snake bite

ಹಾವು ಕಚ್ಚಿ ವ್ಯಕ್ತಿ ಮೃತ್ಯು..!

(ನ್ಯೂಸ್ ಕಡಬ) newskadaba.com ಅ.24.  ಹಾವು ಕಡಿದು ವ್ಯಕ್ತಿಯೋರ್ವ ಮೃತಪಟ್ಟ ದಾರುಣ ಘಟನೆ ಮಂಜೇಶ್ವರದ ಮೀಯಪದವು ಎಂಬಲ್ಲಿ ನಡೆದಿದೆ. ಮೃತಪಟ್ಟವರನ್ನು ಮೀಯಪದವು ಪಳ್ಳತ್ತಡ್ಕ ನಿವಾಸಿ ಅಶೋಕ್ ಎಂದು ಗುರುತಿಸಲಾಗಿದೆ. ವೃತ್ತಿಯಲ್ಲಿ ಗಾರೆ ಕೆಲಸ ಮಾಡಿಕೊಂಡಿದ್ದ ಅಶೋಕ್ ಅವರಿಗೆ ಮನೆಯ ಸಿಟೌಟ್ ನಲ್ಲಿದ್ದ ಸಂದರ್ಭ ಹಾವು ಕಡಿತಕ್ಕೊಳಗಾಗಿ ಗಾಯಗೊಂಡಿದ್ದರು. ಬಳಿಕ ಅವರನ್ನು ಚಿಕಿತ್ಸೆಗಾಗಿ ಮಂಗಳೂರಿನ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆಗೆ ಸ್ಪಂದಿಸದೇ ಅವರು ಇಂದು ಬೆಳಗ್ಗೆ ಮೃತಪಟ್ಟಿದ್ದಾರೆ ಎನ್ನಲಾಗಿದೆ.

ಹಾವು ಕಚ್ಚಿ ವ್ಯಕ್ತಿ ಮೃತ್ಯು..! Read More »

ಕ್ರೈಮ್ ನ್ಯೂಸ್, ರಾಷ್ಟ್ರೀಯ ನ್ಯೂಸ್

15ರ ಬಾಲಕನಿಗೆ ಸರ್ಪಕಾಟ – ಎರಡು ತಿಂಗಳ ಅವಧಿಯಲ್ಲಿ 9 ಬಾರಿ ಕಚ್ಚಿದ ನಾಗಪ್ಪ

(ನ್ಯೂಸ್ ಕಡಬ) newskadaba.com ಕಲಬುರಗಿ, ಆ. 30. ಹಾವಿನ ದ್ವೇಷ ಹನ್ನೆರಡು ವರುಷ ಅನ್ನೋ ಮಾತು. ಅದರ ಪ್ರಕಾರ ನಾಗರಹಾವು ತನ್ನ ಸೇಡು ತೀರೋವರೆಗೂ ಬಿಡೋದಿಲ್ಲ ಅಂತಾರೆ. ಇದೇ ರೀತಿಯ ಘಟನೆಯೊಂದು ಕಲಬುರಗಿ ಜಿಲ್ಲೆಯ ಚಿತ್ತಾಪುರ ತಾಲೂಕಿನ ಹಲಕರ್ಟಿ ಗ್ರಾಮದಲ್ಲಿ ನಡೆದಿದೆ. ಹಲಕರ್ಟಿ ಗ್ರಾಮದ ವಿಜಯ್‌ ಕುಮಾರ್ ಹಾಗೂ ಉಷಾ ದಂಪತಿಯ ಪುತ್ರ 15 ವರ್ಷದ ಪ್ರಜ್ವಲ್‌ 9ನೇ ತರಗತಿಯಲ್ಲಿ ಓದುತ್ತಿದ್ದು, ಈತನಿಗೆ 2 ತಿಂಗಳ ಅವಧಿಯಲ್ಲಿ 9 ಬಾರಿ ನಾಗರಹಾವು ಕಚ್ಚಿದೆ. ಹಾವಿನ ಕಾಟದಿಂದ ಬೇಸತ್ತಿರುವ

15ರ ಬಾಲಕನಿಗೆ ಸರ್ಪಕಾಟ – ಎರಡು ತಿಂಗಳ ಅವಧಿಯಲ್ಲಿ 9 ಬಾರಿ ಕಚ್ಚಿದ ನಾಗಪ್ಪ Read More »

