋಪಿಯ ಬಂಧನ 

(ನ್ಯೂಸ್ ಕಡಬ) newskadaba.comಸುಳ್ಯ, ಜು. 05. ಮನೆಯೊಂದರಲ್ಲಿ ನಡೆದ ದರೋಡೆ ಪ್ರಕರಣದಲ್ಲಿ ತಲೆಮರೆಸಿಕೊಂಡಿದ್ದ ಆರೋಪಿನ್ನು ಬಂಧಿಸಿದ್ದಾರೆ ಎಂದು ವರದಿ ತಿಳಿಸಿದೆ. ಬಂಧಿತ ಆರೋಪಿಯನ್ನು ತಿರುವರೂರ್ ನಿವಾಸಿ ಸುಧಾಕರ ಆರ್ಮುಗಮ್ (42) ಎಂದು ಗುರತಿಸಲಾಗಿದೆ. ಮನೆಯೊಂದರಲ್ಲಿ 150000 ನಗದು ಹಾಗೂ 01 ಮೊಬೈಲ್ ಫೋನ್ ದರೋಡೆ ಪ್ರಕರಣದಲ್ಲಿ ತಲೆಮರೆಸಿಕೊಂಡಿದ್ದ ಎನ್ನಲಾಗಿದೆ. ಸುಳ್ಯ ಠಾಣಾ ಪೊಲೀಸರು ದಸ್ತಗಿರಿ ಮಾಡಿ ನ್ಯಾಯಾಲಯಕ್ಕೆ ಹಾಜರುಪಡಿಸಿರುತ್ತಾರೆ ಎಂದು ವರದಿ ತಿಳಿಸಿದೆ.    

ಸುಳ್ಯ: 3 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಆರೋಪಿಯ ಬಂಧನ  Read More »

ಕರಾವಳಿ, ಕರ್ನಾಟಕ, ಕ್ರೈಮ್ ನ್ಯೂಸ್

ಸುಳ್ಯ: ಅಪಘಾತ ಪ್ರಕರಣ..! ಗಂಭೀರ ಗಾಯಗೊಂಡಿದ್ದ ವೈದ್ಯ ಮೃತ್ಯು

(ನ್ಯೂಸ್ ಕಡಬ) newskadaba.com ಸುಳ್ಯ, ಜು. 05. ಕೆಲ ದಿನಗಳ ಹಿಂದೆ ಕೆ.ಎಸ್.ಆರ್.ಟಿ.ಸಿ ಬಸ್ ಮತ್ತು ಬೈಕ್ ನಡುವೆ ಸಂಭವಿಸಿದ್ದ ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡು ಚಿಕಿತ್ಸೆ ಪಡೆಯುತ್ತಿದ್ದ ವೈದ್ಯರೋರ್ವರು ಮೃತಪಟ್ಟ ಘಟನೆ ಸುಳ್ಯದಲ್ಲಿ ವರದಿಯಾಗಿದೆ. ಚಿಕಿತ್ಸೆ ಫಲಕಾರಿಯಾಗದೆ ಮಂಗಳೂರು ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ. ಆಸ್ಪತ್ರೆಯಿಂದ ಮನೆಗೆ ಹೋಗುವ ಸಂಧರ್ಭದಲ್ಲಿ ಘಟನೆ ಸಂಭವಿಸಿದೆ ಎನ್ನಲಾಗಿದೆ.

ಸುಳ್ಯ: ಅಪಘಾತ ಪ್ರಕರಣ..! ಗಂಭೀರ ಗಾಯಗೊಂಡಿದ್ದ ವೈದ್ಯ ಮೃತ್ಯು Read More »

