ರಾಜ್ಯ ಮಟ್ಟದ ಅಂಚೆ ಕುಂಚ ಚಿತ್ರಕಲಾ ಸ್ಪರ್ಧೆ – ಕುಮಾರಸ್ವಾಮಿ ವಿದ್ಯಾಲಯದ ಕುಶಿತ್ ಮಲ್ಲಾರನಿಗೆ ದ್ವಿತೀಯ ಸ್ಥಾನ

(ನ್ಯೂಸ್ ಕಡಬ) newskadaba.com ಕಡಬ, ಅ. 04. ಶ್ರೀ ಕ್ಷೇತ್ರ ಧರ್ಮಸ್ಥಳ ಯೋಗ ಮತ್ತು ನೈತಿಕ ಶಿಕ್ಷಣ ಯೋಜನೆ ಶಾಂತಿವನ ಟ್ರಸ್ಟ್ ವತಿಯಿಂದ ನಡೆಸಲಾದ ರಾಜ್ಯಮಟ್ಟದ ಅಂಚೆ ಕುಂಚ ಚಿತ್ರಕಲಾ ಸ್ಪರ್ಧೆಯಲ್ಲಿ ಸುಬ್ರಹ್ಮಣ್ಯದ ಕುಮಾರಸ್ವಾಮಿ ವಿದ್ಯಾಲಯದ ಐದನೇ ತರಗತಿ ವಿದ್ಯಾರ್ಥಿ ಕುಶಿತ್ ಮಲ್ಲಾರ ಭಾಗವಹಿಸಿ ದ್ವಿತೀಯ ಸ್ಥಾನ ಪಡೆದಿರುತ್ತಾನೆ. ಈತ ಶ್ರೀ ಲಿಂಗಪ್ಪ ಮಲ್ಲಾರ ಮತ್ತು ಶ್ರೀಮತಿ ಭವ್ಯ ದಂಪತಿಗಳ ಪುತ್ರ. ಈತನಿಗೆ ಚಿತ್ರಕಲಾ ಶಿಕ್ಷಕ ಸತೀಶ್ ಪಂಜ ತರಬೇತಿ ನೀಡಿರುತ್ತಾರೆ.

ರಾಜ್ಯ ಮಟ್ಟದ ಅಂಚೆ ಕುಂಚ ಚಿತ್ರಕಲಾ ಸ್ಪರ್ಧೆ – ಕುಮಾರಸ್ವಾಮಿ ವಿದ್ಯಾಲಯದ ಕುಶಿತ್ ಮಲ್ಲಾರನಿಗೆ ದ್ವಿತೀಯ ಸ್ಥಾನ Read More »

ಕರಾವಳಿ