ಆಸ್ತಿ ಮಗನಿಗೆ ಬರೆದುಕೊಟ್ಟು ಬೀದಿಗೆ ಬಂದ ದೇಶದ ಶ್ರೀಮಂತ ವ್ಯಕ್ತಿ ► ಮನೆ ಬಾಡಿಗೆ ಕಟ್ಟಲು ಹೆಣಗಾಡುತ್ತಿರುವ ರೇಮಂಡ್ ಕಂಪನಿ ಮಾಲೀಕ
(ನ್ಯೂಸ್ ಕಡಬ) newskadaba.com ಮುಂಬೈ, ಆ.11. ಸಾವಿರಾರು ಕೋಟಿ ರುಪಾಯಿಗಳ ಒಡೆಯ, ದೇಶದ ಸಿರಿವಂತರಲ್ಲಿ ಒಬ್ಬರಾಗಿದ್ದ ರೇಮಂಡ್ ವಸ್ತ್ರ ಕಂಪನಿಯ ಮಾಲೀಕ ದೇಶದ ಅತಿ ಶ್ರೀಮಂತ ವ್ಯಕ್ತಿಗಳ ಪೈಕಿ ಒಬ್ಬರಾದ ವಿಜಯಪತ್ ಸಿಂಗಾನಿಯಾ ಅವರು ಇದೀಗ ‘ದಿವಾಳಿ’ಯಾಗಿ ಬೀದಿಗೆ ಬಂದಿದ್ದು, ಹಣಕಾಸು ನೆರವಿಗಾಗಿ ಮಗನ ವಿರುದ್ಧವೇ ಕೋರ್ಟ್ ಮೆಟ್ಟಿಲೇರಿದ್ದಾರೆ. ರೇಮಂಡ್ಸ್ ಲಿಮಿಟೆಡ್ ಎಂಬ ವಸ್ತ್ರೋದ್ಯಮ ಸ್ಥಾಪಿಸಿ ಪುರುಷರ ಮನೆ ಮಾತಾಗಿದ್ದ ರೇಮಂಡ್ ಕಂಪೆನಿಯ ಮಾಲೀಕ ಇಂದು ಮಗನ ನಿರ್ಲಕ್ಷದಿಂದ ಬಾಡಿಗೆ ಮನೆಯಲ್ಲಿ ವಾಸ ಮಾಡುವಂತಾಗಿದೆ ಎಂದು ಮುಂಬೈ ಮಿರರ್ […]