ಕರಾವಳಿ, ಕ್ರೈಮ್ ನ್ಯೂಸ್

ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಸಚಿವ ಗುಂಡೂರಾವ್ ಚಾಲನೆ

(ನ್ಯೂಸ್ ಕಡಬ) newsksdaba.com ಸುಳ್ಯ, ಜೂ. 19. ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಹಾಗೂ ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಬುಧವಾರ ವಿವಿಧ ಅಭಿವೃದ್ಧಿ ಕಾಮಗಾರಿಗೆ ಚಾಲನೆ ನೀಡಿದರು. ಪಂಚಾಯತ್ ರಾಜ್ ಇಂಜಿನಿಯರಿಂಗ್ ಉಪವಿಭಾಗದ ನೂತನ ಕಚೇರಿ, ಸುಳ್ಯ ತಾಲೂಕು ಆಸ್ಪತ್ರೆಯ ಬ್ಲಾಕ್ ಪಬ್ಲಿಕ್ ಹೆಲ್ತ್ ಲ್ಯಾಬ್ ಮತ್ತು ನೂತನ ಶವಗಾರ, ಸಾಮಾಜಿಕ ವಲಯ ಅರಣ್ಯಾಧಿಕಾರಿಗಳ ಕಚೇರಿ ಕಟ್ಟಡ,  ಸುಳ್ಯ ನಗರ ಯೋಜನಾ ಪ್ರಾಧಿಕಾರ ಕಚೇರಿ ಮತ್ತಿತರ ಕಾಮಗಾರಿಗಳನ್ನು ಉದ್ಘಾಟಿಸಿದರು. ಸಂಧ್ಯಾ ಸುರಕ್ಷಾ ಮತ್ತು ವೃದ್ಧಾಪ್ಯ

ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಸಚಿವ ಗುಂಡೂರಾವ್ ಚಾಲನೆ Read More »

ಕರಾವಳಿ

ಬೆಳ್ಳಾರೆ: ರಬ್ಬರ್ ಹಾಲು ಸಂಗ್ರಹ ಕೇಂದ್ರದಿಂದ ಕಳವು- ದೂರು ದಾಖಲು

(ನ್ಯೂಸ್ ಕಡಬ) newskadaba.com ಸುಳ್ಯ, ಜೂ. 18. ಕರ್ನಾಟಕ ಅರಣ್ಯ ಅಭಿವೃದ್ಧಿ ನಿಗಮದ ಬೆಳ್ಳಾರೆ ನೆಟ್ಟಾರು ಘಟಕದ ಅರ್ತಿಯಡ್ಕ ಹಾಲು ಸಂಗ್ರಹ ಕೇಂದ್ರದ ಬಾಗಿಲಿನ ಬೀಗ ಮುರಿದು ಒಳನುಗ್ಗಿದ ಕಳ್ಳರು ಅಪಾರ ಪ್ರಮಾಣದ ಸೊತ್ತುಗಳನ್ನು ಕಳವುಗೈದಿರುವ ಬಗ್ಗೆ ಬೆಳ್ಳಾರೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಹಾಲು‌ ಸಂಗ್ರಹ ಕೇಂದ್ರದ ಬಾಗಿಲನ್ನು ಮುರಿದು ಒಳನುಗ್ಗಿರುವ ಕಳ್ಳರು ದಾಸ್ತಾನು ಇರಿಸಲಾಗಿದ್ದ ರಬ್ಬರ್ ಮರಕ್ಕೆ ಮಳೆಕವಚ ಅಳವಡಿಸಲು ಬೇಕಾದ ಸಾಮಗ್ರಿಗಳಾದ 16,700 ರೂ. ಮೌಲ್ಯದ 12 ಟನ್‌ ಗಮ್‌, 30,950 ರೂ. ಮೌಲ್ಯದ

ಬೆಳ್ಳಾರೆ: ರಬ್ಬರ್ ಹಾಲು ಸಂಗ್ರಹ ಕೇಂದ್ರದಿಂದ ಕಳವು- ದೂರು ದಾಖಲು Read More »

