Savanoor

ಸವಣೂರು  ವಲಯ ಕರ್ನಾಟಕ ಟೈಲರ್ ಅಸೋಸಿಯೇಶನ್ ಸಭೆ

ಸವಣೂರು : ಸವಣೂರು ವಲಯ ಕರ್ನಾಟಕ ಟೈಲರ್ ಅಸೋಸಿಯೇಶನ್ ವಾರ್ಷಿಕ ಸಭೆ ಸವಣೂರು ಅಶ್ವಿನಿ ಕಾಂಪ್ಲೆಕ್ಸ್‌ನಲ್ಲಿ ಬುಧವಾರ ಸಂಜೆ ನಡೆಯಿತು. ಸಭೆಯಲ್ಲಿ ಕರ್ನಾಟಕ ಟೈಲರ್ ಅಸೋಸಿಯೇಶನ್‌ನ ನಿಕಟಪೂರ್ವ ರಾಜ್ಯ ಕಾರ್ಯದರ್ಶಿರಘುನಾಥ ಅವರು,ಟೈಲರ್‌ಗಳಿಗೆ ಸಿಗುವ ವಿವಿಧ ಸವಲತ್ತು ಹಾಗೂ ಸರಕಾರದ ಯೋಜನೆಗಳನ್ನು ಹೇಗೆ ಜೋಡಿಸಿಕೊಂಡು ಸಂಘದ ಸದಸ್ಯರ ಬೆಳವಣಿಗೆಗೆ ಪೂರಕವಾಗಿ ಮಾಡುವ ಕುರಿತು ಮಾಹಿತಿ ನೀಡಿದರು. ಕೊಡಗು ನೆರೆಯಿಂದ ಸಂತ್ರಸ್ತರಾದ ಅಲ್ಲಿನ ಟೈಲರ್‌ಗಳಿಗೆ ಇಲ್ಲಿನ ಸಮಿತಿಯ ಮೂಲಕ ನೆರವು ನೀಡುವ ಕುರಿತು ವಿವರಿಸಿದರು. ಟೈಲರ್ ಅಸೋಸಿಯೇಶನ್ ಕ್ಷೇತ್ರ ಸಮಿತಿ […]

ಸವಣೂರು  ವಲಯ ಕರ್ನಾಟಕ ಟೈಲರ್ ಅಸೋಸಿಯೇಶನ್ ಸಭೆ Read More »

ಕರಾವಳಿ

ಅ.1 : ಕೃಷಿಕರಿಗೆ ಬ್ಯಾಂಕ್ ನೊಟೀಸ್ ವಿರೋಽಸಿ ಸವಣೂರಿನಲ್ಲಿ  ಪ್ರತಿಭಟನೆ

ಸವಣೂರು: ರಾಜ್ಯ ಸರಕಾರ ಸಾಲಮನ್ನಾ ಮಾಡಿ ರೈತರನ್ನು ಸಾಲಮುಕ್ತರನ್ನಾಗಿಸುವ ಪ್ರಕ್ರಿಯೆಯಲ್ಲಿರುವಾಗ ಜಿಲ್ಲೆಯಾದ್ಯಂತ ರಾಷ್ಟ್ರೀಕೃತ ಬ್ಯಾಂಕಿನ ಸಾಲ ಮರುಪಾವತಿಸಲು ಅಡಕೆ ಬೆಳೆಗಾರರಿಗೆ ಲೀಗಲ್ ನೊಟೀಸ್ ಕಳುಹಿಸಲಾಗುತ್ತಿದ್ದು ಇದನ್ನು ಖಂಡಿಸಿ  ಅ.1ರಂದು  ಸವಣೂರಿನಲ್ಲಿರುವ ರಾಷ್ಟ್ರೀಕೃತ ಬ್ಯಾಂಕಿಗೆ ಬೀಗ ಜಡಿದು ಪ್ರತಿಭಟನೆ ನಡೆಸಲಾಗುವುದು ಎಂದು ಕರ್ನಾಟಕ ರಾಜ್ಯ ರೈತ ಸಂಘ ಹಸಿರು ಸೇನೆಯ ಜಿಲ್ಲಾಧ್ಯಕ್ಷ ಶ್ರೀಧರ್ ಶೆಟ್ಟಿ   ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ನೊಟೀಸ್ ಮೂಲಕ ರೈತರನ್ನು  ಬೆದರಿಸುವ ತಂತ್ರ ಅನುಸರಿಸಲಾಗುತ್ತಿದೆ.ಎಚ್ಚರಿಕೆ ನೀಡುವ ಸಲುವಾಗಿ ಸವಣೂರಿನಲ್ಲಿ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದ್ದಾರೆ.

