ಮಾಜಿ ಸಿಎಂ ಎಸ್.ಎಂ. ಕೃಷ್ಣ ಅಳಿಯ ಸಿದ್ದಾರ್ಥ್ ಮಂಗಳೂರಿನಲ್ಲಿ ದಿಢೀರ್ ನಾಪತ್ತೆ…! ➤ ಉಳ್ಳಾಲ ನೇತ್ರಾವತಿ ನದಿಗೆ ಹಾರಿ ಆತ್ಮಹತ್ಯೆ ಮಾಡಿರುವ ಶಂಕೆ
(ನ್ಯೂಸ್ ಕಡಬ) newskadaba.com ಮಂಗಳೂರು, ಜು.30. ಮಾಜಿ ಮುಖ್ಯಮಂತ್ರಿ ಎಸ್. ಎಂ. ಕೃಷ್ಣ ಅಳಿಯ ವಿ.ಜಿ. ಸಿದ್ದಾರ್ಥ್ ಮಂಗಳೂರಿನ ನೇತ್ರಾವತಿ ಸೇತುವೆ ಬಳಿ ನಾಪತ್ತೆಯಾಗಿದ್ದು, ತೀವ್ರ ಶೊಧ ಕಾರ್ಯ ಮುಂದುವರಿದಿದೆ. ವಿ.ಜಿ. ಸಿದ್ದಾರ್ಥ್ ಸೋಮವಾರ ಸಂಜೆ ಮಂಗಳೂರಿನ ನೇತ್ರಾವತಿ ಸೇತುವೆ ಬಳಿಯಿಂದ ನಾಪತ್ತೆಯಾಗಿದ್ದರು. ಕಾರಿನ ಚಾಲಕ ಪೊಲೀಸರಿಗೆ ನೀಡಿದ ಮಾಹಿತಿಯಂತೆ ಅವರು ಬೆಂಗಳೂರಿನಿಂದ ಮಂಗಳೂರಿಗೆಂದು ಹೇಳಿ ಚಾಲಕ ಮತ್ತು ಇಬ್ಬರ ಜತೆಗೂಡಿ ಕಾರಿನಲ್ಲಿ ಹೊರಟಿದ್ದರು. ಪಂಪ್‌ವೆಲ್ ತಲುಪಿದಾಗ ಜತೆಗಿದ್ದ ಇಬ್ಬರು ಕಾರಿನಿಂದ ಇಳಿದಿದ್ದು, ಬಳಿಕ ಮಾಲಕನ ಸೂಚನೆಯಂತೆ […]

