ಮಂಗಳೂರಿನಲ್ಲಿ ರಸ್ತೆ ಅಪಘಾತ – ಕಡಬದ ಯುವಕರಿಬ್ಬರು ಮೃತ್ಯು…!
(ನ್ಯೂಸ್ ಕಡಬ) newskadaba.com ಮಂಗಳೂರು, ಸೆ. 06. ನಿಯಂತ್ರಣ ತಪ್ಪಿದ ಬೈಕೊಂದು ಬಿದ್ದ ಪರಿಣಾಮ ಯುವಕರಿಬ್ಬರು ಮೃತಪಟ್ಟ ಘಟನೆ ಯೆಯ್ಯಾಡಿ ಸಮೀಪದ ಹರಿಪದವು ಎಂಬಲ್ಲಿ ನಡೆದಿದೆ. ಮೃತ ಯುವಕರನ್ನು ರಾಮಕುಂಜ ಗ್ರಾಮದ ಪಾದೆ ನಿವಾಸಿ ಚೆನ್ನಪ್ಪ ಕುಲಾಲ್ ಅವರ ಪುತ್ರ ಚೇತನ್(24) ಹಾಗೂ ಕೋಡಿಕಲ್ ನಿವಾಸಿ ಕಾಶೀನಾಥ್(17) ಎಂದು ಗುರುತಿಸಲಾಗಿದೆ. ಮೃತ ಸವಾರ ಚೇತನ್ ಲಾರಿಗೆ ಡಿಕ್ಕಿ ಹೊಡೆಯುವುದನ್ನು ತಪ್ಪಿಸಲು ಹೋಗಿ ನಿಯಂತ್ರಣ ತಪ್ಪಿ ಬೈಕ್ ಉರುಳಿಬಿದ್ದಿದೆ. ಇದರಿಂದ ಅವರಿಬ್ಬರು ರಸ್ತೆಗೆ ಎಸೆಯಲ್ಪಟ್ಟಿದ್ದು ಸ್ಥಳದಲ್ಲೇ ಕೊನೆಯುಸಿರೆಳೆದಿದ್ದಾರೆ ಎನ್ನಲಾಗಿದೆ.
ಮಂಗಳೂರಿನಲ್ಲಿ ರಸ್ತೆ ಅಪಘಾತ – ಕಡಬದ ಯುವಕರಿಬ್ಬರು ಮೃತ್ಯು…! Read More »
ಕರಾವಳಿ, ಕ್ರೈಮ್ ನ್ಯೂಸ್