ಅ.1 : ಕೃಷಿಕರಿಗೆ ಬ್ಯಾಂಕ್ ನೊಟೀಸ್ ವಿರೋಽಸಿ ಸವಣೂರಿನಲ್ಲಿ  ಪ್ರತಿಭಟನೆ Read More »

ಕರಾವಳಿ, ಕರ್ನಾಟಕ

ಅಂಕತ್ತಡ್ಕ:ಶಾಲಾಭಿವೃದ್ಧಿ ಸಮಿತಿ ಸಭೆ,ನೂತನ ಸಮಿತಿ ರಚನೆ

ಸವಣೂರು : ಗ್ರಾ.ಪಂ.ವ್ಯಾಪ್ತಿಯ  ಅಂಕತ್ತಡ್ಕ ಹಿ.ಪ್ರಾ.ಶಾಲಾಭಿವೃದ್ಧಿ  ಸಮಿತಿಯ ಸಭೆಯು ಸವಣೂರು ಗ್ರಾ.ಪಂ.ಅಧ್ಯಕ್ಷೆ ಇಂದಿರಾ ಬಿ.ಕೆ ಅಧ್ಯಕ್ಷತೆಯಲ್ಲಿ ನಡೆಯಿತು. ಅಧ್ಯಕ್ಷರಾಗಿ ವಿಶ್ವನಾಥ ಪೂಜಾರಿ ,ಉಪಾಧ್ಯಕ್ಷರಾಗಿ  ಶಹನಾಝ್ ಬಾನು , ಸದಸ್ಯರಾಗಿ ಬಾಬು,ಚಿತ್ರಾವತಿ ಕೆ.ಎಂ,ಕುಸುಮಾ,ಸುಂದರಿ,ಗೀತಾ ಕೆ,ನಾರಾಯಣ ಪೂಜಾರಿ,ಎ.ಎಸ್.ರಝಾಕ್,ಲಲಿತಾ,ವಸಂತಿ,ರೇಷ್ಮಾ,ಶಬೀನಾ ಬಾನು,ಲತಾ.ಬಿ.ಕೆ,ನಳಿನಿ ರೈ,ಸುಮಲತಾ,ಕಿಟ್ಟಣ್ಣ ರೈ,ವಿಶ್ವನಾಥ  ಇವರನ್ನು ಆಯ್ಕೆ ಮಾಡಲಾಯಿತು. ನಾಮ ನಿರ್ದೇಶನ ಸದಸ್ಯರಾಗಿ ಗ್ರಾ.ಪಂ.ಉಪಾಧ್ಯಕ್ಷ ರವಿಕುಮಾರ್, ,ಶಿಕ್ಷಕ ಪ್ರತಿನಿಽಯಾಗಿ ಸಂದ್ಯಾ ಜಿ.ಕೆ,ವಿದ್ಯಾರ್ಥಿ ಪ್ರತಿನಿಽಯಾಗಿ ಆಯಿಷತುಲ್ ಫಾಯಿಝಾ,ಪದನಿಮಿತ್ತ ಸದಸ್ಯರಾಗಿ ಆರೋಗ್ಯ ಕಾರ್ಯಕರ್ತೆ ವಾಗೀಶ್ವರಿ, ಅಂಗನವಾಡಿ ಕಾರ್ಯಕರ್ತೆ ಪ್ರೇಮ,ಕಾರ್ಯದರ್ಶಿಯಾಗಿ ಶಾಲಾ ಮುಖ್ಯಗುರು ಶಾರದಾ ಆಯ್ಕೆಯಾದರು.  