ಕರಾವಳಿ

ದ.ಕ.ಜಿಲ್ಲೆಯಲ್ಲಿ ಡೆಂಗ್ಯೂ ಪ್ರಕರಣ ಹೆಚ್ಚಳ

(ನ್ಯೂಸ್ ಕಡಬ) newskadaba.com ಜೂ:04, ಮಂಗಳೂರು: ಮಂಗಳೂರು: ಮಳೆಗಾಲದ ನಡುವೆ ಕಳೆದ ಕೆಲವು ದಿನಗಳಿಂದ ಮಳೆಯ ಜತೆಗೆ ಬಿಸಿಲಿನ ವಾತಾವರಣವೂ ಕಂಡು ಬರುತ್ತಿರುವುದರಿಂದ ದಕ್ಷಿಣ ಕನ್ನಡ ಜಿಲ್ಲೆಯ ಗ್ರಾಮೀಣ ಭಾಗಗಳಲ್ಲಿ ಶಂಕಿತ ಡೆಂಗ್ಯೂ ಪ್ರಕರಣಗಳಲ್ಲಿ ಏರಿಕೆ ಕಂಡು ಬರುತ್ತಿದೆ. ಡೆಂಗ್ಯೂ ಬಗ್ಗೆ ನಿರ್ಲಕ್ಷ್ಯ ವಹಿಸಿದರೆ ಪ್ರಾಣಾಪಾಯಕ್ಕೂ ಸಾಧ್ಯತೆ ಇರುವುದರಿಂದ ಸಾರ್ವಜನಿಕರು ತಮ್ಮ ಮನೆಯ ಸುತ್ತಮುತ್ತ ನೀರು ನಿಲ್ಲದಂತೆ ಮುಂಜಾಗೃತಾ ಕ್ರಮ ಗಳನ್ನು ವಹಿಸಬೇಕು ಎಂದು ಜಿಲ್ಲಾ ಆರೋಗ್ಯ ಅಧಿಕಾರಿ ಡಾ.ಎಚ್.ಆರ್.ತಿಮ್ಮಯ್ಯ ಹೇಳಿದ್ದಾರೆ. ಜಿಲ್ಲಾ ಆರೋಗ್ಯ ಇಲಾಖೆಯ ಕಚೇರಿಯಲ್ಲಿ

ದ.ಕ.ಜಿಲ್ಲೆಯಲ್ಲಿ ಡೆಂಗ್ಯೂ ಪ್ರಕರಣ ಹೆಚ್ಚಳ Read More »

ಕರಾವಳಿ

ಮೋದಿಗಾಗಿ ಸುಳ್ಯದಲ್ಲಿ ಕೊರಗಜ್ಜನಿಗೆ ಹರಕೆ ತೀರಿಸಿದ ವಿಜಯೇಂದ್ರ

(ನ್ಯೂಸ್ ಕಡಬ) newskadaba.com , ಮೇ.17: ದ.ಕ ಸುಳ್ಯ ಕೋರಂಬಡ್ಕದಲ್ಲಿ ನಡೆದ ಕೊರಗಜ್ಜನ ಹರಕೆ ನೇಮೋತ್ಸವದಲ್ಲಿBJP ರಾಜ್ಯಾಧ್ಯಕ್ಷ BYವಿಜಯೇಂದ್ರ ಭಾಗಿಯಾದರು. ಸುಳ್ಯ ಜಯನಗರದ ಶ್ರೀನಾಗಬ್ರಹ್ಮ ಆದಿಮೊಗೇರ್ಕಳ ದೈವಸ್ಥಾನ ಗುಳಿಗ ದೈವ &ಕೊರಗಜ್ಜ ದೈವಸ್ಥಾನದಲ್ಲಿ ಶ್ರೀಕೊರಗಜ್ಜ ದೈವದ ನೇಮ& ಪರಿವಾರ ದೈವಗಳ ತಂಬಿಲ ಸೇವೆ ನಡೆಯಿತು. ಮೂರನೇ ಬಾರಿ ಮೋದಿ ಪ್ರಧಾನಿಯಾಗುವಂತೆ ಸಂಕಲ್ಪ ಮಾಡಿ BJP ಜಯನಗರ ಬೂತ್ ಸಮಿತಿ ಹರಕೆ ಹೇಳಿತ್ತು. ಇದೀಗ BJP ವತಿಯಿಂದ ಹರಕೆ ನೇಮೋತ್ಸವ ನಡೆದಿದ್ದು, ವಿಜಯೇಂದ್ರಗೆ ಭಾಗವಹಿಸಿ ಪ್ರಸಾದ ಸ್ವೀಕರಿಸಿದರು. ಸಂಸದ