ಕರ್ನಾಟಕ, ಕ್ರೈಮ್ ನ್ಯೂಸ್

ಸ್ನೇಕ್ ಅಶೋಕ್ ಗೆ ಹಾವು ಕಡಿತ ➤ ಆಸ್ಪತ್ರೆಗೆ ದಾಖಲು

(ನ್ಯೂಸ್ ಕಡಬ) newskadaba.com ಬೆಳ್ತಂಗಡಿ, ಮಾ. 26. ಉರಗ ಸಂರಕ್ಷಕ ಸ್ನೇಕ್ ಅಶೋಕ್‌ಗೆ ನಾಗರ ಹಾವು ಕಡಿದು ಗಂಭೀರ ಗಾಯಗೊಂಡ ಘಟನೆ ಬೆಳ್ತಂಗಡಿಯಲ್ಲಿ ನಡೆದಿದೆ. ಸದ್ಯ ಸ್ನೇಕ್ ಅಶೋಕ್ ಮಂಗಳೂರಿನ ಖಾಸಗಿ ಆಸ್ಪತ್ರೆಯ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಬೆಳ್ತಂಗಡಿಯ ಲಾಯಿಲ ನಿವಾಸಿ ಸ್ನೇಕ್ ಅಶೋಕ್ ಕಳೆದ ರಾತ್ರಿ ಧರ್ಮಸ್ಥಳ ಸಮೀಪದ ಮನೆಯೊಂದರಲ್ಲಿ ನಾಗರಹಾವು ಹಿಡಿಯುತ್ತಿದ್ದ ವೇಳೆ ಹಾವು ಅವರ ಬಲಗಾಲಿಗೆ ಕಚ್ಚಿದೆ. ತಕ್ಷಣವೇ ಅವರನ್ನು ಬೆಳ್ತಂಗಡಿ ಆಸ್ಪತ್ರೆಗೆ ದಾಖಲಿಸಿ, ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ಸ್ನೇಕ್ ಅಶೋಕ್ ಗೆ ಹಾವು ಕಡಿತ ➤ ಆಸ್ಪತ್ರೆಗೆ ದಾಖಲು Read More »

ಕರಾವಳಿ, ಕ್ರೈಮ್ ನ್ಯೂಸ್

ಹಾವು ಕಡಿತ ➤ ಆಂಬ್ಯುಲೆನ್ಸ್ ಸಿಗದೇ ಓರ್ವ ಮೃತ್ಯು   

(ನ್ಯೂಸ್ ಕಡಬ) newskadaba.com ಹಾಸನ, ಡಿ. 24. ಅಂಗನವಾಡಿ ಕೇಂದ್ರದ ಆವರಣದಲ್ಲಿ ಹಾವು ಕಚ್ಚಿ ಬಾಲಕನೊಬ್ಬ ಮೃತಪಟ್ಟ ಘಟನೆ ಹಾಸನ ಜಿಲ್ಲೆಯ ಸಕಲೇಶಪುರ ತಾಲೂಕಿನ ದೊಡ್ಡಕಲ್ಲೂರು ಗ್ರಾಮದಲ್ಲಿ ಸಂಭವಿಸಿದೆ. ಮೃತ ಬಾಲಕನನ್ನು ದೊಡ್ಡಕಲ್ಲೂರು ಗ್ರಾಮದ ಯಶವಂತ್-ಗೌರಿ ಎಂಬುವವರ ಪುತ್ರ ರೋಷನ್ (4) ಎಂದು ಗುರುತಿಸಲಾಗಿದೆ. ಅಂಗನವಾಡಿ ಸಹಾಯಕಿ ಮಕ್ಕಳನ್ನು ಕರೆ ತರಲೆಂದು ಮನೆಗಳಿಗೆ ತರಳಿದ್ದ ವೇಳೆ ಈ ದುರ್ಘಟನೆ ಸಂಭವಿಸಿದೆ. ತಕ್ಷಣವೇ ವಿಷಯ ತಿಳಿದ ಕುಟುಂಬಸ್ಥರು ರೋಷನ್‍ ನನ್ನು ಹೆತ್ತೂರು ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಬೈಕ್‍ ನಲ್ಲಿ

ಹಾವು ಕಡಿತ ➤ ಆಂಬ್ಯುಲೆನ್ಸ್ ಸಿಗದೇ ಓರ್ವ ಮೃತ್ಯು    Read More »

ಕರ್ನಾಟಕ, ಕ್ರೈಮ್ ನ್ಯೂಸ್
Scroll to Top