ಅಂಕತ್ತಡ್ಕ:ಶಾಲಾಭಿವೃದ್ಧಿ ಸಮಿತಿ ಸಭೆ,ನೂತನ ಸಮಿತಿ ರಚನೆ Read More »

ಕರಾವಳಿ

ಸವಣೂರು : ಈಡೇರದ ಹೋಬಳಿ ಕೇಂದ್ರ ಬೇಡಿಕೆ

ಸವಣೂರು :ವೇಗವಾಗಿ ಬೆಳೆಯುತ್ತಿರುವ ಪುತ್ತೂರು ತಾಲೂಕಿನ ಸವಣೂರನ್ನು ಹೋಬಳಿ ಕೇಂದ್ರವನ್ನಾಗಿ ಮಾಡಬೇಕೆಂಬ ಕೂಗು ಕಳೆದ ಹಲವು ವರ್ಷಗಳಿಂದ ಸಾರ್ವಜನಿಕ ವಲಯದಿಂದ ಕೇಳಿ ಬರುತ್ತಿದೆ.ಇಲ್ಲಿನ ವಿಶೇಷತೆ ಎಂದರೆ ತಾಲೂಕು ಪುತ್ತೂರು ,ವಿಧಾನ ಸಭೆ ಸುಳ್ಯ ,ಕಂದಾಯ ಹೋಬಳಿ ಕಡಬ,ಪೊಲೀಸ್ ಠಾಣೆ ಬೆಳ್ಳಾರೆ ಹೀಗೆ ಸವಣೂರಿಗೆ ವಿವಿಧ ರೀತಿಯ ಸಂಪರ್ಕಗಳಿವೆ. ಸುಮಾರು ಮೂರು ದಶಕಗಳಿಂದ ಶ್ರವಣರ ಊರು ಸವಣೂರು ಎಂಬ ಪುಟ್ಟಹಳ್ಳಿ ವಿವಿಧ ಕಾರಣಗಳಿಂದ ಸವಣೂರು ವೇಗವಾಗಿ ಬೆಳೆಯುತ್ತಿದೆ.ಸರಕಾರಿ, ಖಾಸಗಿ ಶಿಕ್ಷಣ ಸಂಸ್ಥೆಗಳು,ಕಂದಾಯ ಕಛೇರಿ,ಗ್ರಾ.ಪಂ., ವಸತಿ ಸಮುಚ್ಚಯ ,ಗ್ರಾ.ಪಂ ,ಪೆಟ್ರೋಲ್

ಸವಣೂರು : ಈಡೇರದ ಹೋಬಳಿ ಕೇಂದ್ರ ಬೇಡಿಕೆ Read More »

ಕರಾವಳಿ

ಆ.12 : ಚೆನ್ನಾವರದಲ್ಲಿ ಆಟಿದ ಕೂಟ-ಜನಪದ ಗೊಬ್ಬುಲು

newskadaba ಸವಣೂರು : ನೆಹರು ಯುವ ಕೇಂದ್ರ ಮಂಗಳೂರು,ತಾಲೂಕು ಯುವಜನ ಒಕ್ಕೂಟ ಪುತ್ತೂರು ಇದರ ಸಹಯೋಗದಲ್ಲಿ ಚೆನ್ನಾವರ ಅಭ್ಯುದಯ ಯುವಕ ಮಂಡಲದ ಆಶ್ರಯದಲ್ಲಿ 2ನೇ ವರ್ಷದ ಆಟಿದ ಕೂಟ-ಜನಪದಗೊಬ್ಬುಲು ಕ್ರೀಡಾಕೂಟವು ಪಾಲ್ತಾಡಿ ಗ್ರಾಮದ ಚೆನ್ನಾವರ ಕೆಸರುಗದ್ದೆಯಲ್ಲಿ ಆ.12ರಂದು ನಡೆಯಲಿದೆ. ಕ್ರೀಡಾಕೂಟಕ್ಕೆ ಬೆಳಗ್ಗೆ ಚೆನ್ನಾವರ ಉಳ್ಳಾಕುಕುಲು ಸೇವಾ ಸಮಿತಿಯ ಅಧ್ಯಕ್ಷ ಪದ್ಮನಾಭ ಶೆಟ್ಟಿ ಚಾಲನೆ ನೀಡುವರು.ಅತಿಥಿಗಳಾಗಿ ಸಾಮಾಜಿಕ ಮುಂದಾಳು ಬಾಲಕೃಷ್ಣ ರೈ ,ಪ್ರಗತಿಪರಕೃಷಿಕ ನಾರಾಯಣ ರೈ ಚೆನ್ನಾವರ ಪಟ್ಟೆ , ಚೆನ್ನಾವರ ಶಾಲಾ ಮುಖ್ಯಗುರು ಶಾಂತಾಕುಮಾರಿ ಎನ್ ,ಸವಣೂರು

