ಶೀಘ್ರದಲ್ಲೇ ಬರಲಿದೆ ಹೆಚ್ಡಿಕೆ ಮಾಲಕತ್ವದ ಕ್ಯಾಬ್ ಸರ್ವೀಸ್ ► ‘ನಮ್ಮ ಟೈಗರ್’ ಆ್ಯಪ್ ಆಧಾರಿತ ಕ್ಯಾಬ್ ಸೇವೆ
(ನ್ಯೂಸ್ ಕಡಬ) newskadaba.com ಬೆಂಗಳೂರು, ಆ.01. ಓಲಾ, ಉಬರ್ ನಂತಹ ಆ್ಯಪ್ ಆಧಾರಿತ ಟ್ಯಾಕ್ಸಿ ಸೇವೆಯ ಸಂಸ್ಥೆಗಳಿಗೆ ಸಡ್ಡು ಹೊಡೆದು ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಮಾರ್ಗದರ್ಶನದಲ್ಲಿ ಚಾಲಕರೇ ಸೇರಿ ಆರಂಭಿಸುತ್ತಿರುವ ಆ್ಯಪ್ ಆಧಾರಿತ ಕ್ಯಾಬ್ ಸೇವೆ ‘ನಮ್ಮ ಟೈಗರ್‘ ಶೀಘ್ರದಲ್ಲೇ ಆರಂಭವಾಗಲಿದೆ. ಈ ಮೊದಲು HDK Cab ಎಂದು ಹೆಸರಿಡಲು ಚಾಲಕ ಮುಖಂಡರು ನಿರ್ಧರಿಸಿದ್ದರು. ಆದರೆ ಎಚ್.ಡಿ. ಕುಮಾರಸ್ವಾಮಿಯವರ ನಿರ್ದೇಶನದಂತೆ ತಮ್ಮ ಹೆಸರಿನ ಬದಲು ‘ನಮ್ಮ ಟೈಗರ್’ ಎಂದು ಹೆಸರಿಸಲಾಗಿದೆ. ಈ ನೂತನ ಕ್ಯಾಬ್ ಸೇವೆ ಆಗಸ್ಟ್ 15ರೊಳಗೆ ಸಾರ್ವಜನಿಕ […]