ಮೋದಿಗಾಗಿ ಸುಳ್ಯದಲ್ಲಿ ಕೊರಗಜ್ಜನಿಗೆ ಹರಕೆ ತೀರಿಸಿದ ವಿಜಯೇಂದ್ರ Read More »

ಕರಾವಳಿ, ಕರ್ನಾಟಕ

ಸುಳ್ಯ : ರೇಬಿಸ್ ರೋಗಕ್ಕೆ ಮಹಿಳೆ ಬಲಿ

(ನ್ಯೂಸ್ ಕಡಬ) newskadaba.com ಮಾ. 22: ತಿಂಗಳ ಹಿಂದೆ ನಾಯಿ ಕಡಿತಕ್ಕೆ ಒಳಗಾಗಿದ್ದ ಮಹಿಳೆ ಮೃತಪಟ್ಟ ಘಟನೆ ಸುಳ್ಯದ ಸಂಪಾಜೆಯಲ್ಲಿ ಸಂಭವಿಸಿದೆ. ಸಂಪಾಜೆಯ ಕಲ್ಲುಗುಂಡಿ ಸಮೀಪದ 42 ವರ್ಷದ ಮಹಿಳೆ ಫೆ.7ರಂದು ಅರಂತೋಡಿನಲ್ಲಿ ತೋಟದ ಕೆಲಸಕ್ಕೆ ತೆರಳಿದ್ದಾಗ ಅವರಿಗೆ ನಾಯಿಮರಿಯೊಂದು ಕಚ್ಚಿತ್ತು. ಆದರೆ ಮಹಿಳೆ ಈ ಬಗ್ಗೆ ಯಾರಿಗೂ ತಿಳಿಸಿರಲಿಲ್ಲ ಹಾಗೂ ಚಿಕಿತ್ಸೆಯನ್ನೂ ಪಡೆದಿರಲಿಲ್ಲ ಎನ್ನಲಾಗಿದೆ. ಸೋಮವಾರ ಆಕೆಗೆ ಹೊಟ್ಟೆನೋವು ಕಾಣಿಸಿಕೊಂಡಿದ್ದ ಹಿನ್ನೆಲೆಯಲ್ಲಿ ಸುಳ್ಯದ ಸರಕಾರಿ ಆಸ್ಪತ್ರೆಗೆ ಚಿಕಿತ್ಸೆಗಾಗಿ ಬಂದಿದ್ದರು. ಈ ವೇಳೆ ನೀರನ್ನು ನೋಡಿ ಬೊಬ್ಬೆ ಹಾಕುವುದು ಸಹಿತ ವಿಚಿತ್ರ ವರ್ತನೆ

ಸುಳ್ಯ : ರೇಬಿಸ್ ರೋಗಕ್ಕೆ ಮಹಿಳೆ ಬಲಿ Read More »

ಕರಾವಳಿ

ಸುಳ್ಯ: ಬಸ್‌ನ ಟಯರ್ ಸ್ಫೋಟ; ಎಸ್ಸೆಸ್ಸೆಲ್ಸಿ ಪರೀಕ್ಷೆ ಬರೆಯಲು ತೆರಳುತ್ತಿದ್ದ ವಿದ್ಯಾರ್ಥಿಗಳಿಗೆ ತೊಂದರೆ

(ನ್ಯೂಸ್ ಕಡಬ) newskadaba.com ಮಾ. 22: ಕೆಎಸ್‌ಆರ್‌ಟಿಸಿ ಬಸ್‌ನ ಟಯರ್ ಸ್ಫೋಟಗೊಂಡು ಟಯರ್‌ನಲ್ಲಿ ಬೆಂಕಿ ಕಾಣಿಸಿಕೊಂಡು ಬಸ್ ಬಾಕಿಯಾದ ಘಟನೆ ಅರಂಬೂರು ಬಳಿ ಮಾ.21ರಂದು ನಡೆದಿದೆ. ಕೊಯನಾಡಿನಿಂದ ಸುಳ್ಯ ಕಡೆಗೆ ಬರುತ್ತಿದ್ದ ಬಸ್ ಅರಂಬೂರು ಬಳಿ ಬರುತ್ತಿದ್ದಂತೆ ಬಸ್‌ನ ಟಯರ್ ಸ್ಪೋಟಗೊಂಡು ಬೆಂಕಿ ಕಾಣಿಸಿಕೊಂಡಿತು. ಈ ಬಸ್‌ನಲ್ಲಿ ಪ್ರಯಾಣಿಕರಲ್ಲದೆ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳು ಪರೀಕ್ಷೆ ಬರೆಯಲೆಂದು ಸುಳ್ಯಕ್ಕೆ ಬರುತ್ತಿದ್ದರು. ಬಸ್ ಕೈಕೊಟ್ಟ ನಂತರ ವಿದ್ಯಾರ್ಥಿಗಳು ರಿಕ್ಷಾ, ಬೈಕ್ ಹಾಗೂ ಜೀಪ್‌ಗಳಲ್ಲಿ ತೆರಳಿದರೆಂದು ತಿಳಿದುಬಂದಿದೆ.