ಆ.12 : ಚೆನ್ನಾವರದಲ್ಲಿ ಆಟಿದ ಕೂಟ-ಜನಪದ ಗೊಬ್ಬುಲು Read More »

ಕರಾವಳಿ, ಕ್ರೀಡಾ ನ್ಯೂಸ್

 ಬಂಬಿಲ ಮಹಾದೇವಿ ದೇವಸ್ಥಾನದ ಜಾತ್ರೆಗೆ ಗೊನೆಮುಹೂರ್ತ

(ನ್ಯೂಸ್ ಕಡಬ) newskadaba.com ಸವಣೂರು, ಎ.18.ಪಾಲ್ತಾಡಿ ಗ್ರಾಮದ ಬಂಬಿಲ ಮಹಾದೇವಿ ದೇವಸ್ಥಾನದ ವರ್ಷಾವಧಿ ಜಾತ್ರೆಯ ಪೂರ್ವಭಾವಿಯಾಗಿ  ಗೊನೆಮುಹೂರ್ತ ನೆರವೇರಿಸಲಾಯಿತು. ಈ ಸಂದರ್ಭ ಮಹಾದೇವಿ ದೇವಸ್ಥಾನದ ಆಡಳಿತ ಸಮಿತಿ ಅಧ್ಯಕ್ಷ ,ಗ್ರಾ.ಪಂ.ಉಪಾಧ್ಯಕ್ಷ ಬಿ.ಕೆ.ರವಿಕುಮಾರ್,ಕಾರ್ಯದರ್ಶಿ ರವಿ.ಬಿ,ದೇವಸ್ಥಾನದ ಮೊಕ್ತೇಸರರಾದ ಬಲ್ಲು ಬಂಬಿಲ,ಆಡಳಿತ ಸಮಿತಿ ಸದಸ್ಯರಾದ ಬಾಬು ಬಂಬಿಲ,ಅಣ್ಣಪ್ಪ ,ಕುಮಾರ ಕುಂತೂರು,ಎಲುಂಬ,ಕುಶಾಲಪ್ಪ,ಸುಂದರ ಬಿ.ಯಂ,ಕಿನ್ನಿಯಪ್ಪ,ಹುಕ್ರ ಹಾಗೂ ಕ್ಷೇತ್ರದ ಭಕ್ತಾದಿಗಳು ಉಪಸ್ಥಿತರಿದ್ದರು.

 ಬಂಬಿಲ ಮಹಾದೇವಿ ದೇವಸ್ಥಾನದ ಜಾತ್ರೆಗೆ ಗೊನೆಮುಹೂರ್ತ Read More »

ಕರಾವಳಿ

ಪಾಲ್ತಾಡು: ವಿಷ್ಣುಮೂರ್ತಿ ದೈವದ ಒತ್ತೆಕೋಲ

(ನ್ಯೂಸ್ ಕಡಬ) newskadaba.com ಸವಣೂರು, ಮಾ.27. ಕೊಳ್ತಿಗೆ ಗ್ರಾಮದ ಪಾಲ್ತಾಡು ನಡುಮನೆ ವಿಷ್ಣುಮೂರ್ತಿ ದೈವಸ್ಥಾನದಲ್ಲಿ ವರ್ಷಾವಧಿ ಒತ್ತೆಕೋಲವು ನಡೆಯಿತು. ಕಾರ್ಯಕ್ರಮದಲ್ಲಿ ಬೆಳಿಗ್ಗೆ ದೈವಸ್ಥಾನದಲ್ಲಿ ಗಣಹೋಮ, ಶುದ್ದಿ ಕಲಶ, ಮಧ್ಯಾಹ್ನ ಕಲಶ ಪೂಜೆ ನಡೆಯಿತು.ಸಂಜೆ ನಡುಮನೆ ದೈವಸ್ಥಾನದಿಂದ ಭಂಡಾರ ತೆಗೆದು ರಾತ್ರಿ ಮೇಲೇರಿಗೆ ಅಗ್ನಿ ಸ್ಪರ್ಶ ಮಾಡಲಾಯಿತು. ನಂತರ ಸಾರ್ವಜನಿಕ ಅನ್ನಸಂತರ್ಪಣೆ ನಡೆಯಿತು. ಸುಮಾರು 5000 ಕ್ಕೂ ಮಿಕ್ಕಿ ಜನರು ಅನ್ನಪ್ರಸಾದ ಸ್ವೀಕರಿಸಿದರು.ಅನ್ನಸಂತರ್ಪಣೆಯ ಬಳಿಕ ಕುಳಿಚಟ್ಟು ನಡೆಯಿತು. ನಂತರ ಜಿಲ್ಲೆಯ ಪ್ರಸಿದ್ದ ಕಲಾವಿದರ ಕೂಡುವಿಕೆಯಲ್ಲಿ ಯಕ್ಷಗಾನ ಬಯಲಾಟ ಪ್ರದರ್ಶನಗೊಂಡಿತು. ಪ್ರಾತಃಕಾಲ

ಪಾಲ್ತಾಡು: ವಿಷ್ಣುಮೂರ್ತಿ ದೈವದ ಒತ್ತೆಕೋಲ Read More »

ಕರಾವಳಿ

 ಸವಣೂರು, ವಿದ್ಯಾರಶ್ಮಿ ಪ್ರಥಮ ದರ್ಜೆ ಕಾಲೇಜಿನ ವಾರ್ಷಿಕ ಕ್ರೀಡಾಕೂಟ

(ನ್ಯೂಸ್ ಕಡಬ) newskadaba.com ಸವಣೂರು, ಮಾ.24. ಸವಣೂರು ವಿದ್ಯಾರಶ್ಮಿ ಪ್ರಥಮ ದರ್ಜೆ ಕಾಲೇಜಿನ ವಾರ್ಷಿಕ ಕ್ರೀಡೋತ್ಸವವು ಮಾ.24 ರಂದು ನಡೆಯಿತು.  ಕ್ರೀಡಾಕೂಟವನ್ನು ಉದ್ಘಾಟಿಸಿದ ವಿದ್ಯಾರಶ್ಮಿ ಸಮೂಹ ಶಿಕ್ಷಣ ಸಂಸ್ಥೆಗಳ ಸಂಚಾಲಕರಾದ  ಶ್ರೀ. ಕೆ. ಸೀತಾರಾಮ ರೈ ಸವಣೂರು ಇವರು,  “ಇತ್ತೀಚಿನ ದಿನಗಳಲ್ಲಿ ಉನ್ನತ ಶಿಕ್ಷಣವನ್ನು ಪಡೆಯುವಂತಹ ಸಂದರ್ಭದಲ್ಲಿ ಪೋಷಕರ ಹಾಗೂ ವಿದ್ಯಾರ್ಥಿಗಳ ಒಲವು ಓದಿನ ಕಡೆಗೆ ಮಾತ್ರವಿದ್ದು, ಕ್ರೀಡೆಯ ಕಡೆಗೆ ಕಡಿಮೆಯಾಗುತ್ತಿದೆ.  ಪಠ್ಯ ಹಾಗೂ ಪಠ್ಯೇತರ ಚಟುವಟಿಕೆಗಳು ಒಂದೇ ನಾಣ್ಯದ ಎರಡು ಮುಖಗಳಾಗಿದ್ದು ಜೊತೆ ಜೊತೆಯಲ್ಲಿ ಸಾಗಬೇಕು,  ಕ್ರೀಡೆಯಲ್ಲಿ ಮುಂದಿರುವ ವಿದ್ಯಾರ್ಥಿಗಳೇ ಇಂದು

 ಸವಣೂರು, ವಿದ್ಯಾರಶ್ಮಿ ಪ್ರಥಮ ದರ್ಜೆ ಕಾಲೇಜಿನ ವಾರ್ಷಿಕ ಕ್ರೀಡಾಕೂಟ Read More »