ಸುಳ್ಯ: ಬಸ್‌ನ ಟಯರ್ ಸ್ಫೋಟ; ಎಸ್ಸೆಸ್ಸೆಲ್ಸಿ ಪರೀಕ್ಷೆ ಬರೆಯಲು ತೆರಳುತ್ತಿದ್ದ ವಿದ್ಯಾರ್ಥಿಗಳಿಗೆ ತೊಂದರೆ Read More »

ಕರಾವಳಿ

ಸುಳ್ಯ: ಕುಕ್ಕೆ ಸುಬ್ರಹ್ಮಣ್ಯದಲ್ಲಿ ಸರ್ಪ ಸಂಸ್ಕಾರ ಸೇವೆ ಮಾಡಿಸಿದ ಬಾಲಿವುಡ್ ನಟಿ ಕತ್ರಿನಾ ಕೈಫ್

(ನ್ಯೂಸ್ ಕಡಬ) newskadaba.com ಮಾ. 12: ಸರ್ಪ ಸಂಸ್ಕಾರ ಸೇವೆಯನ್ನು ಮಾಡಲು ಕತ್ರಿನಾ ಕೈಫ್ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ಅಗಮಿಸಿದ್ದಾರೆ. ಮಾರ್ಚ್ 11 ರಂದು, ಕತ್ರಿನಾ ಅತಿಥಿ ಗೃಹದಿಂದ ಕಾರಿನಲ್ಲಿ ದೇವಸ್ಥಾನಕ್ಕೆ ಆಗಮಿಸಿದರು, ತಲೆಗೆ ದುಪಟ್ಟಾ ಮುಚ್ಚಿಕೊಂಡು ಓಡಾಡುತ್ತಿದ್ದಾರೆ. ಆದಿ ಸುಬ್ರಹ್ಮಣ್ಯದಲ್ಲಿ ಸರ್ಪ ಸಂಸ್ಕಾರದ ಜೊತೆಗೆ, ಅವರು ನಾಗಪ್ರತಿಷ್ಠೆ, ಸಂಕಲ್ಪ, ಮತ್ತು ಆಶ್ಲೇಷ ಬಲಿ ಸೇರಿದಂತೆ ಹಲವಾರು ಸೇವೆಯಲ್ಲಿ ಭಾಗವಹಿಸಲಿದ್ದಾರೆ. ಕೆಲ ತಿಂಗಳ ಹಿಂದೆ ಕತ್ರೀನಾ ಕುತ್ಯಾರಿನಲ್ಲಿರುವ ಕೊರಗಜ್ಜ ಕ್ಷೇತ್ರಕ್ಕೆ ಭೇಟಿ ನೀಡಿದ್ದರು. ಇದೀಗ ಕುಕ್ಕೆ ಸುಬ್ರಹ್ಮಣ್ಯ

ಸುಳ್ಯ: ಕುಕ್ಕೆ ಸುಬ್ರಹ್ಮಣ್ಯದಲ್ಲಿ ಸರ್ಪ ಸಂಸ್ಕಾರ ಸೇವೆ ಮಾಡಿಸಿದ ಬಾಲಿವುಡ್ ನಟಿ ಕತ್ರಿನಾ ಕೈಫ್ Read More »

ಕರಾವಳಿ
Scroll to Top