ಕರಾವಳಿ

ಶಾಂತಿಮೊಗರು: ಬಹುಗ್ರಾಮ ಕುಡಿಯುವ ನೀರಿನ ಯೋಜನೆಗೆ ಶಿಲಾನ್ಯಾಸ

(ನ್ಯೂಸ್ ಕಡಬ) newskadaba.com ಸವಣೂರು, ಮಾ.24. ಬೆಳಂದೂರು, ಕಾಣಿಯೂರು, ಸವಣೂರು, ಆಲಂಕಾರು ಗ್ರಾಮ ಪಂಚಾಯಿತಿಯ ಬಹುತೇಕ ಎಲ್ಲ ಗ್ರಾಮಗಳಿಗೆ ಶುದ್ಧ ಕುಡಿಯುವ ನೀರನ್ನು ಒದಗಿಸುವ ನಿಟ್ಟಿನಲ್ಲಿ ಸರಕಾರದ ಮಹತ್ವಾಕಾಂಕ್ಷಿ ಯೋಜನೆಯಾದ ಬಹುಗ್ರಾಮ ಕುಡಿಯುವ ನೀರಿನ ಯೋಜನೆಯ ಶಾಂತಿಮೊಗರು ಘಟಕಕ್ಕೆ ಶನಿವಾರ ಸುಳ್ಯ ಶಾಸಕ ಎಸ್. ಅಂಗಾರ ಶಿಲಾನ್ಯಾಸಗೈದರು. ಸುಮಾರು 7.5 ಕೋಟಿ ರೂ. ವೆಚ್ಚದ ಈ ಯೋಜನೆಗೆ ಶಿಲಾನ್ಯಾಸಗೈದು ಬಳಿಕ ಶಾಸಕರು ಮಾತನಾಡಿದರು. ಶಾಂತಿಮೊಗರು ಶ್ರೀ ಸುಬ್ರಹ್ಮಣ್ಯೇಶ್ವರ ದೇವಸ್ಥಾನದ ಅರ್ಚಕ ರಮಾನಂದ ಭಟ್ ಪೂಜಾ ವಿದಿವಿಧಾನ ನೆರವೇರಿಸಿದರು. ಜಿಲ್ಲಾ ಪಂಚಾಯಿತಿ ಸದಸ್ಯರಾದ

ಶಾಂತಿಮೊಗರು: ಬಹುಗ್ರಾಮ ಕುಡಿಯುವ ನೀರಿನ ಯೋಜನೆಗೆ ಶಿಲಾನ್ಯಾಸ Read More »

ಕರಾವಳಿ

ಮಾ.25ಮತ್ತು 26ರಂದು ಸವಣೂರು ಮುಗೇರು ಜಾತ್ರೋತ್ಸವ

(ನ್ಯೂಸ್ ಕಡಬ) newskadaba.com ಸವಣೂರು, ಮಾ.24. ಸವಣೂರು ಗ್ರಾಮದ ಮುಗೇರು ಶ್ರೀ ಮಹಾವಿಷ್ಣು ಮೂರ್ತಿ ದೇವಸ್ಥಾನದ 4ನೇ ವಾರ್ಷಿಕ ಪ್ರತಿಷ್ಠಾ ವಾರ್ಷಿಕೋತ್ಸವ ಹಾಗೂ ಜಾತ್ರೋತ್ಸವವು ಬ್ರಹ್ಮಶ್ರೀ ನೀಲೇಶ್ವರ ದಾಮೋದರ ತಂತ್ರಿಗಳ  ನೇತೃತ್ವದಲ್ಲಿ ಮಾ.25 ಮತ್ತು 26ರಂದು ನಡೆಯಲಿದ್ದು  ಮಾ.25 ರಂದು  ಬೆಳಿಗ್ಗೆ ಭಕ್ತಾಧಿಗಳಿಂದ  ಹೊರೆಕಾಣಿಕೆ ಸಮರ್ಪಣೆ ಬಳಿಕ ಭಕ್ತಾಧಿಗಳಿಂದ ಕ್ಷೇತ್ರ ಸ್ವಚ್ಚತೆ, ಅಲಂಕಾರ ಸೇವೆ, ಸಂಜೆ ತಂತ್ರಿಗಳ ಆಗಮನ, ಪೂರ್ಣಕುಂಭ ಸ್ವಾಗತ, ಸಾಮೂಹಿಕ ಪ್ರಾರ್ಥನೆ, ಪುಣ್ಯಾಹ, ಪ್ರಸಾದ ಶುದ್ದಿ, ರಕ್ಷೋಘ್ನ ಹೋಮ, ವಾಸ್ತು ಹೋಮ, ವಾಸ್ತು ಬಲಿ, ರಾತ್ರಿ ಪೂಜೆ

ಮಾ.25ಮತ್ತು 26ರಂದು ಸವಣೂರು ಮುಗೇರು ಜಾತ್ರೋತ್ಸವ Read More »

ಕರಾವಳಿ
Scroll to Top